ಬೆಳಗಾವಿ: ವಿಧಾನಸೌಧದೊಳಗೆ ಮತ್ತು ಹೊರಗೆ ಮಕ್ಕಳ ಕಲರವ ಕಂಡು ಬಂದಿದ್ದು, ಅಧಿವೇಶನವನ್ನು ಫುಲ್ ಎಂಜಾಯ್ ಮಾಡುತ್ತಿದ್ದಾರೆ. ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಕಾರ್ಯ ಕಲಾಪವನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳು ಉತ್ಸಾಹದಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ. ಅಧಿವೇಶನ ಆರಂಭವಾದ ದಿನದಿಂದಲೂ ವಿದ್ಯಾರ್ಥಿಗಳ ದಂಡು ಸೌಧಕ್ಕೆ ಲಗ್ಗೆ ಇಡುತ್ತಿದೆ. ಕಣ್ಣು ಹಾಯಿಸಿದಲ್ಲೆಲ್ಲಾ ಮಕ್ಕಳೇ ಕಾಣುತ್ತಿದ್ದಾರೆ. ಸೌಧ ಒಂದು ರೀತಿ ಶೈಕ್ಷಣಿಕ ಪ್ರವಾಸಿ ಕೇಂದ್ರವಾಗಿ ಮಾರ್ಪಟ್ಟಿದೆ. ಮಂಗಳವಾರ ಕೂಡ ನೂರಾರು ವಿದ್ಯಾರ್ಥಿಗಳು ಭೇಟಿ ನೀಡಿದ್ದರು.
ಶಿಕ್ಷಕ-ಶಿಕ್ಷಕಿಯರ ಕಣ್ಗಾವಲಿನಲ್ಲಿ ಶಿಸ್ತಿನ ಸಿಪಾಯಿಗಳಂತೆ ವಿವಿಧ ಶಾಲಾ-ಕಾಲೇಜುಗಳಿಂದ ಆಗಮಿಸಿದ್ದ ಮಕ್ಕಳು, ಸರತಿ ಸಾಲಿನಲ್ಲಿ ಸೌಧ ಪ್ರವೇಶಿಸುತ್ತಿದ್ದರು. ಅಲ್ಲದೇ ಸುವರ್ಣ ವಿಧಾನಸೌಧ, ಮಹಾತ್ಮ ಗಾಂಧೀಜಿ ಪ್ರತಿಮೆ, ವಿಶ್ವದ ಎರಡನೇ ದೊಡ್ಡ ರಾಷ್ಟ್ರಧ್ವಜ, ರಾಣಿ ಚನ್ನಮ್ಮ-ಸಂಗೊಳ್ಳಿ ರಾಯಣ್ಣ-ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ, ಕಾರಂಜಿ ಪಾರ್ಕ್ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರು |ಉದ್ಯೋಗ ಹಕ್ಕು ಮತ್ತು ಒಕ್ಕೂಟ ವ್ಯವಸ್ಥೆ ಮೇಲೆ VB GRAM ಮಸೂದೆಗೆ ಡಿವೈಎಫ್ಐ ವಿರೋಧ
ಸದನದ ಸಮೀಪದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಸಂಪುಟದ ಸಚಿವರು, ಶಾಸಕರನ್ನು ನೋಡಿ ಮಕ್ಕಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿನಿತ್ಯ 500-650 ವಿದ್ಯಾರ್ಥಿಗಳು ಕಲಾಪ ವೀಕ್ಷಣೆ ಮಾಡುತ್ತಿರುವುದು ವಿಶೇಷ. ಮೊದಲ ದಿನದಿಂದ ಹಿಡಿದು ಈವರೆಗೆ 4 ಸಾವಿರಕ್ಕೂ ಅಧಿಕ ಮಕ್ಕಳು ಅಧಿವೇಶನಕ್ಕೆ ಸಾಕ್ಷಿಯಾಗಿದ್ದು ಗಮನಾರ್ಹದ ಸಂಗತಿ.ನಾನು ದೊಡ್ಡ ಅಧಿಕಾರಿ ಆಗುವ ಆಸೆ ಮೂಡಿತು: ಬರುವ ದಿನಗಳಲ್ಲಿ ನಾನು ದೊಡ್ಡ ಅಧಿಕಾರಿಯಾಗಿ ಬಂದು ನಾಡಿಗೆ ನಮ್ಮದೇಯಾದ ಕೊಡುಗೆ ನೀಡುವ ಅಶಯ ಮೂಡಿತು ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇದೇ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಖಾನಾಪುರದ ಮರಾಠ ಮಂಡಳ ಪಿಯು ಕಾಲೇಜು ವಿದ್ಯಾರ್ಥಿನಿ ಆಶಾ ಬಾಳಪ್ಪ ಆರೇರ, ಸದನದಲ್ಲಿ ಯಾವ ರೀತಿ ಚರ್ಚೆ ನಡೆಯುತ್ತದೆ? ಶಾಸಕರು ಯಾವ ರೀತಿ ಪ್ರಶ್ನೆ ಕೇಳುತ್ತಾರೆ? ಅದಕ್ಕೆ ಸಚಿವರು ಹೇಗೆ ಉತ್ತರ ನೀಡುತ್ತಾರೆ ಎಂಬುದನ್ನು ನೋಡಿದೆವು. ಇಂದು ವಿದ್ಯಾರ್ಥಿನಿಯಾಗಿ ಅಧಿವೇಶನಕ್ಕೆ ಬಂದಿದ್ದೇನೆ ಎಂದರು.
ಬೊಮ್ಮಾಯಿ ನನ್ನ ನೆಚ್ಚಿನ ನಾಯಕ: ಜನಪ್ರತಿನಿಧಿಗಳಿಗೆ ಸಿಗುವ ಗೌರವ ನೋಡಿ ನಾನು ಇವರಂತೆ ಬೆಳೆಯಬೇಕು. ಹುಕ್ಕೇರಿ ತಾಲೂಕಿನ ಶಿರಗಾಂವ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಈಶ್ವರಿ ಗುಗ್ಗರಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಸೇರಿ ಸಚಿವರು, ಶಾಸಕರನ್ನು ಪ್ರತ್ಯಕ್ಷವಾಗಿ ನೋಡಿದೆವು. ನಮಗೆ ತುಂಬಾ ಖುಷಿ ಆಯಿತು. ಇದೇ ರೀತಿ ಪ್ರತಿವರ್ಷ ಹೆಚ್ಚು ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ನನ್ನ ನೆಚ್ಚಿನ ರಾಜಕಾರಣಿ ಎಂದು ಹೇಳಿದರು.
ನಾನೂ ಶಾಸಕಿ ಆಗುವೆ: ನಮ್ಮ ಶಾಸಕರಾದ ಮಹಾಂತೇಶ ಕೌಜಲಗಿ ಅವರನ್ನು ಭೇಟಿ ಆದೆವು. ಅವರ ಮಾತು ಆಲಿಸಿದೆವು. ಅವರನ್ನೆಲ್ಲಾ ನೋಡಿ ನನಗೂ ಶಾಸಕಿ ಆಗುವ ಅಸೆ ಬಂದಿತು ಎಂದರು. ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಎಂ.ಆರ್.ಪಾಟೀಲ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಜ್ಯೋತಿ ಆವೋಜಿ ಮಾತನಾಡಿ, ಸ್ಪೀಕರ್ ಯು.ಟಿ.ಖಾದರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಹಳ ಹತ್ತಿರದಿಂದ ನೋಡಿದೆವು.
ಅಧಿವೇಶನ ನೋಡಿ ಖುಷಿ ಆಯಿತು: ನಮ್ಮ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೋಡಿದೆವು. ನಿಪ್ಪಾಣಿ ತಾಲೂಕಿನ ಬೇನಾಡಿ ಗ್ರಾಮದ ಆನಂದರಾವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕೀರ್ತಿ ಮಗದುಮ್ಮ, ಸದನದಲ್ಲಿ ಏನೇನೋ ವಿಷಯ ಚರ್ಚೆ ಮಾಡುತ್ತಿದ್ದರು. ಅಧಿವೇಶನ ನೋಡಿ ನಮಗೆ ತುಂಬಾ ಖುಷಿ ಆಯಿತು ಎಂದು ಸಂತಸ ಹಂಚಿಕೊಂಡರು.
Beta feature
