ದೇಶಾದ್ಯಂತ ಸದ್ದು ಮಾಡುತ್ತಿದೆ ʼಯುವರತ್ನʼ

ಬೆಂಗಳೂರು : ಹಲವು ಚಿತ್ರಮಂದಿರಗಳಲ್ಲಿ ಬೆಳಗ್ಗೆಯೇ ಯುವರತ್ನ ಸಿನಿಮಾ ಅಬ್ಬರಿಸುತ್ತಿದೆ. ಮುಂಜಾನೆ 6 ಗಂಟೆಗೆ ಶೋ ಶುರುವಾಗಿದೆ. ಎಲ್ಲಾ ಕಡೆಗಳಲ್ಲಿ ಪುನೀತ್​ ಕಟೌಟ್​ಗಳು ರಾರಾಜಿಸುತ್ತಿವೆ.

ಪುನೀತ್‌ ರಾಜ್‌ ಕುಮಾರ್‌ ಅಭಿನಯದ ಬಹನಿರೀಕ್ಷಿತ ಸಿನಿಮಾ ʼಯುವರತ್ನʼ ಸಿನಿಮಾ ಮೊದಲ ಶೋ ನಲ್ಲೆ ಅದ್ದೂರಿಯಾಗಿ ತೆರೆಕಂಡಿದೆ. ಯುವರತ್ನನ ಆರ್ಭಟಕ್ಕೆ ಅಭಿಮಾನಿಗಳು ಪುಲ್‌ ಫಿದಾ ಆಗಿದ್ದಾರೆ. ಇಂದು ಮುಂಜಾನೆ 6 ಗಂಟೆಗೆ ಯುವರತ್ನ ಸಿನಿಮಾ ದೇಶಾದ್ಯಂತ ಬಿಡುಗಡೆಯಾಗಿದ್ದು, ಎಲ್ಲಾ ಕಡೆಗಳಲ್ಲಿ ಪುನೀತ್​ರಾಜ್‌ ಕಟೌಟ್​ಗಳು ರಾರಾಜಿಸುತ್ತಿವೆ.

ಇದೇ ಮೊದಲ ಬಾರಿಗೆ 600ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ದೇಶಗಳಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಕೂಡ ಯುವರತ್ನ ಧೂಳೆಬ್ಬಿಸಿದೆ. ರಾಜ್ಯದಲ್ಲಿ ಒಟ್ಟು 400 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲ ತೆಲುಗಿನಲ್ಲಿಯೂ ಡಬ್‌ ಆಗಿದ್ದು, ಆಂಧ್ರ ಮತ್ತು ತೆಲಂಗಾಣದ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.

ಎರಡು ವರ್ಷಗಳ ಬಳಿಕ ಪುನೀತ್‌ ರಾಜ್‌ ಕುಮಾರ್ ಸಿನಿಮಾ ಅದ್ದೂರಿಯಾಗಿ ಬಿಡುಗಡೆಗೊಳ್ಳುತ್ತಿದ್ದಂತೆ ಸಿನಿಮಾ ನೋಡಿದ ಅಭಿಮಾನಿಗಳು ಕಿಂಗ್‌ ಈಸ್‌ ಬ್ಯಾಂಕ್‌ ಎಂದು ಸಾಲು ಸಾಲು ಟ್ವೀಟ್‌ ಮಾಡಿದ್ದು, ತಮ್ಮ ನೆಚ್ಚಿನ ನಟನನ್ನು ಮತ್ತು ನಿರ್ದೇಶಕನನ್ನು ಹಾಡಿಹೊಗಳಿದ್ದಾರೆ.

ಪುನೀತ್​ ರಾಜ್​ಕುಮಾರ್​ ಮತ್ತು ನಿರ್ದೇಶಕ ಸಂತೋಷ ಆನಂದ್‌ರಾಮ್‌ ಅವರ ‘ರಾಜಕುಮಾರ’ ಸಿನಿಮಾ ಅದ್ದೂರಿ ಯಶಸ್ಸು ಕಂಡಬಳಿಕ, ಇವರ ಕಾಂಬಿನೇಶನ್‌ ವರ್ಕೌಟ್‌ ಆಗಿದೆ. ಇವರ ಎರಡನೇ ಸಿನಿಮಾ ಯುವರತ್ನ ಸಿನಿಮಾ ಮೂಡಿಬಂದಿದ್ದು, ಭಾರಿ ಯಶಸ್ಸಿನಂತ ಹೆಜ್ಜೆಹಾಕುತ್ತಿದೆ.‌

ಯುರತ್ನ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಅವರು ಕಾಲೇಜು ವಿದ್ಯಾರ್ಥಿ ಆಗಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಹಲವು ವರ್ಷಗಳ ಬಳಿಕ ಪುನೀತ್‌ ಮತ್ತೆ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಪುನೀತ್​ಗೆ ನಾಯಕಿಯಾಗಿ ಸಾಯೇಷಾ ನಟಿಸಿದ್ದಾರೆ. ಪ್ರಕಾಶ್​ ರೈ, ಡಾಲಿ ಧನಂಜಯ, ಸೋನೂ ಗೌಡ, ದಿಗಂತ್​, ರಾಧಿಕಾ ಶರತ್​ ಕುಮಾರ್​, ಸಾಯಿಕುಮಾರ್​ ಮುಂತಾದ ಖ್ಯಾತ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಎಸ್​. ಥಮನ್​ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಪಾಠಶಾಲಾ..’ ಹಾಡು ಗಮನ ಸೆಳೆದಿದೆ.

Donate Janashakthi Media

Leave a Reply

Your email address will not be published. Required fields are marked *