ದೇಶದಲ್ಲಿ ಮತ್ತೆ ಸ್ಪೋಟಗೊಂಡ ಕೊರೊನಾ

ನವದೆಹಲಿ : ಕಳೆದೊಂದು ವಾರದಲ್ಲಿ ಇಳಿಮುಖ ಕಂಡಿದ್ದ ಕೊರೊನಾ ಸೋಂಕು ಇದೀಗ ಏಕಾಏಕಿಯಾಗಿ ಏರಿಕೆ ಕಂಡಿದೆ. ವಿಜಯದಶಮಿಯ ದಿನವಾದ ನಿನ್ನೆ ಒಂದೇ ದಿನದಲ್ಲಿ 36,469 ಜನರನ್ನ ಕೊರೊನಾ ಸೋಂಕು  ಬಾಧಿಸಿದೆ. ಆ ಮೂಲಕ ಮತ್ತೆ ಏರಿಕೆಯ ಗ್ರಾಫ್ ಮೇಲ್ಮುಖ ಚಲನೆ ಕಂಡಿದೆ.

ಕಳೆದ 24 ಗಂಟೆಯಲ್ಲಿ ಏರಿಕೆ ಕಂಡಿರುವ ಸೋಂಕಿನ ಕಾರಣದಿಂದ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 79,46,429ಕ್ಕೆ ಏರಿಕೆಯಾಗಿದೆ.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಂಕಿನ ವಿಚಾರದಲ್ಲಿ ನೀಡಿದ ಮಾಹಿತಿ ಪ್ರಕಾರ ನಿನ್ನೇ ಒಂದೇ ದಿನ ಸೋಂಕಿನಿಂದಾಗಿ 488 ಜನರು ಸಾವನ್ನಪ್ಪಿದ್ದಾರೆ. ಈ ಸಾವಿನ ಲೆಕ್ಕಾಚಾರ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1,19,502ಕ್ಕೆ ಏರಿಸಿದೆ.

ಇದನ್ನು ಓದಲು ಲಿಂಕ್ ಕ್ಲಿಕ್ ಮಾಡಿ : ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಹೆಚ್ಚಳ : ಆಮೆಗತಿಯಲ್ಲಿ ಸರ್ಕಾರದ ಕ್ರಮ

ಅಲ್ಲದೆ ದೇಶದಲ್ಲಿ ಒಂದೇ ದಿನ 63,842 ಸೋಂಕಿತರು ಕೊರೊನಾ ದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ದೇಶದಲ್ಲಿ ಒಟ್ಟಾರೆ 6,25,857 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಈವರೆಗೆ ದೇಶದಲ್ಲಿ 72,01,070 ಸೋಂಕಿತರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.

Donate Janashakthi Media

Leave a Reply

Your email address will not be published. Required fields are marked *