ಸಿ.ಟಿ.ರವಿ ಅವಾಚ್ಯ ಪದ : ‘CID’ ಗೆ ವಿಡಿಯೋ ಲಭ್ಯ!

ಬೆಂಗಳೂರು : ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅಶ್ಲೀಲ ಪದ ಬಳಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರು ಅಶ್ಲೀಲ ಪದ ಬಳಸಿದ್ದ ವಿಡಿಯೋ ಒಂದು ಇದೀಗ ಸಿಐಡಿ ಅಧಿಕಾರಿಗಳಿಗೆ ಲಭ್ಯವಾಗಿದೆ.

ಈ ವಿಡಿಯೋದಲ್ಲಿ ಸಿ.ಟಿ.ರವಿ ಅವರು 7 ಬಾರಿ ಹೆಬ್ಬಾಳ್ವ‌ರ್ ಅವರಿಗೆ ನಿಂದಿಸಿರುವುದು ಕೇಳಿಬರುತ್ತದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಸಿಟಿ ರವಿ ನಿಂದನೆ ಕುರಿತು ಖಾಸಗಿ ವಾಹಿನಿಗಳಲ್ಲಿ ವಿಡಿಯೋ ದಾಖಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಅದನ್ನು ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯ ವಿಲ್ಲ ಎಂದು ಸಭಾಪತಿ ಹೇಳುತ್ತಿದ್ದರು. ಆದರೆ ಸದನದಲ್ಲಿನ ಸರ್ಕಾರಿ ಟೀವಿಯಲ್ಲಿನ ವಿಡಿಯೋವೇ ಇದೀಗ ಸಿಕ್ಕಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಅವರು ಧ್ವನಿ ಪರೀಕ್ಷೆಗೊಳಪಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.

ಈವರೆಗೆ ತಾನು ಸಚಿವೆಯನ್ನು ಉದ್ದೇಶಿಸಿ ‘ಪ್ರಸ್ಟೇಟ್’ ಎಂದು ಹೇಳಿದ್ದೇನೆ ಯೇ ಹೊರತು ನಿಂದಿಸಿಲ್ಲ ಎಂದು ವಾದಿಸಿದ್ದ ರವಿ ಅವರು, ತಾನು ನಿಂದಿಸಿದ್ದಕ್ಕೆ ಅಸಲಿ ವಿಡಿಯೋವೇ ಇಲ್ಲ ಎಂದು ಹೇಳಿದರು. ಇನ್ನೊಂದೆಡೆ ರವಿ ಅವರು ನಿಂದಿಸಿದ ಕುರಿತು ಯಾವುದೇ ಆಡಿಯೋ-ವಿಡಿಯೋ ಇಲ್ಲವೆಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕೂಡ ತಿಳಿಸಿದ್ದರು. ಈಗ ಅಸಲಿ ವಿಡಿಯೋ ಸಿಐಡಿಗೆ ಲಭ್ಯವಾಗಿರುವುದು ಭಾರೀ ಕುತೂಹಲ ಕೆರಳಿಸಿದೆ.

ಬೆಳಗಾವಿ ಅಧಿವೇಶನದ ವೇಳೆ ಮೇಲ್ಮನೆ ಯಲ್ಲಿ ನಡೆದಿದ್ದ ಘಟನಾವಳಿಗಳ ಕುರಿತು ವಿಡಿಯೋ-ಆಡಿಯೋ ದಾಖಲೆನೀಡುವಂತೆ ರಾಜ್ಯ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಗೆ (DAPR) ಸಿಐಡಿ ಮನವಿ ಮಾಡಿತ್ತು.ಈ ಕೋರಿಕೆಗೆ ಸಮ್ಮತಿಸಿದ ಡಿಎಪಿಆರ್, ಸಿಐಡಿಗೆ ಸದನದಲ್ಲಿ ನಿಂದನೆ ಕೃತ್ಯ ನಡೆದ ವೇಳೆ ಚಿತ್ರೀಕರಿಸಿದ್ದ 4 ಗಂಟೆ ವಿಡಿಯೋ ಸಲ್ಲಿಸಿದೆ. ಇದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಿಐಡಿ `ರವಾನಿಸಿದ್ದು, ಆ ವಿಡಿಯೋದಲ್ಲಿ ಕೇಳಿ ಬರುವ ದನಿ ರವಿ ಅವರದ್ದೇ, ಅಲ್ಲವೇ ಎಂದು ಖಚಿತಪಡಿಸಿ ಕೊಳ್ಳಲು ನಿರ್ಧರಿಸಿದೆ. ಇದಕ್ಕಾಗಿ ಸಿಐಡಿ ಅಧಿಕಾರಿಗಳು ಧ್ವನಿ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಬೆಳಗಾವಿ ಅಧಿವೇಶನದ ವೇಳೆ ಡಿ.19 ರಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಯ‌ರ್ ಅವರಿಗೆ ಅಸಂಸದೀಯ ಪದ ಬಳಸಿ ರವಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಹಿರೇ ಬಾಗೇವಾಡಿ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು. ಬಳಿಕ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಐಡಿ, ಆ ದಿನ ನಡೆ ದಿದ್ದ ಘಟನಾವಳಿ ಕುರಿತ ವಿಡಿಯೋ ನೀಡು ವಂತೆ ಡಿಎಪಿಆರ್‌ಗೆ ಪತ್ರ ಬರೆದಿತ್ತು. ಈ ಕೋರಿಕೆ ಹಿನ್ನೆಲೆಯಲ್ಲಿ ಸಿಐಡಿಗೆ ಡಿಎಪಿಆ‌ರ್ ಇಲಾಖೆ ವಿಡಿಯೋ ಸಲ್ಲಿಸಿದೆ.

Donate Janashakthi Media

Leave a Reply

Your email address will not be published. Required fields are marked *