ಇಡುಕ್ಕಿ : ಉಬ್ಬು ಹಲ್ಲು ಕಾರಣದ ನೆಪವೊಡ್ಡಿ ಬುಡಕಟ್ಟು ಸಮುದಾಯದ ಯುವನೊಬ್ಬನಿಗೆ ಸರ್ಕಾರಿ ಕೆಲಸ ನೀಡಲಾಗುವುದಿಲ್ಲ ಎಂದು ವರದಿಯಾಗಿದ್ದು. ಈತನ ಸರ್ಕಾರಿ ಉದ್ಯೋಗದಿಂದ ವಂಚನೆಗೊಂಡಿರುವ ಪ್ರಕರಣ ನಡೆದಿದೆ. ಈ ಸಂಬಂಧ ಎಸ್‌ಸಿ-ಎಸ್ಟಿ ಆಯೋಗ ಪ್ರಕರಣವನ್ನು ದಾಖಲು ಮಾಡಿಕೊಂಡು ವಾರದೊಳಗೆ ಉತ್ತರಿಸುವಂತೆ ಸರ್ಕಾರಿ ಹಿರಿಯ ಅಧಿಕಾರಿಗಳಿಗೆ ಸೂಚಿಸಿದೆ.
ಪಾಲಕ್ಕಾಡ್ ಜಿಲ್ಲೆ ಅಟ್ಟಪ್ಪಾಡಿ ತಾಲೂಕು ಪುತ್ತೂರು ಪಂಚಾಯಿತಿ ನಿವಾಸಿ ಮುತ್ತು ಉದ್ಯೋಗದಿಂದ ವಂಚಿರಾದವರು. ಮುತ್ತು ಎಂಬ ಬುಡಕಟ್ಟು ಯುವಕ ಕೇವಲ ಗಿರಿಜನರಿಗಾಗಿ ಮಾತ್ರ ಮೀಸಲಾಗಿದ್ದ, ಅರಣ್ಯ ಇಲಾಖೆಯ ಗಸ್ತು ಅಧಿಕಾರಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ್ದನು. ಸೆಪ್ಟೆಂಬರ್‌ನಲ್ಲಿ ನಡೆದ ಪಿಎಸ್‌ಸಿ ವಿಶೇಷ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು ಮತ್ತು ನಂತರ ದೈಹಿಕ ದಕ್ಷತೆ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದರು.
ಮುತ್ತು ಅವರಿಗೆ ಉಬ್ಬು ಹಲ್ಲು ಇರುವುದಾಗಿ ಸರ್ಕಾರಿ ವೈದ್ಯರು ವೈದ್ಯಕೀಯ ಪ್ರಮಾಣ ಪತ್ರ ನೀಡಿದ ಕಾರಣ ಸರ್ಕಾರಿ ಕೆಲಸವನ್ನು ನಿರಾಕರಣೆ ಮಾಡಿರುವ ಘಟನೆ ನಡೆದಿದೆ. ಸಂದರ್ಶನಕ್ಕೆ ಅಧಿಸೂಚನೆ ಬರದೇ ಇರುವುದನ್ನು ಮನಗಂಡ ಮುತ್ತು ಪಾಲಕ್ಕಾಡ್ ಜಿಲ್ಲಾ ಪಿಎಸ್‌ಸಿ ಕಚೇರಿಗೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ ವೈದ್ಯಕೀಯ ಪ್ರಮಾಣ ಪತ್ರದಲ್ಲಿ ಹಲ್ಲು ಹೊರಚಾಚಿರುವುದಾಗಿ ನಮೂದಿಸಿದ್ದರಿಂದ ಕೆಲಸ ಲಭಿಸದಿರುವುದು ತಿಳಿದುಬಂದಿದೆ.
ಪಿಎಸ್‌ಸಿ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, ಇಂತಹ ಅಭ್ಯರ್ಥಿಗಳಿಗೆ ಸರಕಾರಿ ಉದ್ಯೋಗವನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ ಕೇರಳ ಸಾರ್ವಜನಿಕ ಸೇವಾ ಕಾಯ್ದೆಯ ನಿಬಂಧನೆಗಳಿಗೆ (ವಿಶೇಷ ನಿಯಮಗಳು) ತಿದ್ದುಪಡಿಯ ಅಗತ್ಯವಿದೆ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಪಿಎಸ್‌ಸಿಯೇ ನಿಬಂಧನೆಗಳನ್ನು ನಿಗದಿಪಡಿಸಿದ್ದು, ಈ ಪ್ರಕರಣದಲ್ಲಿ ಅರಣ್ಯ ಇಲಾಖೆ ಅಸಹಾಯಕವಾಗಿದೆ ಎಂದು ಸಚಿವ ಎ.ಕೆ.ಸಶೀಂದ್ರನ್ ಪ್ರತಿಕ್ರಿಯೆ ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪರಿಶಿಷ್ಟ ಜಾತಿ(ಎಸ್‌ಸಿ)-ಪರಿಶಿಷ್ಟ ಪಂಗಡ(ಎಸ್‌ಟಿ) ಆಯೋಗವು ಅರಣ್ಯ ಮತ್ತು ವನ್ಯಜೀವಿ ಪ್ರಧಾನ ಕಾರ್ಯದರ್ಶಿ, ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಮತ್ತು ಪಿಎಸ್‌ಸಿ ಕಾರ್ಯದರ್ಶಿ ಪತ್ರ ಬರೆದು
“ಮುತ್ತು, ಚಿಕ್ಕವನಿದ್ದಾಗ ಬಿದ್ದು ಹಲ್ಲಿಗೆ ಹಾನಿಯಾಗಿತ್ತು. ಹಲ್ಲಿನ ಸಮಸ್ಯೆ ನಿವಾರಣೆಗೆ ಸುಮಾರು ರೂ. 18,000 ಬೇಕಾಗಿದ್ದು ಹಣವಿಲ್ಲದ ಕಾರಣ ಸಮಸ್ಯೆ ಪರಿಹರಿಸಲಾಗಿಲ್ಲ” ಎಂದು ಮುತ್ತುವಿನ ಪೋಷಕರು ತಿಳಿಸಿದ್ದಾರೆ.