‘ಮನೆ ಕೆಡವಿ ಪತ್ರಿಕೆಯಲ್ಲಿ ಪ್ರಕಟಿಸುವುದು ಫ್ಯಾಶನ್ ಆಗಿದೆ’ – ಮುನ್ಸಿಪಲ್ ಕಾರ್ಪೊರೇಷನ್‌ ವಿರುದ್ಧ ಹೈಕೋರ್ಟ್‌ ಆಕ್ರೋಶ

ಭೋಪಾಲ್: ಉಜ್ಜಯಿನಿ ಮುನ್ಸಿಪಲ್ ಕಾರ್ಪೊರೇಷನ್ (ಯುಎಂಸಿ) ತಮ್ಮ ಮನೆಗಳನ್ನು ಕಾನೂನು ಬಾಹಿರವಾಗಿ ಕೆಡವಿದ್ದಾರೆ ಎಂದು ದೂರಿದ್ದ ಇಬ್ಬರು ಅರ್ಜಿದಾರರಿಗೆ ಮಧ್ಯಪ್ರದೇಶ ಹೈಕೋರ್ಟ್‌ ತಲಾ 1 ಲಕ್ಷರೂಗಳನ್ನು ಪರಿಹಾರ ನೀಡಿದ್ದು, “ಸ್ಥಳೀಯ ಸಂಸ್ಥೆಗಳು ಯಾವುದೆ ನೈಸರ್ಗಿಕ ನಿಯಮಗಳನ್ನು ಅನುಸರಿಸದೆ ಮನೆಯನ್ನು ಕೆಡವಿ ಪತ್ರಿಕೆಯಲ್ಲಿ ಪ್ರಕಟಿಸುವುದು ಈಗ ಫ್ಯಾಶನ್ ಆಗಿದೆ” ಎಂದು ಆದೇಶದ ನ್ಯಾಯಮೂರ್ತಿ ವಿವೇಕ್ ರುಷಿಯಾ ಅವರು ಹೇಳಿದ್ದಾರೆ.

ಇಷ್ಟೆ ಅಲ್ಲದೆ, ಮನೆಗಳನ್ನು ಕೆಡವುವಂತೆ ನಕಲಿ ಪಂಚನಾಮವನ್ನು ಸಿದ್ಧಪಡಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಉಜ್ಜಯಿನಿ ಮುನ್ಸಿಪಲ್ ಕಾರ್ಪೊರೇಷನ್ ಆಯುಕ್ತರಿಗೆ ನ್ಯಾಯಾಲಯ ಸೂಚಿಸಿದೆ. ಹೆಚ್ಚುವರಿಯಾಗಿ, ಸಿವಿಲ್ ನ್ಯಾಯಾಲಯದ ಮೂಲಕ ತಮ್ಮ ನಷ್ಟಕ್ಕೆ ಹೆಚ್ಚಿನ ಪರಿಹಾರವನ್ನು ಪಡೆಯಲು ಅರ್ಜಿದಾರರಿಗೆ ಆಯ್ಕೆಯನ್ನು ನೀಡಿದೆ.

ಇದನ್ನೂ ಓದಿ: ಉತ್ತರಾಖಂಡ | ಮಸೀದಿ & ಮದ್ರಸಾ ಧ್ವಂಸದ ನಂತರ ಭುಗಿಲೆದ್ದ ಹಿಂಸಾಚಾರ; 5 ಸಾವು

2023 ರ ಜನವರಿ 6 ರಂದು ರಾಹುಲ್ ಲಾಂಗ್ರಿ ಅವರ ಪತ್ನಿ ರಾಧಾ ಲಾಂಗ್ರಿ ಮತ್ತು ಅವರ ತಾಯಿ ವಿಮಲಾ ಗುರ್ಜರ್ ಅವರು ಸಲ್ಲಿಸಿದ ರಿಟ್ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿತ್ತು. ಎರಡು ಮನೆಗಳು ಮಧ್ಯಪ್ರದೇಶ ಮುನ್ಸಿಪಲ್ ಕಾರ್ಪೊರೇಷನ್ ಕಾಯಿದೆ, 1956 ರ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ಯುಎಂಸಿ ಅಧಿಕಾರಿಗಳು ಆರೋಪಿಸಿದ್ದರು.

2022ರ 12 ಡಿಸೆಂಬರ್ ರಂದು ವಿಮಲಾ ಅವರು ತಮ್ಮ ಮೆನೆ ಕೆಡವುದರ ವಿರುದ್ಧ ಸಿವಿಲ್ ನ್ಯಾಯಾಲಯವನ್ನು ಸಂಪರ್ಕಿಸಿದಾಗ, ಅದೇ ದಿನ ಯಥಾಸ್ಥಿತಿ ಆದೇಶವನ್ನು ನೀಡಲಾಗಿತ್ತು. ಆದರೆ ಮರುದಿನ ಡಿಸೆಂಬರ್ 13 ರಂದು ಉಜ್ಜಯಿನಿ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿನ ವಲಯ 5 ರ ಉಜ್ಜಯಿನಿ ಪುರಸಭೆಯ ಆಯುಕ್ತರು ಮತ್ತು ಕಟ್ಟಡ ಅಧಿಕಾರಿ ಯಾವುದೇ ಸೂಚನೆ ನೀಡದೆ ಕ್ರಮವಾಗಿ ರಾಹುಲ್ ಮತ್ತು ಅವರ ಪತ್ನಿ ರಾಧಾ ಅವರ ಒಡೆತನದ ಮನೆಯನ್ನು ಕೆಡವಿದ್ದಾರೆ.

ಇದನ್ನೂ ಓದಿ: ಅಣ್ಣಾಮಲೈ ವಿರುದ್ಧದ ದ್ವೇಷ ಭಾಷಣ ಪ್ರಕರಣ ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್ ನಕಾರ

ಆದೇಶದ ವೇಳೆ ನ್ಯಾಯಾಲಯವು, ದ್ವಂಸ ಮಾಡುವುದು ಕೊನೆಯ ಮಾರ್ಗವಾಗಿರಬೇಕಿದ್ದು, ಅದೂ ಕೂಡಾ ಅದನ್ನು ಕ್ರಮಬದ್ಧಗೊಳಿಸಲು ಮಾಲೀಕರಿಗೆ ಅವಕಾಶವನ್ನು ನೀಡಿದ ನಂತರವಾಗಿರಬೇಕು ಎಂದು ಹೇಳಿದೆ.

“ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶದಲ್ಲಿ ನಿಯಮಗಳಿಗೆ ಬದ್ಧವಾಗಿರದೆ, ಸೂಕ್ತ ಅನುಮತಿಯಿಲ್ಲದೆ ಅಥವಾ ಅನುಮತಿ ಅಸ್ತಿತ್ವದಲ್ಲಿದ್ದರೆ, ನೆಲಸಮವನ್ನು ಕೊನೆಯ ಆಯ್ಕೆಯಾಗಿ ಪರಿಗಣಿಸಬೇಕು” ಎಂದು ನ್ಯಾಯಾಲಯ ಒತ್ತಿ ಹೇಳಿದೆ. ಅಷ್ಟೆ ಅಲ್ಲದೆ, ಪರಿಸ್ಥಿತಿಯನ್ನು ಸರಿಪಡಿಸಲು ಮನೆಯ ಮಾಲೀಕರಿಗೆ ನ್ಯಾಯಯುತ ಅವಕಾಶವನ್ನು ಒದಗಿಸಿದ ನಂತರ ಮಾತ್ರ ಇದನ್ನು ಕೈಗೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ.

ಅಕ್ರಮವಾಗಿ ತನ್ನ ಮನೆಗಳನ್ನು (ಮನೆ ಸಂಖ್ಯೆ 466 ಮತ್ತು 467) ಕೆಡವಿದ್ದಕ್ಕಾಗಿ ಪರಿಹಾರವನ್ನು ಕೋರಿ ರಾಧಾ ಲಾಂಗ್ರಿ ಅವರು ಸಲ್ಲಿಸಿದ ಅರ್ಜಿಯಲ್ಲಿ ಹೈಕೋರ್ಟ್‌ನ ಇಂದೋರ್ ಪೀಠವು ಮೇಲಿನ ತೀರ್ಪನ್ನು ನೀಡಿದೆ. ಅರ್ಜಿದಾರರು ಈ ಹಿಂದೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯದ ಕಾರಣ ನಗರಸಭೆ ಕಾಯ್ದೆಯನ್ನು ಉಲ್ಲಂಘಿಸಿ ಕೆಡವಲಾದ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಪ್ರತಿವಾದಿಗಳು ವಾದಿಸಿದ್ದರು.

ವಿಡಿಯೊ ನೋಡಿ: ಯುವಜನತೆಯನ್ನು ಮತಾಂಧತೆಯ ಖೆಡ್ಡಾಗೆ ತಳ್ಳಿದ ಸಂಘ ಪರಿವಾರ… Janashakthi Media

Donate Janashakthi Media

Leave a Reply

Your email address will not be published. Required fields are marked *