ಗೈರು ಹಾಜರಿ | ಪರೀಕ್ಷೆಗೆ ಅವಕಾಶ ನೀಡಲು ಹಣದ ಬೇಡಿಕೆ

ಚಿಕ್ಕಮಗಳೂರು: ಗೈರು ಹಾಜರಾದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡಲು ಹಣ ಪಡೆದ ಆರೋಪದ ಮೇಲೆ ಪ್ರಾಂಶುಪಾಲ ಮತ್ತು ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಹಣದ ಬೇಡಿಕೆಯನ್ನು ಇಟ್ಟು ಬೀರೂರು ಪ್ರಥಮ ದರ್ಜೆ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ಬಿ.ಟಿ. ಹರೀಶ್ ರವರಿಂದ ಹಣ ಪಡೆದ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಗೈರು 

ಪ್ರಥಮ ದರ್ಜೆ ಸಹಾಯಕ ಸದಾಶಿವಯ್ಯ ಫೋನ್ ಪೇ ಮೂಲಕ 10 ಸಾವಿರ ರೂ, ಪಡೆದಿದ್ದು, ಹಾಗೂ ಪ್ರಾಂಶುಪಾಲ ಎಂ.ಕೆ. ಪ್ರವೀಣ್ ಕುಮಾರ್ 5000 ರೂ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಇಂದು ಜಮ್ಮು – ಕಾಶ್ಮೀರದಲ್ಲಿ 2ನೇ ಹಂತದ ಮತದಾನ; 25 ಲಕ್ಷಕ್ಕೂ ಅಧಿಕ ಮತದಾರರಿಂದ ಹಕ್ಕು ಚಲಾವಣೆ

ಈ ಹಿನ್ನೆಲೆಯಲ್ಲಿ ಪ್ರಾಂಶುಪಾಲ ಎಂ.ಕೆ ಪ್ರವೀಣ್ ಕುಮಾರ್ ಮತ್ತು ಪ್ರಥಮ ದರ್ಜೆಯ ಸಹಾಯಕ ಸದಾಶಿವಯ್ಯ ರವರನ್ನು ಲೋಕಾಯುಕ್ತ ಪೊಲೀಸರು ಬಂಧಿದ್ದಾರೆ.

ಕಾರ್ಯಚರಣೆಯಲ್ಲಿ ಡಿವೈಎಸ್ಪಿ ತಿರುಮಲೇಶ್, ಬಿ.ಮಲ್ಲಿಕಾರ್ಜುನ್, ಅನಿಲ್ ರಾಥೋಡ್ ಇತರರು ಪಾಲ್ಗೊಂಡಿದ್ದರು.

ಮಕ್ಕಳ ಹಾಜರಾತಿ ಕೊರತೆಗೆ ನಾನಾ ಕಾರಣಗಳಿರುತ್ತವೆ. ಬಹಳಷ್ಟು ವಿದ್ಯಾರ್ಥಿಗಳು ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಕಾರಣ ಇಂತಹ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇದನ್ನೆ ಬಂಡವಾಳಮಾಡಿಕೊಂಡು ನಮ್ಮನ್ನು ಶೋಷಣೆ ಮಾಡುತ್ತಾರೆ ಎಂದು ಪೋಷಕರೊಬ್ಬರು ದೂರಿದ್ದಾರೆ.

ಇದನ್ನೂ ನೋಡಿ: ದುಃಖ ಆರದ ನೆಲದಲ್ಲಿ |ಶೋಷಿತರ ಒಡಲಾಳದ ನೋವನ್ನು ತೆರೆದಿಡುವ ಪುಸ್ತಕ – ಡಾ. ಕೆ.ಪಿ ಅಶ್ವಿನಿ

Donate Janashakthi Media

Leave a Reply

Your email address will not be published. Required fields are marked *