ದೀಪಾವಳಿಗೂ ಮುನ್ನವೇ ಗ್ಯಾಸ್ ಚೇಂಬರಾಗುವ ಭೀತಿಯಲ್ಲಿ ದೆಹಲಿ

ನವದೆಹಲಿ: ದೀಪಾವಳಿ ಹಬ್ಬಕ್ಕೂ ಮುನ್ನವೇ ರಾಷ್ಟ್ರ ರಾಜಧಾನಿ ದೆಹಲಿ  ಗ್ಯಾಸ್ ಚೇಂಬರ್ ಆಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ದೆಹಲಿಯಲ್ಲಿ ಮಾಲಿನ್ಯದ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಮುಂದಿನ ಆರು ದಿನಗಳಲ್ಲಿ ಈ ಪ್ರಮಾಣ ಇನ್ನೂ ಏರುವ ನಿರೀಕ್ಷೆ ಇದೆ. ಇದರಿಂದಾಗಿ ಮಕ್ಕಳು ಮತ್ತು ವೃದ್ಧರು ತೀವ್ರ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ದೆಹಲಿಯ ಆನಂದ್ ವಿಹಾರ್ ಸುತ್ತಮುತ್ತಲಿನ ವಾಯು ಗುಣಮಟ್ಟ ಸೂಚ್ಯಂಕವು 405 ರಷ್ಟಿದ್ದು, ಅಪಾಯದ ಮಟ್ಟ ದಾಟಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ  ಇದನ್ನು ಗಂಭೀರ ವರ್ಗದಲ್ಲಿ ಇರಿಸಿದೆ. ಇದೇ ಸಮಯದಲ್ಲಿ, CPCB ಪ್ರಕಾರ, ಅಕ್ಷರಧಾಮ ದೇವಾಲಯದ ಸುತ್ತಮುತ್ತ AQI 361 ನಲ್ಲಿ ದಾಖಲಾಗಿದೆ. ಬವಾನಾದಲ್ಲಿ AQI 392, ರೋಹಿಣಿ 380, ITO 357, ದ್ವಾರಕಾ ಸೆಕ್ಟರ್-8 335 ಹಾಗೂ ಮುಂಡ್ಕಾದಲ್ಲಿ AQI 356 ದಾಖಲಾಗಿದೆ.

ಭಾನುವಾರದಿಂದ ಮುಂದಿನ ಆರು ದಿನಗಳವರೆಗೆ ರಾಜಧಾನಿಯ ಜನರು ಕೆಟ್ಟ ಗಾಳಿಯನ್ನು ಉಸಿರಾಡಬೇಕಾಗಬಹುದು, ವಾಯು ಗುಣಮಟ್ಟ ಸೂಚ್ಯಂಕ (AQI) 300ಕ್ಕಿಂತ ಹೆಚ್ಚಿರಬಹುದು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮುನ್ಸೂಚನೆ ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ವಾಯು ಮಾಲಿನ್ಯವು ಜನರನ್ನು ಮತ್ತಷ್ಟು ತೊಂದರೆಗೆ ಸಿಲುಕಿಸಲಿದೆ.

ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ನಿಯಂತ್ರಿಸಲು ದೆಹಲಿ ಸರ್ಕಾರದ ಪರಿಸರ ಸಚಿವ ಗೋಪಾಲ್ ರೈ ಅವರು ಎನ್‌ಸಿಆರ್‌ನಲ್ಲಿ ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ನೆರೆ ರಾಜ್ಯಗಳಲ್ಲಿ ಹುಲ್ಲು ಸುಡುವ ಪ್ರಕರಣಗಳನ್ನು ಕಡಿಮೆ ಮಾಡಲು ವಿನಂತಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *