ನವದೆಹಲಿ: ಹಿಂಸಾಚಾರ ಪೀಡಿತ ನಗರವಾದ ಜಹಾಂಗೀರ್ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಗಳು ಹಿಂಸಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದೆ.
ಏಪ್ರಿಲ್ 16ರ ಹನುಮ ಜಯಂತಿ ದಿನದಂದು ವಾಯುವ್ಯ ದೆಹಲಿಯ ಜಹಾಂಗೀರ್ ಪುರಿ ಪ್ರದೇಶದಲ್ಲಿ ಕೋಮು ಗಲಭೆ ನಡೆದಿದ್ದರಿಂದ ಅದಕ್ಕೆ ಸಂಬಂಧಿಸಿದ ಆರೋಪಿಗಳನ್ನು ಭಾನುವಾರ (ಮೇ 1) ತಡರಾತ್ರಿ ಪೋಲಿಸರು ಬಂಧಿಸಿದ್ದಾರೆ.
ಜಹಾಂಗೀರ್ ಪುರಿಯ ನಿವಾಸಿಗಳಾದ ಯೂನಸ್ (48) ಶೇಖ್ ಸಲೀಂ(22) ಇವರಿಬ್ಬರು ಈಗಾಗಲೇ ಬಂಧಿತರಾದ ಸಲೀಂನ ಸಹೋದರ ಆರೋಪಿಗಳಾಗಿದ್ದಾರೆ. ಆರೋಪಿ ಯೂನಸ್ ಗುಂಪುಗಳಿಗೆ ಮಾರಕ ಅಸ್ತ್ರವನ್ನು ಹಂಚುತ್ತಿರುವುದು, ಅದನ್ನು ಶೇಕ್ ಸಲೀಂ ಪಡೆಯುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿಈವರೆಗೆ, ಮೂವರು ಬಾಲಾಪರಾಧಿಗಳು ಸೇರಿದಂತೆ ಒಟ್ಟು 33 ಅಪರಾಧಿಗಳನ್ನು ಬಂಧಿಸಲಾಗಿದೆ.
ಜಹಾಂಗೀರ್ ಪುರಿಯಲ್ಲಿ ಘರ್ಷಣೆಯಾಗಲು ಕಾರಣವೇನು??
ಹನುಮಾನ್ ಜಯಂತಿಯಂದು ನಡೆದ ಮೆರವಣಿಗೆ ಸಂದರ್ಭದಲ್ಲಿ ಎರಡು ಸಮುದಾಯಗಳ ಮಧ್ಯೆ ಕೋಮು ಘರ್ಷಣೆ ಭುಗಿಲೆದ್ದವು. ಅದೇ ಸಂದರ್ಭದಲ್ಲಿ ಹಿಂಸಾಚಾರ ಸಂಭವಿಸಿ ಭದ್ರತೆಯನ್ನು ಕೈಗೊಂಡಿದ್ದ ಎಂಟು ಪೋಲಿಸ್ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳು ಗಾಯಗೊಂಡಿದ್ದಾರೆ. ಪೋಲೀಸರ ಪ್ರಕಾರ ಘರ್ಷಣೆಯ ಸಮಯದಲ್ಲಿ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಹೇಳಿದ್ದಾರೆ.