ದೆಹಲಿ ರೈತ ಹೋರಾಟ | ಡ್ರೋನ್ ಮೂಲಕ ಅಶ್ರುವಾಯು ಸಿಡಿಸುತ್ತಿರುವ ಸರ್ಕಾರ

ನವದೆಹಲಿ: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ರೈತರು ನಡೆಸುತ್ತಿರುವ ‘ಚಲೋ ದೆಹಲಿ’ ರ‍್ಯಾಲಿ ಮೇಲೆ ಡ್ರೋನ್ ಮೂಲಕ ಅಶ್ರುವಾಯು ಸಿಡಿಸಿರುವ ಬಗ್ಗೆ ವರದಿಯಾಗಿವೆ. ದೆಹಲಿಯ ಸುತ್ತ ಹಲವು ಸುತ್ತುಗಳ ಬ್ಯಾರಿಕೇಡ್ ಕೋಟೆಯನ್ನು ನಿರ್ಮಿಸಲಾಗಿದ್ದು ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಆಂದೋಲನದ ಹಿನ್ನೆಲೆಯಲ್ಲಿ ರಾಷ್ಟ್ರರಾಜಧಾನಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.ರೈತ ಹೋರಾಟ

ರೈತ ಹೋರಾಟದ ಹಿನ್ನೆಲೆಯಲ್ಲಿ ಹರ್ಯಾಣದ ಹಲವಾರು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು ದೆಹಲಿ ತಲುಪುವ ಗಡಿಗಳನ್ನು ಮುಚ್ಚಲಾಗಿದೆ. ಇದರ ವಿರುದ್ಧ ರೈತರು ಗಡಿಗಳನ್ನು ಮುಚ್ಚಿರುವುದರ ವಿರುದ್ಧ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಪ್ರತಿಭಟನಾಕಾರರಿಗೆ ಹೋರಾಟದ ಪ್ರದೇಶಗಳನ್ನು ಗುರುತಿಸಬೇಕು ಎಂದು ಕೋರ್ಟ್‌ ಸೂಚಿಸಿದೆ ಎಂದು ವರದಿಗಳು ಹೇಳಿವೆ.ರೈತ ಹೋರಾಟ

ಇದನ್ನೂ ಓದಿ: ‘ಸೇನೆಯ ಚಿತ್ರಹಿಂಸೆ ವರದಿ 24 ಗಂಟೆಯೊಳಗೆ ತೆಗೆದುಹಾಕಿ’ | ದಿ ಕಾರವಾನ್‌ಗೆ ಕೇಂದ್ರ ಸರ್ಕಾರ ಬೆದರಿಕೆ

ಪಂಜಾಬ್, ಹರಿಯಾಣ ಮತ್ತು ಕೇಂದ್ರ ಸರ್ಕಾರದಿಂದ ಸ್ಥಿತಿಗತಿ ವರದಿಗಳನ್ನು ಸಲ್ಲಿಸುವಂತೆ ಅದು ನೋಟಿಸ್ ನೀಡಿದೆ. ಸಂಬಂಧಪಟ್ಟ ಕಕ್ಷಿದಾರರು ಕುಳಿತು ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸುವ ಮೂಲಕ ವಿವಾದವನ್ನು ಪರಿಹರಿಸಲು ಹೈಕೋರ್ಟ್ ಒಲವು ತೋರಿದ್ದು, ಪ್ರಕರಣವನ್ನು ಫೆಬ್ರವರಿ 15ಕ್ಕೆ ಮುಂದೂಡಲಾಗಿದೆ.

ಈ ಮಧ್ಯೆ, ಮಂಗಳವಾರ ಪಂಜಾಬ್-ಹರಿಯಾಣ (ಶಂಭು) ಗಡಿಯಲ್ಲಿ ಪೊಲೀಸರೊಂದಿಗೆ ರೈತರು ಸಂಘರ್ಷ ನಡೆಸಿದ್ದಾರೆ. ಪ್ರತಿಭಟನಾ ನಿರತ ರೈತರು ಬ್ಯಾರಿಕೇಡ್‌ಗಳನ್ನು ತೆಗೆದುಹಾಕಲು ಪ್ರಾರಂಭಿಸಿದ್ದು, ಹೀಗಾಗಿ ಹರ್ಯಾಣ ಪೊಲೀಸರು ಗುಂಪನ್ನು ಚದುರಿಸಲು ಅಶ್ರುವಾಯು ಗುಂಡು ಹಾರಿಸಿದ್ದಾರೆ. ಇದಕ್ಕೂ ಮೊದಲು, ಭಾರೀ ಭದ್ರತೆಯ ನಡುವೆ ರೈತ ಸಂಘಗಳು ‘ದೆಹಲಿ ಚಲೋ’ ಮೆರವಣಿಗೆಯನ್ನು ಪ್ರಾರಂಭಿಸಿದ ಕೂಡಲೇ ಹರ್ಯಾಣ ಪೊಲೀಸರು ಗಡಿಯಲ್ಲಿ ಹಲವಾರು ರೈತರನ್ನು ಬಂಧಿಸಿದರು ಮತ್ತು ಅವರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ರೈತ ಪ್ರತಿಭಟನೆಗೆ ಬೆದರಿದ ದೆಹಲಿ ಪ್ರಭುತ್ವ; ಒಂದು ತಿಂಗಳು 144 ಸೆಕ್ಷನ್ ಜಾರಿ | ಹರಿಯಾಣದಲ್ಲಿ ಇಂಟರ್‌ನೆಟ್ ಸ್ಥಗಿತ!

‘ಕಿಸಾನ್ ಮಜ್ದೂರ್ ಏಕ್ತಾ ಜಿಂದಾಬಾದ್’ ಎಂಬ ಘೋಷಣೆಯನ್ನು ಕೂಗುತ್ತಾ, ಕಿಸಾನ್ ಮಜ್ದೂರ್ ಮೋರ್ಚಾದ (ಕೆಎಂಎಂ) ಜೀಪ್‌ಗಳ ಮೆರವಣಿಗೆ ಪಂಜಾಬ್‌ನ ಫತೇಘರ್ ಸಾಹಿಬ್‌ನಿಂದ ಹರಿಯಾಣ ಗಡಿಯಲ್ಲಿ ಶಂಭು ತಡೆಗೋಡೆಯವರೆಗೆ ಸಾಗುವ ರ್ಯಾಲಿ ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಪ್ರಾರಂಭವಾಯಿತು. ರೈತ ಸಂಘದ ಮುಖಂಡರು ಮತ್ತು ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಅರ್ಜುನ್ ಮುಂಡಾ ಅವರ ನಡುವೆ ಸೋಮವಾರ ಸಂಜೆ ನಡೆದ ಎರಡನೇ ಸುತ್ತಿನ ನಿರ್ಣಾಯಕ ಸಭೆ ವಿಫಲವಾದ ನಂತರ ರೈತ ಮುಖಂಡರು ದೆಹಲಿಯತ್ತ ತಮ್ಮ ಪಾದಯಾತ್ರೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.

ಪ್ರತಿಭಟನಾಕಾರರನ್ನು ರಾಷ್ಟ್ರ ರಾಜಧಾನಿಗೆ ಪ್ರವೇಶಿಸದಂತೆ ತಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಂತೆ ಶಂಭು ಗಡಿಯಲ್ಲಿ ಸಂಘರ್ಷ ಉಂಟಾಗಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ನೀರಿನ ಫಿರಂಗಿಗಳನ್ನು ಹಾರಿಸಿದ್ದರಿಂದ ರೈತರು ರಸ್ತೆಯ ಬದಿಗಳಲ್ಲಿ ಹತ್ತಿರದ ಕೃಷಿಭೂಮಿಗೆ ಓಡುತ್ತಿರುವುದು ದಾಖಲಾಗಿದೆ.

ವಿಡಿಯೊ ನೋಡಿ:ಹಿಟ್ ಅಂಡ್ ರನ್ ತಿದ್ದುಪಡಿ : ಕೇಂದ್ರದ ವಿರುದ್ಧ ಸಿಡಿದೆದ್ದ ಚಾಲಕರು Janashakthi Media

Donate Janashakthi Media

Leave a Reply

Your email address will not be published. Required fields are marked *