ನವದೆಹಲಿ: ಯುಜಿಸಿಯ ಪೂರ್ವಾನುಮತಿ ಇಲ್ಲದೆ ಯಾವುದೇ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳು ನೀಡುವ ಪದವಿಗೆ ಭಾರತದಲ್ಲಿ ಮಾನ್ಯತೆಯಿಲ್ಲ ಎಂದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಪ್ರೊಫೆಸರ್ ಎಂ ಜಗದೇಶ್ ಕುಮಾರ್ ಅವರು ಡಿಸೆಂಬರ್ ಭಾನುವಾರ ಹೇಳಿದ್ದಾರೆ. “ಯಾವುದೇ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಯು ಆಯೋಗದ ಪೂರ್ವಾನುಮತಿ ಇಲ್ಲದೆ ಭಾರತದಲ್ಲಿ ಯಾವುದೇ ಪದವಿ ನೀಡಬಾರದು ಎಂದು ನಿಯಮಗಳು ಹೇಳುವತ್ತವೆ” ಎಂದು ಜಗದೇಶ್ ಹೇಳಿದ್ದಾರೆ.
ಅನೇಕ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕಾಲೇಜುಗಳು, ದೇಶದಲ್ಲಿರುವ ವಿದೇಶಿ ಮೂಲದ ಶಿಕ್ಷಣ ಸಂಸ್ಥೆಗಳೊಂದಿಗೆ ಸಹಯೋಗದ ಒಪ್ಪಂದಗಳನ್ನು ಮಾಡಿಕೊಂಡಿವೆ ಎಂದು ನಮಗೆ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ. “ಈ ಸಂಸ್ಥೆಗಳು ಯುಜಿಸಿಯಿಂದ ಗುರುತಿಸಲ್ಪಟ್ಟಿಲ್ಲ ಮತ್ತು ತಮ್ಮೊಂದಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಅಂತಹ ವಿದೇಶಿ ಮೂಲದ ಶೈಕ್ಷಣಿಕ ಕಾಲೇಜುಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಪದವಿಗಳನ್ನು ವಿತರಿಸಲು ಅನುಕೂಲ ಮಾಡಿಕೊಡುತ್ತಿವೆ” ಎಂದು ಜಗದೇಶ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಚಿತ್ರೋತ್ಸವಕ್ಕೆ ಸೂಕ್ತ ಶಾಶ್ವತ ರೂಪ ನೀಡಿ – ರಾಜ್ಯ ಸರ್ಕಾರಕ್ಕೆ ‘ಸಮುದಾಯ ಕರ್ನಾಟಕ’ ಒತ್ತಾಯ
ಅಂತಹ ಯಾವುದೇ ರೀತಿಯ ಸಹಯೋಗ ಅಥವಾ ವ್ಯವಸ್ಥೆಯನ್ನು ನಾವು ಗುರುತಿಸುವುದಿಲ್ಲ ಮತ್ತು ಅದರ ಪ್ರಕಾರ ಅಂತಹ ಸಹಯೋಗ ಮತ್ತು ವ್ಯವಸ್ಥೆಗಳ ಮೂಲಕ ಪಡೆದ ಪದವಿಗಳನ್ನು ಆಯೋಗವು ಗುರುತಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕೆಲವು ಎಡ್‌ಟೆಕ್ ಕಂಪನಿಗಳು ವಿದೇಶಿ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಆನ್‌ಲೈನ್ ಮಾದರಿಯಲ್ಲಿ ಪದವಿ ಮತ್ತು ಡಿಪ್ಲೊಮಾ ಕಾರ್ಯಕ್ರಮಗಳನ್ನು ನೀಡುವುದಾಗಿ ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ದೂರದರ್ಶನಗಳಲ್ಲಿ ಜಾಹೀರಾತು ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಜಗದೇಶ್ ಹೇಳಿದ್ದಾರೆ. “ಅಂತಹ ಫ್ರ್ಯಾಂಚೈಸ್ ವ್ಯವಸ್ಥೆಗೆ ಅನುಮತಿಯಿಲ್ಲ ಮತ್ತು ಅಂತಹ ಯಾವುದೇ ಪದವಿಯು ಯುಜಿಸಿ ಮಾನ್ಯತೆಯನ್ನು ಹೊಂದಿರುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಎಲ್ಲಾ ಡೀಫಾಲ್ಟ್ ಎಡ್‌ಟೆಕ್ ಕಂಪನಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದು, “ಇದರ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಜೊತೆಗೆ ಅಂತಹ ಪದವಿಗಳಿಗೆ ಯುಜಿಸಿ ಮಾನ್ಯತೆ ಇಲ್ಲ ಎಂದು ಅರಿವು ಮೂಡಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.
ವಿಡಿಯೊ ನೋಡಿ: ಪಿಚ್ಚರ್ ಪಯಣ – 144ಸಿನೆಮಾ : ಈ ಬಂಧನನಿರ್ದೇಶನ : ವಿಜಯಲಕ್ಷ್ಮಿ ಸಿಂಗ್‌ಕಥೆ ಹೇಳುವವರು: ಭಾವನಾ ಮರಾಠೆ