ದೀಪಾವಳಿ ಪಟಾಕಿ ಸಿಡಿತದಿಂದ ಹಲವರ ಬಾಳಲ್ಲಿ ಕತ್ತಲೆ

ಬೆಂಗಳೂರು : ಬೆಳಕಿನ ಹಬ್ಬ ದೀಪಾವಳಿಗೆ ಪಟಾಕಿ ಸಿಡಿಸುವುದು ಸಾಮಾನ್ಯ. ಪಟಾಕಿ ಸಿಡಿತ ಸಂದರ್ಭದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಸಂಕಷ್ಟ ಕಟ್ಟಿಟ್ಟ ಬುತ್ತಿ. ಪಟಾಕಿ ಸಿಡಿತದಿಂದ ಕೈ ಕಾಲಿಗೆ ಗಾಯವಾಗುವ ಪ್ರಕರಣಗಳಷ್ಟೇ ಅಲ್ಲ, ಶಾಶ್ವತವಾಗಿ ಕಣ್ಣು ಕಳೆದುಕೊಂಡ ಉದಾಹರಣೆಗಳೂ ಇವೆ. ಕಳೆದ ವರ್ಷ ಮಿಂಟೋ, ನಾರಾಯಣ ನೇತ್ರಾಲಯ, ಅಗರ್ವಾಲ್‌ ಕಣ್ಣಿನ ಆಸ್ಪತ್ರೆಯಲ್ಲಿ 100ಕ್ಕೂ ಅಧಿಕ ಜನರು ಪಟಾಕಿ ಅವಘಡಕ್ಕೆ ತುತ್ತಾಗಿದ್ದರು. ಇದೀಗ ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಅವಘಡದಿಂದ ಗಾಯಗೊಂಡವರ ಸಂಖ್ಯೆ ಹೆಚ್ಚಾಗುತ್ತಾನೆ ಇದೆ. ಕಳೆದ ಮೂರು ದಿನಗಳಲ್ಲಿ 93ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಮೂರು ದಿನದ ಹಬ್ಬ ನಿನ್ನೆಗೆ ಮುಕ್ತಾಯವಾಗಿದ್ದರೂ, ಕಡೇಯ ದಿನವಾದ ನಿನ್ನೆ ಪಟಾಕಿಗಳ ಭರಾಟೆ ಜೋರಾಗಿತ್ತು. ಅಲ್ಲದೆ ದೀಪಾವಳಿ ವಾರ ಕಳೆಯಲು ಇನ್ನೂ ನಾಲ್ಕು ದಿನ ಇರುವುರಿಂದ ಪಟಾಕಿ ನಿರಂತರವಾಗಿ ಸುಡಲಾಗುತ್ತದೆ. ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಛಾಗುವ ಸಾಧ್ಯತೆ ಇದೆ. ಈಗಾಗಲೇ ಕಳೆದ ವರ್ಷಕ್ಕಿಂತಲೂ ಈ ಬಾರಿ ಪಟಾಕಿಯಿಂದ ಗಾಯಗೊಂಡವರ ಪ್ರಮಾಣ ಹೆಚ್ಚಿದೆ. ಕಳೆದ ವರ್ಷ ಕೋವಿಡ್ ನಿಯಮಾವಳಿಗಳು ಇದ್ದ ಕಾರಣ ಪಟಾಕಿ ಸಿಡಿತ ನಿಯಂತ್ರಣದಲ್ಲಿತ್ತು.

ಯಾವೆಲ್ಲಾ ಆಸ್ಪತ್ರೆಯಲ್ಲಿ ಎಷ್ಟೆಷ್ಟು ಪ್ರಕರಣಗಳು ವರದಿ..?

  • ಮಿಂಟೋ ಕಣ್ಣಿನ ಆಸ್ಪತ್ರೆ ಯಲ್ಲಿ 19 ಪ್ರಕರಣಗಳು ದಾಖಲು
  • ನಾರಾಯಣ ನೇತ್ರಾಲಯದಲ್ಲಿ 40 ಪ್ರಕರಣ
  • ನೇತ್ರದಾಮ ಕಣ್ಣಿನ ಆಸ್ಪತ್ರೆಯಲ್ಲಿ 20
  • ಶಂಕರ ಕಣ್ಣಿನ ಆಸ್ಪತ್ರೆ 13 ಪ್ರಕರಣಗಳು ದಾಖಲು
  • ಮೋದಿ ಕಣ್ಣಿನ ಆಸ್ಪತ್ರೆಯಲ್ಲಿ 2 ಪ್ರಕರಣ ದಾಖಲು

ನೆಪ ಮಾತ್ರಕ್ಕೆ ಸುತ್ತೋಲೆ : ಹಸಿರು ಪಟಾಕಿಗಳನ್ನು ಮಾತ್ರ ಬಳಸಲು ಅನುಮತಿಯಿದ್ದರೂ, ಭಾರೀ ಪ್ರಮಾಣದಲ್ಲಿ ಸ್ಪೋಟಗೊಳ್ಳುವ, ಸಿಡಿತ ಆಗುವ ಸಮಾನ್ಯ ಪಟಾಕಿಗಳನ್ನು ಸಿಡಿಸಿರುವುದರಿಂದ ಗಾಯಗಳ ಪ್ರಮಾಣ ಹೆಚ್ಚಾಗಿವೆ.

ಇನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ರಾತ್ರಿ 8ರಿಂದ ರಾತ್ರಿ 10ರ ಒಳಗಾಗಿ ಪಟಾಕಿ ಸಿಡಿಸಬೇಕು. ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ನಿಷೇಧಿತ ಅವಧಿಯಲ್ಲಿ ಪಟಾಕಿ ಸಿಡಿಸುವುದು ಅಥವಾ ಮಾರಾಟ ಮಾಡಿದರೆ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಸುತ್ತೋಲೆ ಹೊರಡಿಸಿತ್ತು. ಆದ್ರೆ ನಗರದಲ್ಲಿ ಸಾರ್ವಜನಿಕರು ಹಗಲಿನ ಸಮಯದಲ್ಲೂ ಪಟಾಕಿ ಸಿಡಿಸುತ್ತಿದ್ದು, ಯಾವುದೇ ನಿಯಂತ್ರಣ ಇಲ್ಲದಾಗಿದೆ. ಇದರಿಂದಾಗಿ ಗಾಯಗೊಂಡವರ ಪ್ರಮಾಣವೂ ಹೆಚ್ಚುತ್ತಿದೆ.

Donate Janashakthi Media

Leave a Reply

Your email address will not be published. Required fields are marked *