ಭಾರತ ಸರ್ಕಾರವು ಜನವರಿ 22 ರಂದು, “ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ್ ಪ್ರತಿಷ್ಠಾ ಆಚರಣೆಗಳಲ್ಲಿ ಭಾಗವಹಿಸಲು ನೌಕರರಿಗೆ ಅನುವು ಮಾಡಿಕೊಡಲು” ಅರ್ಧದಿನ ರಜೆ ಘೋಷಣೆ ಮಾಡಿರುವುದು ಅಧಿಕಾರದ ಸಂಪೂರ್ಣ ದುರುಪಯೋಗ ಎಂದು ಸಿಪಿಐಎಂ ಆರೋಪಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ, ಎಲ್ಲಾ ಸರ್ಕಾರಿ ಕಚೇರಿಗಳು, ಕೇಂದ್ರ ಸಂಸ್ಥೆಗಳು ಮತ್ತು ಕೈಗಾರಿಕಾ ಸಂಸ್ಥೆಗಳು ಮಧ್ಯಾಹ್ನ 2.30 ರವರೆಗೆ ಮುಚ್ಚಿರುತ್ತವೆ ಎಂದು ಘೋಷಿಸುವ “ಆಫೀಸ್ ಮೆಮೊರಾಂಡಮ್” ಅನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಇದೇ ರೀತಿಯ ಕ್ರಮಗಳನ್ನು ಕೈಗೊಂಡಿವೆ ಎಂದು ವರದಿಯಾಗಿದೆ. ಇದು ಸಂಪೂರ್ಣ ಧಾರ್ಮಿಕ ಸಮಾರಂಭದಲ್ಲಿ ಸರ್ಕಾರ ಮತ್ತು ಪ್ರಭುತ್ವವನ್ನು ನೇರವಾಗಿ ತೊಡಗಿಸುವ ಮತ್ತೊಂದು ಹೆಜ್ಜೆಯಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಇದನ್ನೂ ಓದಿ :
ನೌಕರರು ತಮ್ಮ ಧಾರ್ಮಿಕ ನಂಬಿಕೆ ಮತ್ತು ನಡವಳಿಕೆಯ ಬಗ್ಗೆ ವೈಯಕ್ತಿಕ ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ ಆದರೆ ಸರ್ಕಾರವು ಅಂತಹ ಸುತ್ತೋಲೆಯನ್ನು ಹೊರಡಿಸುವುದು ಎಂದು ಅದು ಹೇಳಿದೆ.ಸರ್ಕಾರದ ಇಂತಹ ಕ್ರಮಗಳು ಸಂವಿಧಾನಕ್ಕೆ ಮತ್ತು ರಾಜ್ಯವು ಯಾವುದೇ ಧಾರ್ಮಿಕ ಬಣ್ಣವಿಲ್ಲದೆ ಇರಬೇಕೆಂಬ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂಬ ಸಿಪಿಐ(ಎಂ) ನಿಲುವನ್ನು ಪೊಲಿಟ್‍ಬ್ಯುರೊ ಪುನರುಚ್ಚರಿಸಿದೆ.