ಕಟ್ಟಡ ಕಾರ್ಮಿಕರ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲು ನಿರ್ಧಾರ : ಕೆ.ಮಹಾಂತೇಶ್

ಕೋಲಾರ : ರಾಜ್ಯದಲ್ಲಿನ ನಿರ್ಮಾಣ ಕಾರ್ಮಿಕರ ಭವಿಷ್ಯದ ದೃಷ್ಟಿಯಿಂದ ಹಾಗೂ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ಸಿಗುವ ಸೌಲಭ್ಯಗಳನ್ನು ನೇರವಾಗಿ ಕಾರ್ಮಿಕರಿಗೆ ಸಿಗುವಂತೆ ಮಾಡಲು ಈ ಬಾರಿ ಇಂಡಿಯಾ ಒಕ್ಕೂಟದ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡಲಿದೆ ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ತಿಳಿಸಿದರು. ಮಹಾಂತೇಶ್

ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಬಾರಿಯ ಬಿಜೆಪಿ ಪಕ್ಷವು ಕಟ್ಟಡ ಕಾರ್ಮಿಕರ ಹಣವನ್ನು ಇತರರೆ ಕೆಲಸಗಳಿಗೆ ಬಳಕೆ ಮಾಡಲಾಗಿತ್ತು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಲಕಟ್ಟಡ ಕಾರ್ಮಿಕರ ಹಿತ ಕಾಣುವುದಿಲ್ಲ ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಮಹಾಂತೇಶ್

ದೇಶಾದ್ಯಂತ ಮತದಾರರಲ್ಲಿ ಗಣನೀಯ ಸಂಖ್ಯೆಯಲ್ಲಿ ಕಟ್ಟಡ ಕಾರ್ಮಿಕರು ಇದ್ದೇವೆ ಈ ಲೋಕಸಭಾ ಚುನಾವಣೆಯಲ್ಲಿ ಸುಮಾರು 5 ಕೋಟಿಗೂ ಹೆಚ್ಚು ಕಟ್ಟಡ ಕಾರ್ಮಿಕರು ಮತ್ತು ನಮ್ಮ ಕುಟುಂಬದ ಸೇರಿ ಸುಮಾರು 20 ಕೋಟಿಗೂ ಅಧಿಕ ಜನರು ಮತದಾನ ಮಾಡಲಿದ್ದು ಕರ್ನಾಟಕದಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ನಿರ್ಮಾಣ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರು ಮತಗಳನ್ನು ಚಲಾಯಿಸುವ ಅವಕಾಶ ಪಡೆದಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಕಾರ್ಮಿಕ ಹಕ್ಕುಗಳನ್ನು ದಮನ ಮಾಡುವುದು, ಹಾಲಿ ಇರುವ ಕಾನೂನುಗಳನ್ನು ತೆಗೆದು ಹಾಕುವ ಪ್ರಯತ್ನಗಳನ್ನು ಈ ಅವಧಿಯಲ್ಲಿ ನಡೆಸಿದ್ದಾರೆ ಇಂತಹ ಸನ್ನಿವೇಶದಲ್ಲೇ ಮತ್ತೆ ಅಧಿಕಾರಕ್ಕೆ ಮರಳಲು ಬಿಜೆಪಿ ಸಕಲ ಪ್ರಯತ್ನಗಳನ್ನು ನಡೆಸಿದೆ ಇದಕ್ಕೆ ಅವಕಾಶ ನೀಡಬಾರದು ಎಂದರು. ಮಹಾಂತೇಶ್

ದೇಶದಲ್ಲಿ 2016 ರಲ್ಲಿ ಮೋದಿ ಸರ್ಕಾರ ಜಾರಿಮಾಡಲಾದ ನೋಟು ರದ್ದತಿಯಿಂದಾಗಿ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡರು ಬಳಿಕ ಜಾರಿಗೊಳಿಸಿದ ಜಿ.ಎಸ್.ಟಿ ಪದ್ಧತಿಯೂ ನಿರ್ಮಾಣ ವಲಯದ ಎಲ್ಲ ಸಾಮಾಗ್ರಿಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿ ನಿರ್ಮಾಣ ಕೆಲಸಗಳು ನಿಂತು ಹೋದವು ಕಲ್ಯಾಣ ಮಂಡಳಿಯ ಮತ್ತು ಅದರಲ್ಲಿನ ಸೌಲಭ್ಯಗಳು ರದ್ದಾಗುವ ಅಪಾಯಕಾರಿ ನೀತಿಗಳನ್ನು ತಂದಿದ್ದಾರೆ ಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆಗಳು ಜಾರಿಗೆ ಬಂದರೆ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಾಯ್ದೆ, ಕಲ್ಯಾಣ ಸೆಸ್ ಕಾಯ್ದೆ, ಮತ್ತು ಅಂತರ ರಾಜ್ಯ ವಲಸೆ ಕಾರ್ಮಿಕರ ಕಾಯ್ದೆಗಳು ರದ್ದಾಗುತ್ತವೆ. ಸೆಸ್ ಸಂಗ್ರಹ, ನೋಂದಣಿ ಪ್ರಕ್ರಿಯೆ, ಉದ್ಯೋಗದಾತರ ಜವಾಬ್ದಾರಿಗಳು ಮತ್ತು ಕಲ್ಯಾಣ ಮಂಡಳಿಯ ಕಾರ್ಯಚಟುವಟಿಕೆಗಳು ದುರ್ಬಲಗೊಳ್ಳುತ್ತವೆ ಎಂದರು. ಮಹಾಂತೇಶ್

ಇದನ್ನು ಓದಿ : ಮೋದಿ ಫೋಟೋ ಬಿಟ್ಟು ಯಡಿಯೂರಪ್ಪ ಚುನಾವಣೆ ಎದುರಿಸಲೀ -ಕೆ.ಎಸ್.ಈಶ್ವರಪ್ಪ ಛಾಲೆಂಜ್‌

ಕರ್ನಾಟಕದ ಕಲ್ಯಾಣ ಮಂಡಳಿಯಲ್ಲಿನ ನಿಧಿಯೂ ಸೇರಿ ದೇಶದ ಎಲ್ಲ ಕಲ್ಯಾಣ ಮಂಡಳಿಯಲ್ಲಿರುವ ನಿಧಿ ಮೇಲಿನ ಅಧಿಕಾರ ಕೇಂದ್ರ ಸರ್ಕಾರದ ಕೈ ವಶವಾಗಲಿದೆ. ಮುಂದೆ ಈ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಕೇಂದ್ರ ಸರ್ಕಾರ ಹೂಡಿಗೆ ಮಾಡುವ ಅಪಾಯವಿದೆ ಹೀಗೆ ಮಾಡಿದ್ದೆ ಆದರೆ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಈಗ ದೊರೆಯುತ್ತಿರುವ ಖಚಿತವಾದ ಪಿಂಚಣಿಯು ಸೇರಿ ಇತರೆ ಎಲ್ಲ ಸೌಲಭ್ಯಗಳು ನಿಂತು ಹೋಗುವ ಅಪಾಯ ಬರಲಿದೆ. ಇನ್ನೂ ಸಾಮಾಜಿಕ ಭದ್ರತೆಯ ಸಂಹಿತೆಯು ಸೆಸ್ ಸ್ವಯಂ ಮೌಲ್ಯಮಾಪನಕ್ಕೆ ಕಟ್ಟಡ ನಿರ್ಮಿಸುವ ಮಾಲೀಕರಿಗೆ ಅವಕಾಶ ಒದಗಿಸುತ್ತದೆ ಮತ್ತು ಸೆಸ್‌ನ ಬಡ್ಡಿದರವನ್ನು ಕಡಿಮೆ ಮಾಡಲು ಅವಕಾಶ ನೀಡುತ್ತದೆ. ಈ ಸಂಹಿತೆಯು ಕಾರ್ಮಿಕ ನಿರೀಕ್ಷಕರಿಗೆ ಇರುವ ಸೆಸ್ ಸಂಗ್ರಹಿಸುವ ಅಧಿಕಾರವನ್ನು ಮೊಟಕುಗೊಳಿಸಲಿದೆ ಎಂದು ಆರೋಪಿಸಿದರು.

ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಹಲವು ರಾಜ್ಯ ಸರ್ಕಾರಗಳು ಈ ಅವಧಿಯಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಮೇಲೆ ವ್ಯವಸ್ಥಿತ ದಾಳಿಯನ್ನು ನಡೆಸಿದವು ಮಾತ್ರವಲ್ಲ ಮಂಡಳಿಗಳ ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯನ್ನು ದುರ್ಬಲ ಗೊಳಿಸಿದವು. ಬಿಜೆಪಿಯವರು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಕಲ್ಯಾಣ ನಿಧಿಯನ್ನು ಲೂಟಿ ಮಾಡಿದರು. ವಿಶೇಷವಾಗಿ ಕೊವೀಡ್ ನಂತರದ ಪರಿಸ್ಥಿತಿಯನ್ನು ದುರ್ಲಾಭ ಮಾಡಿಕೊಂಡು ಸಾವಿರಾರು ಕೋಟಿ ರುಪಾಯಿಗಳ ಖರೀದಿ ನಡೆಸಿ ಕಲ್ಯಾಣ ಮಂಡಳಿ ದುರುಪಯೋಗ ಮಾಡಲಾಗಿದೆ. ಇದರ ವಿರುದ್ಧ ಸಿಐಟಿಯು ನೇತೃತ್ವದಲ್ಲಿ ನಾವು ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆಗಳನ್ನು ನಡೆಸಿದ್ದು ನಿಮಗೆ ನೆನಪಿದೆ. ಇದೇ ಕಾರಣಕ್ಕೆ ಸಿಐಟಿಯು ನೇತೃತ್ವದ ಕಟ್ಟಡ ಕಾರ್ಮಿಕ ಸಂಘಟನೆಗೆ ಪ್ರಾತಿನಿಧ್ಯ ವನ್ನು ಉದ್ದೇಶಪೂರ್ವಕವಾಗಿ ನಿರಾಕರಿಸಲಾಗಿದೆ. ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಮಾಡಿದ ದ್ರೋಹ ಹಾಗೂ ಭ್ರಷ್ಟಚಾರಗಳ ವಿರುದ್ಧ ನಾವು ನಿರಂತರ ಹೋರಾಟ ನಡೆಸಿ ಸಫಲವಾಗಿದ್ದೇವೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ತಮ್ಮ ಹಾಗೂ ತಮ್ಮ ಕುಟುಂಬದ ಎಲ್ಲ ಸದಸ್ಯರು ಮತ ಚಲಾಯಿಸಬೇಕೆಂದು ರಾಜ್ಯದ ಸಮಸ್ತ ಕಟ್ಟಡ ಕಾರ್ಮಿಕರು ನಿರ್ಧರಿಸಿದ್ದಾರೆ ಎಂದರು ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಪಿ.ಶ್ರೀನಿವಾಸ್, ಕಾರ್ಯದರ್ಶಿ ಭೀಮರಾಜ್, ಖಜಾಂಚಿ ಆಶಾ, ಮುಖಂಡರಾದ ವಿಜಯಕೃಷ್ಣ, ಗುರಪ್ಪ ಇದ್ದರು.

ಇದನ್ನು ನೋಡಿ : ಸಿಪಿಐಎಂ ಸ್ಪರ್ಧೆ |ಹೋರಾಟಗಳ ಪ್ರಭಾವ ಮತಗಳಾಗಿ ಪರಿವರ್ತನೆ ಆಗಲಿವೆ Janashakthi Media

Donate Janashakthi Media

Leave a Reply

Your email address will not be published. Required fields are marked *