ನವದೆಹಲಿ: ಈಶಾನ್ಯ ವಿದ್ಯಾರ್ಥಿ ಸಂಘಟನೆ (ಎನ್‌ಇಎಸ್‌ಒ) ತ್ರಿಪುರದ ಯುವಕ ಏಂಜೆಲ್ ಚಕ್ಮಾನನ್ನು ಹತ್ಯೆಗೈದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಮಂಗಳವಾರ ಒತ್ತಾಯಿಸಿದೆ. ಜನಾಂಗೀಯ ತಾರತಮ್ಯ ಮತ್ತು ಈಶಾನ್ಯ ಜನರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸಲು ಕನಿಷ್ಠ ಒಂದು ವಿಶೇಷ ಪೊಲೀಸ್ ಠಾಣೆಯನ್ನು ಸ್ಥಾಪಿಸಬೇಕೆಂದು ಆಗ್ರಹಿಸಿದೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಮನವಿ ಪತ್ರದ ಸಲ್ಲಿಸಿರುವ ವಿದ್ಯಾರ್ಥಿ ಸಂಘಟನೆ, ಜನಾಂಗೀಯ ತಾರತಮ್ಯದ ವಿರುದ್ಧ ‘ಜನಾಂಗೀಯ ವಿರೋಧಿ ಕಾಯ್ದೆ’ಯಾಗಿ ಕಠಿಣ ಕಾನೂನನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದೆ.
ಕೇಂದ್ರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ. NESO ಅಧ್ಯಕ್ಷ ಸ್ಯಾಮ್ಯುಯೆಲ್ ಬಿ ಜೈರ್ವಾ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, “ಇಂತಹ ಘಟನೆ ನಿಜಕ್ಕೂ ದುರದೃಷ್ಟಕರ. ಹಿಂದೆ ದೇಶದ ವಿವಿಧ ಭಾಗಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಇಂತಹ ಘಟನೆಗಳು ಪುನರಾವರ್ತನೆಯಾಗುವುದನ್ನು ತಡೆಯಲು ದೇಶಾದ್ಯಂತ ಇತರ ವಿದ್ಯಾರ್ಥಿ ಸಂಘಟನೆಗಳೊಂದಿಗೆ NESO ವ್ಯಾಪಕ ಸಮಾಲೋಚನೆ ಪ್ರಾರಂಭಿಸಲಿದೆ ಎಂದು ಹೇಳಿದರು.
ಇದನ್ನೂ ಓದಿ : ನವದೆಹಲಿ |ಸೆಂಗಾರ್ಗೆ ಜೀವಾವಧಿ ಶಿಕ್ಷೆಯನ್ನು ಗಲ್ಲಿಗೇರಿಸುವವರೆಗೂ ನಾನು ಇಲ್ಲಿಂದ ಜಾಗ ಖಾಲಿ ಮಾಡಲ್ಲ
ಭಾರತದ ವಿವಿಧ ಭಾಗಗಳಲ್ಲಿ ಈಶಾನ್ಯ ಭಾಗದ ಜನರು ಈ ರೀತಿಯ ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಬಹುದು, ಇದು ಅನೇಕ ಸಂದರ್ಭಗಳಲ್ಲಿ ಅವರ ಯೋಗಕ್ಷೇಮಕ್ಕೆ ಮಾರಕವಾಗಿದೆ ಧಾಮಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಈ ಘಟನೆಯನ್ನು ಅತ್ಯಂತ ಅನಾಗರಿಕ ಎಂದು ಬಣ್ಣಿಸಿರುವ NESO, ಈಶಾನ್ಯ ಜನರ ವಿರುದ್ಧ ನಡೆಸಲಾದ ಇಂತಹ ದೌರ್ಜನ್ಯಗಳನ್ನು ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ ಎಂದಿದೆ.
NESO ಎಂಬುದು ಖಾಸಿ ವಿದ್ಯಾರ್ಥಿ ಸಂಘ (KSU), ಆಲ್ ಅಸ್ಸಾಂ ವಿದ್ಯಾರ್ಥಿ ಸಂಘ (AASU), ನಾಗಾ ವಿದ್ಯಾರ್ಥಿ ಒಕ್ಕೂಟ (NSF), ಮಿಜೋ ಜಿರ್ಲೈ ಪೌಲ್ (MZP), ಟ್ವಿಪ್ರಾ ವಿದ್ಯಾರ್ಥಿ ಒಕ್ಕೂಟ (TSF), ಆಲ್ ಮಣಿಪುರ ವಿದ್ಯಾರ್ಥಿ ಸಂಘ (AMSU), ಗಾರೊ ವಿದ್ಯಾರ್ಥಿ ಸಂಘ (GSU) ಮತ್ತು ಆಲ್ ಅರುಣಾಚಲ ಪ್ರದೇಶ ವಿದ್ಯಾರ್ಥಿ ಸಂಘ (AAPSU) ಸೇರಿದಂತೆ ಈಶಾನ್ಯದ ಎಂಟು ಪ್ರಭಾವಿ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟವಾಗಿದೆ.
ಡಿಸೆಂಬರ್ 9 ರಂದು ತ್ರಿಪುರಾದ ವಿದ್ಯಾರ್ಥಿ ಏಂಜೆಲ್ ಚಕ್ಮಾನನ್ನು (24) ಥಳಿಸಿ, ಇರಿದಿದ್ದರು. ಡಿಸೆಂಬರ್ 26 ರಂದು ಆಸ್ಪತ್ರೆಯಲ್ಲಿ ಎರಡು ವಾರಗಳಿಗೂ ಹೆಚ್ಚು ಕಾಲ ಜೀವನ್ಮರಣ ಹೋರಾಟದ ನಂತರ ಏಂಜೆಲ್ ಚಕ್ಮಾ ಸಾವನ್ನಪ್ಪಿದ್ದರು ಮತ್ತು ಅವರ ಸಹೋದರ ಮೈಕೆಲ್ ಚಕ್ಮಾ ಅವರ ಮೇಲೂ ಹಲ್ಲೆ ನಡೆಸಲಾಯಿತು ಎಂದು NESO ತನ್ನ ಮನವಿ ಪತ್ರದಲ್ಲಿ ತಿಳಿಸಿದೆ.
ಇದು “ಸಣ್ಣ ವಿಷಯ” ಎಂದು ತಿರಸ್ಕರಿಸಿದರು ಎಂದು ಏಂಜೆಲ್ ತಂದೆ ತರುಣ್ ಪ್ರಸಾದ್ ಚಕ್ಮಾ ಆರೋಪಿಸಿದ್ದಾರೆ. ಪೊಲೀಸರು ಆರಂಭದಲ್ಲಿ ಎಫ್‌ಐಆರ್ ದಾಖಲಿಸಲು ನಿರಾಕರಿಸಿದರು. ಆದರೆ ಈ ಆರೋಪವನ್ನು ಉತ್ತರಾಖಂಡ ಪೊಲೀಸರು ನಿರಾಕರಿಸಿದ್ದಾರೆ.
ಡೆಹ್ರಾಡೂನ್‌ನ ಆಸ್ಪತ್ರೆಯಲ್ಲಿ ನನ್ನ ಮಗನನ್ನು ನೋಡಲು ಬಂದಾಗ ಆತ ಗಂಭೀರ ಸ್ಥಿತಿಯಲ್ಲಿದ್ದ. ಏಂಜೆಲ್‌ಗೆ ಆಗಿರುವುದು ಬೇರೆ ಯಾರಿಗೂ ಆಗಬಾರದು. ಪಪ್ಪಾ ದಯವಿಟ್ಟು ನನ್ನನ್ನು ಬದುಕಿಸು ಅಂತಾ ನನ್ನ ಮಗ ಬೇಡಿಕೊಂಡ ಎಂದು ತರುಣ್ ಕಣ್ಣೀರು ಹಾಕಿದ್ದಾರೆ.
“ನನ್ನ ಮಗನ ಬೆನ್ನಿಗೆ ಎರಡು ಬಾರಿ ಇರಿದ ಕಾರಣ ಅವನ ಎಡಗೈ ಮತ್ತು ಕಾಲು ಪಾರ್ಶ್ವವಾಯುವಿಗೆ ಒಳಗಾಗಿತ್ತು. ತಲೆಗೆ ತೀವ್ರ ಪೆಟ್ಟಾಗಿತ್ತು. ‘ಅಪ್ಪಾ, ನನ್ನನ್ನು ಉಳಿಸಿ’ ಅಂತಾ ಬೇಡಿಕೊಳ್ಳುತ್ತಿದ್ದ. ಏನೂ ಆಗಲ್ಲ ಎಂದು ಧೈರ್ಯ ತುಂಬಿದ್ದೆ,” ಎಂದು ತರುಣ್ ತಿಳಿಸಿದ್ದಾರೆ.
ಇದನ್ನೂ ನೋಡಿ : ಬೆಂಗಳೂರು ಫಿಲ್ಮ್ ಫೆಸ್ಟಿವಲ್ | ಯಾರ ಅನುಕೂಲಕ್ಕಾಗಿ ಲುಲುಮಾಲ್‌ಗೆ ಶಿಫ್ಟ್ !? Janashakthi Media
