ಹರ್ಷಿ ಚಾಕೊಲೇಟ್ ಸಿರಪ್‌ ಬಾಟಲಿಯಲ್ಲಿ ಸತ್ತ ಇಲಿ ಪತ್ತೆ; ವಿಡಿಯೋ ವೈರಲ್

ನವದೆಹಲಿ: ಸತ್ತ ಇಲಿಯೊಂದು ಹರ್ಷಿ​​​​​ ಚಾಕೊಲೇಟ್ ಸಿರಪ್‌ ಬಾಟಲಿಯಲ್ಲಿ  ಪತ್ತೆಯಾಗಿರುವ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಸ್ವತಃ ಹರ್ಷಿ​​​​​ ಕಂಪೆನಿ ವಿಡಿಯೋಗೆ ಕಾಮೆಂಟ್​​ ಮೂಲಕ ಪ್ರತಿಕ್ರಿಯಿಸಿ ಕ್ಷಮೆಯಾಚಿಸಿದೆ.

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪ್ರಮಿಶ್ರೀಧರ್‌ ಎನ್ನುವವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ವಿಡಿಯೊ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ಎಲ್ಲರ ಕಣ್ತೆರೆಸಲು ಈ ವಿಡಿಯೊ ಮಾಡಿದ್ದೇವೆ. ಕೇಕ್‌ನೊಂದಿಗೆ ತಿನ್ನಲು ಜೆಪ್ಟೊದಲ್ಲಿ ಹರ್ಷಿ ಚಾಕೊಲೇಟ್‌ ಸಿರಪ್‌ ಆರ್ಡರ್‌ ಮಾಡಿ ತರಿಸಿದ್ದೆವು. ಬಾಟಲ್‌ ತೆರೆದಾಗ ಆರಂಭದಲ್ಲಿ ದಪ್ಪನೆ ರೀತಿಯಲ್ಲಿ ಸಿರಪ್‌ ಕಂಡುಬಂದಿತ್ತು. ಅದರ ಜತೆಗೆ ಸಣ್ಣ ಸಣ್ಣ ಕೂದಲುಗಳು ಸಹ ಇದ್ದವು. ಅನುಮಾನದಿಂದ ಬಾಟಲಿಯಲ್ಲಿರುವ ಚಾಕೊಲೇಟ್‌ ಸಿರಪ್‌ ಅನ್ನು ಪೂರ್ತಿಯಾಗಿ ಪಾತ್ರೆಗೆ ಹಾಕಿ ನೋಡಿದಾಗ ಸತ್ತ ಇಲಿ ಮರಿ ಪತ್ತೆಯಾಗಿದೆ. ಈ ಬಗ್ಗೆ ದೂರು ನೀಡಿದರೂ ಕಂಪನಿ ಕಡೆಯಿಂದ ಯಾವುದೇ ಉತ್ತರವಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ : ನಕಲಿ ಮದ್ಯ ಸೇವನೆ; 34ಕ್ಕೂ ಹೆಚ್ಚು ಜನ ಮೃತ

‘ದಯವಿಟ್ಟು ಆರ್ಡರ್‌ ಮಾಡಿ ತಿನ್ನುವ ಆಹಾರದ ಬಗ್ಗೆ ಎಚ್ಚರಿಕೆಯಿರಲಿ. ಅದರಲ್ಲೂ ಮಕ್ಕಳಿಗೆ ತಿನ್ನಲು ಕೊಡುವ ಮೊದಲು ಸರಿಯಾಗಿ ಪರಿಶೀಲಿಸಿಕೊಳ್ಳಿ ಎಂದು ಹೇಳಿರುವ ಅವರು, ಈ ಬಗ್ಗೆ ಸರಿಯಾದ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದ್ದಾರೆ. ‘ಅದೇ ಚಾಕೊಲೇಟ್‌ ಸಿರಪ್‌ ಕುಡಿದಿದ್ದ ಮೂವರು ಕುಟುಂಬ ಸದಸ್ಯರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಪೋಸ್ಟ್‌ಗೆ ಉತ್ತರಿಸಿರುವ ಹರ್ಷಿ ಕಂಪನಿ ಈ ಬಗ್ಗೆ ಕ್ಷಮೆಯಾಚಿಸುತ್ತೇವೆ. ನೀವು ಖರೀದಿಸಿದ ಉತ್ಪನ್ನದ ಬ್ಯಾಚ್‌ ಸಂಖ್ಯೆಯನ್ನು ಕಳುಹಿಸಿ. ನಮ್ಮ ತಂಡದ ಸದಸ್ಯರು ನಿಮ್ಮನ್ನು ಸಂಪರ್ಕಿಸುತ್ತಾರೆ ಎಂದು ಹೇಳಿದ್ದು, ಇ–ಮೇಲ್‌ ಅನ್ನು ನಮೂದಿಸಿದ್ದಾರೆ. ಹರ್ಷಿಗೆ ಪ್ರತಿ ಉತ್ತರ ನೀಡಿದ ಬಳಕೆದಾರರು ನಿಮ್ಮ ಉತ್ಪನ್ನಗಳನ್ನು ಎಂದಿಗೂ ಬಳಸುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನು ನೋಡಿ : ಇರುವುದೊಂದೇ ಭೂಮಿ; ನಮಗಾಗಿ ಸಂರಕ್ಷಿಸೋಣ, ನೆಮ್ಮದಿಯಿಂದ ಬಾಳೋಣJanashakthi Media

 

Donate Janashakthi Media

Leave a Reply

Your email address will not be published. Required fields are marked *