ತ್ರಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ: ಸಿಪಿಐಎಂಗೆ ಮತ ಹಾಕಿದ್ದಾರೆಂದು ಬಿಜೆಪಿ ಬೆಂಬಲಿಗರ ಗೂಂಡಾದಾಳಿ

ಅಗರ್ತಾಲ: ಇತ್ತೀಚಿಗೆ ವಿಧಾನಸಭಾ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದಿದ್ದು, ಈ ವೇಳೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷಕ್ಕೆ ಮತ್ತು ವಿರೋಧ ಪಕ್ಷಕ್ಕೆ ಮತಹಾಕಿದ್ದಾರೆ ಎಂದು ಬಿಜೆಪಿ ಗೂಂಡಾಗಳು ಮನಸೋ ಇಚ್ಚೆ ಹಿಂಸಾಚಾರ ನಡೆಸಿದ್ದಾರೆ.

ಇದನ್ನು ಓದಿ: ಮೇಘಾಲಯದಲ್ಲಿ ಅತಂತ್ರ , ತ್ರಿಪುರಾ, ನಾಗಲ್ಯಾಂಡ್‌ನಲ್ಲಿ ಅರಳಿದ ಕಮಲ!

ಆಡಳಿತರೂಢ ಬಿಜೆಪಿ ಪಕ್ಷದ ಬೆಂಬಲಿಗರು, ಸಿಪಿಐ(ಎಂ) ಮತ್ತು ಇತರೆ ವಿರೋಧ ಪಕ್ಷಗಳ ಕಾರ್ಯಕರ್ತರ ಮನೆಗಳು ಮತ್ತು ಪಕ್ಷದ ಕಚೇರಿಗಳ ಮೇಲೆ ಹಿಂಸಾತ್ಮಕ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಉಪವಿಭಾಗದ ಪೊಲೀಸ್ ಅಧಿಕಾರಿ ಸೇರಿದಂತೆ 25 ಜನರು ಗಾಯಗೊಂಡಿದ್ದಾರೆ. ಅಗರ್ತಲಾದ ಬದರ್‌ ಘಾಟ್ ಪ್ರದೇಶದಲ್ಲಿ ಸಿಪಿಐ(ಎಂ) ಕಾರ್ಯಕರ್ತನ ಮನೆಯ ಮೇಲೆ ಬಿಜೆಪಿ ಬಂದೂಕುಧಾರಿಗಳು ದಾಳಿಯನ್ನು ನಡೆಸಿ ತೀವ್ರತರ ಹಿಂಸಾಚಾರಕ್ಕೆ ಮುಂದಾಗಿರುವ ಘಟನೆ ನಡೆದಿದೆ.

ಹಿಂಸಾತ್ಮಕ ದಾಳಿಯಿಂದ ಸುಮಾರು 50 ಹೆಚ್ಚಿನ ಜನರ ಮೇಲೆ ಗಾಯಗಳಾಗಿವೆ. ವಿರೋಧ ವ್ಯಕ್ತಪಡಿಸದರೂ ಲೆಕ್ಕಿಸದೇ, ದಾಳಿ ನಡೆಸಿರುವ ಬಿಜೆಪಿ ಪಕ್ಷದ ಗೂಂಡಾ ದಾಳಿಯನ್ನು ಖಂಡಿಸಲಾಗಿದೆ. ಅಲ್ಲದೆ, ಎರಡು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಕೆಲವು ಕಡೆಗಳಲ್ಲಿ ದಾಳಿ ಎದುರಾಗಲಿದ್ದು, ಪರಿಸ್ಥಿತಿಯನ್ನು ಮೊದಲೇ ಅಂದಾಜು ಮಾಡಿದ ಕಾರ್ಯಕರ್ತರು ತನ್ನ ಕುಟುಂಬ ಸದಸ್ಯರನ್ನು ಕರೆದುಕೊಂಡು ಮನೆಬಿಟ್ಟು ಹೊರಟು ಹೋಗಿದ್ದರು. ಪರಿಣಾಮವಾಗಿ, ಕೇಸರಿ ಗೂಂಡಾಗಳು ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ. ಮೋಹನ್‌ಪುರ, ಸೂರ್ಯಮಣಿ ನಗರ, ರಾಮನಗರ, ಬೆಲೋನಿಯಾ, ಸೋನಮುರಾ ಮತ್ತಿತರೆ ಪ್ರದೇಶಗಳಲ್ಲಿ ಇದೇ ರೀತಿಯ ದಾಳಿಗಳು ನಡೆದಿವೆ. ತಿಪ್ರಾ ಮೋಟಾ ಕಾರ್ಯಕರ್ತರ ಮನೆಗಳ ಮೇಲೂ ದಾಳಿ ನಡೆಸಿದ್ದರಿಂದ ಅವರು ಪ್ರತಿದಾಳಿ ನಡೆಸಿದರು. ಇದರಿಂದ ಹಲವೆಡೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ.

ಇದನ್ನು ಓದಿ: ತ್ರಿಪುರಾಕ್ಕೆ ಶಾಂತಿ ಮತ್ತು ಪ್ರಜಾಪ್ರಭುತ್ವವನ್ನು ಮರಳಿ ತರುತ್ತೇವೆ; ಸಿಪಿಐ(ಎಂ) ಚುನಾವಣಾ ಪ್ರಣಾಳಿಕೆಯ ಆಶ್ವಾಸನೆ

ತೆಲಿಯಾಮುರ ಮತ್ತು ಕೃಷ್ಣಾಪುರ ಕ್ಷೇತ್ರಗಳಲ್ಲಿ ತಿಪ್ರಾ ಮೋಟಾ ಪಕ್ಷದ ಬೆಂಬಲಿಗರ ಮನೆಗಳ ಮೇಲೆ ದಾಳಿ ನಡೆದಿದೆ. ಈ ದಾಳಿಯಲ್ಲಿ ತ್ಲಿಯಮುರಾ ಉಪವಿಭಾಗದ ಪೊಲೀಸ್ ಅಧಿಕಾರಿ ಪ್ರಸೂನ್ ಕಾಂತಿ ಅವರ ತಲೆಗೆ ತೀವ್ರ ಗಾಯಗಳಾಗಿವೆ. ಆಕ್ರೋಶಗೊಂಡ ತಿಪ್ರಾ ಬೆಂಬಲಿಗರು ಬಿಜೆಪಿ ಮಂಡಲ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರು ತಡೆಯಲು ಮುಂದಾದಾಗ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ.

ದಕ್ಷಿಣ ತ್ರಿಪುರಾದ ಶಾಂತಿಬಜಾರ್ ಮತ್ತು ಸೆಫೈಜಾಲಾ ಜಿಲ್ಲೆಯ ಬಿಶಾಲ್ಗಢದಲ್ಲಿ ಹಿಂಸಾಚಾರದ ಘಟನೆಗಳು ನಡೆದಿವೆ. ಎಸ್‌ಡಿಎಂ ಕಾಮಗಾರಿಗಳು ಮತ್ತು ವಾಹನಗಳು ಸಹ ನಾಶವಾಗಿವೆ. ಪೊಲೀಸರು ಸ್ಥಳಕ್ಕಾಗಮಿಸಿ ದಾಳಿಕೋರರನ್ನು ಬಿಟ್ಟು ಸಂತ್ರಸ್ತರ ಮೇಲೆ ಲಾಠಿ ಪ್ರಹಾರ ನಡೆಸಿದರು. ವಿರೋಧ ಪಕ್ಷಗಳು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿವೆ ಎಂದು ಆಡಳಿತ ಪಕ್ಷ ಆರೋಪಿಸಿದ್ದು, ಇದು ಕೇವಲ ಅಪಪ್ರಚಾರ, ನಮ್ಮ ಕಾರ್ಯಕರ್ತರ ಮೇಲೆ ಹಿಂಸಾತ್ಮಕ ದಾಳಿ ನಡೆದಿದೆ ಎಂದು ವಿರೋಧ ಪಕ್ಷಗಳು ತಿಳಿಸಿವೆ.

ಇದನ್ನು ಓದಿ: ತ್ರಿಪುರ ವಿಧಾನಸಭೆ ಚುನಾವಣೆ: ಆಳುವ ಪಕ್ಷದಿಂದ ಭಯ ಹುಟ್ಟುಹಾಕುವ ಪ್ರಯತ್ನ – ಅಗತ್ಯ ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸಿಪಿಐ(ಎಂ)ಆಗ್ರಹ

ಭಾರತ-ಬಾಂಗ್ಲಾ ಗಡಿಯಲ್ಲಿರುವ ರವಿದಾಸಪರ ಪ್ರದೇಶದ ಜನರು ಸಿಪಿಐ(ಎಂ) ಪಕ್ಷಕ್ಕೆ ಮತ ಹಾಕಿದ್ದಾರೆ ಎಂದು ಆರೋಪಿಸಿ ಬಿಜೆಪಿ ಬೆಂಬಲಿಗರು ದಾಳಿ ನಡೆಸಿದ್ದಾರೆ. ಚುನಾವಣಾ ಆಯೋಗದ ನಿರ್ದೇಶನದ ಹೊರತಾಗಿಯೂ, ಫೆಬ್ರವರಿ 16 ರಂದು ಮತದಾನದ ನಂತರವೂ ದಾಳಿಗಳು ಮುಂದುವರೆದವು. ಇಲ್ಲಿಯವರೆಗೆ, ಈ ದಾಳಿಯಲ್ಲಿ 52 ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *