ದಶಕದ ಬಳಿಕ ಗರಿಷ್ಠ ಬೆಲೆ ಏರಿಕೆ ಕಂಡ ಗೋಧಿ-ಹಿಟ್ಟಿನ ದರ

ನವದೆಹಲಿ: ಕಳೆದ ಏಪ್ರಿಲ್ ತಿಂಗಳಿನಲ್ಲಿ ಗೋಧಿ ಹಿಟ್ಟಿನ ಮಾಸಿಕ ಸರಾಸರಿ ಚಿಲ್ಲರೆ ಮಾರಾಟ ದರದಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಒಂದು ಕೆಜಿ ಗೋಧಿ ಹಿಟ್ಟಿನ ಬೆಲೆಯು 32.38 ರೂಪಾಯಿ ಆಗಿರುವುದು ಹೊಸ ದಾಖಲೆಯಾಗಿದೆ.

ಭಾರತದಲ್ಲಿ ಗೋಧಿ ಉತ್ಪಾದನೆ ಹಾಗೂ ಶೇಖರಣೆ ಕ್ರಮೇಣವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಗೋಧಿ ಹಿಟ್ಟಿನ ಬೆಲೆ ಏರಿಕೆಯಾಗುತ್ತಿದೆ. ರಾಜ್ಯ ನಾಗರಿಕ ಸರಬರಾಜು ಇಲಾಖೆ, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯಕ್ಕೆ ಈ ಬಗ್ಗೆ ವರದಿ ನೀಡಿದ್ದು, ಮೇ 7 ರಂದು ಒಂದು ಕೆಜಿ ಗೋಧಿ ಹಿಟ್ಟಿನ ಬೆಲೆ 32.78 ರೂ. ಇದ್ದು, ಒಂದು ವರ್ಷದ ಹಿಂದೆ ಇದು ಕೆಜಿಗೆ 30.03ರೂ ಇತ್ತು, ಒಂದು ವರ್ಷದಲ್ಲಿ ಬೆಲೆ ಶೇ 9.15ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ.

ಇದನ್ನು ಓದಿ: ರಾಜ್ಯದ ಜನರಿಗೆ ಬೆಲೆ ಏರಿಕೆ ಬಿಸಿ: ವಿದ್ಯುತ್ ದರ ಮತ್ತಷ್ಟು ಹೆಚ್ಚಳ

ಒಟ್ಟು 156 ದೇಶಗಳ ಡೇಟಾ ಲಭ್ಯವಿದ್ದು, ಪೋರ್ಟ್​ ಬ್ಲೇರ್​ನಲ್ಲಿ ಅತಿ ಹೆಚ್ಚು ಅಂದರೆ ಪ್ರತಿ ಕೆಜಿ ಗೋಧಿ ಹಿಟ್ಟಿಗೆ 59 ರೂ. ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಅತಿ ಕಡಿಮೆ ಅಂದರೆ 22 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಭಾರತದಾದ್ಯಂತ ಜನವರಿ 1ರಿಂದಲೇ ಗೋಧಿ ಹಿಟ್ಟಿನ ಬೆಲೆ ಏರಿಕೆಯಾಗಲು ಶುರುವಾಗಿತ್ತು, ಜನವರಿ 1 ರಿಂದ ಶೇ 5.81ರಷ್ಟು ಬೆಲೆ ಏರಿಕೆಯಾಗಿದೆ. ಏಪ್ರಿಲ್ 2021ರಲ್ಲಿ ಪ್ರತಿ ಕೆಜಿಗೆ 31ರೂ.ಗೆ ಮಾರಾಟ ಮಾಡಲಾಗುತ್ತಿತ್ತು.

ಸರ್ಕಾರದಿಂದ ಗೋಧಿ ಆಹಾರ ಸಬ್ಸಿಡಿ ಮೂರು ಭಾಗಗಳಲ್ಲಿದೆ. ಸರ್ಕಾರದ ಸಹಾಯಧನವನ್ನು ವೆಚ್ಚದ ಬೆಲೆ ಮತ್ತು ರಫ್ತು ಬೆಲೆಯಿಂದ ಪೂರೈಸಲಾಗುತ್ತದೆ. ಇದಲ್ಲದೆ, ಸಾರಿಗೆ ವೆಚ್ಚಗಳು, ನಿರ್ವಹಣೆ ಶುಲ್ಕಗಳು, ಶೇಖರಣಾ ನಷ್ಟಗಳು, ಬಡ್ಡಿ ವೆಚ್ಚಗಳು, ಕಾರ್ಯಾಚರಣೆಯ ನಷ್ಟಗಳು ಮತ್ತು ಆಡಳಿತಾತ್ಮಕ ವೆಚ್ಚಗಳು ಸಹ ಇವೆ.

ಇದನ್ನು ಓದಿ: ಜನತೆಗೆ ಮತ್ತೆ ಬೆಲೆ ಏರಿಕೆ ಹೊರೆ: ಶೀಘ್ರದಲ್ಲೇ ಹಾಲಿನ ದರ ಏರಿಕೆ ಸಾಧ್ಯತೆ?

ಕಳೆದ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದಲ್ಲಿ ಭಾರತವು 70 ಎಲ್‌ಎಂಟಿ ಗೋಧಿಯನ್ನು ರಫ್ತು ಮಾಡಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ, ರಷ್ಯಾ-ಉಕ್ರೇನ್ ಸಂಘರ್ಷವು ಜಾಗತಿಕವಾಗಿ ಪೂರೈಕೆಯ ಕೊರತೆಯನ್ನು ಸೃಷ್ಟಿಸಿರುವುದರಿಂದ ರಫ್ತು ಹೆಚ್ಚಾಗುವ ಸಾಧ್ಯತೆಯಿದೆ.

ವರದಿಯೊಂದರ ಪ್ರಕಾರ ಈ ವರ್ಷ ಎಫ್‌ಸಿಐಯಂತಹ ದೊಡ್ಡ ಸಂಸ್ಥೆಗೆ ಹೆಚ್ಚುವರಿ ಆಹಾರ ಧಾನ್ಯಗಳ ಹೊರೆ ಬೀಳುತ್ತಿದೆ. ಈ ಸಮಯದಲ್ಲಿ ಈ ಎಲ್ಲಾ ಸಂಸ್ಥೆಗಳು ಉತ್ತಮ ಲಾಭವನ್ನು ಪಡೆಯುತ್ತಿವೆ. ಈ ವರ್ಷ ಸರ್ಕಾರದ ಸಂಗ್ರಹಣೆಯ ಗುರಿ ಸುಮಾರು 44.40 ಮಿಲಿಯನ್ ಟನ್‌ಗಳಾಗಿದ್ದು, ಅದು ಈಗ 19.50 ಮಿಲಿಯನ್ ಟನ್‌ಗಳಿಗೆ ಇಳಿದಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಸರ್ಕಾರದ ಅನುದಾನದಲ್ಲಿ ಸುಮಾರು 60 ಸಾವಿರ ಕೋಟಿ ಉಳಿತಾಯವಾಗಲಿದೆ. ಪ್ರಸ್ತುತ, ಈ ಸಂಗ್ರಹಣೆಯಲ್ಲಿ 25 ಮಿಲಿಯನ್ ಟನ್ ಗೋಧಿಯನ್ನು ಖರೀದಿಸಲು ಸುಮಾರು 8 ಸಾವಿರ ಕೋಟಿ ರೂಪಾಯಿ ವೆಚ್ಚವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

2022-23ನೇ ಸಾಲಿನಲ್ಲಿ 100 ಎಲ್‌ಎಂಟಿ ಗೋಧಿಯನ್ನು ಸಂಗ್ರಹಿಸುವ ಮೂಲಕ ಪೂರೈಕೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಸರ್ಕಾರದ ಎಲ್ಲ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಗೋಧಿಯನ್ನು ಪೂರೈಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Donate Janashakthi Media

Leave a Reply

Your email address will not be published. Required fields are marked *