ಧರ್ಮಸ್ಥಳ | ನಾಲ್ಕು ಮಂದಿ ಸ್ವತಂತ್ರ ಪತ್ರಕರ್ತರ ಮೇಲೆ ಹಲ್ಲೆ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಾಲ್ಕು ಮಂದಿ ಯ್ಯೂಟ್ಯೂಬರ್ ಗಳ ಮೇಲೆ ಅಪರಿಚಿತರು ಹಲ್ಲೆ ನಡೆಸಿರುವ ಘಟನೆ ಬುಧವಾರ ನಡೆದಿದೆ. ಧರ್ಮಸ್ಥಳ

ಅಜಯ್‌ ಅಂಚನ್‌, ಅಭಿಷೇಕ್‌, ವಿಜಯ್‌ ಮತ್ತು ಇನ್ನೋರ್ವ ಹಲ್ಲೆಗೆ ಒಳಗಾದ ಯ್ಯೂಟ್ಯೂಬರ್ ಎಂದು ತಿಳಿದುಬಂದಿದೆ.

ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಅವರು ಸೌಜನ್ಯ ಮನೆಗೆ ಭೇಟಿ ನೀಡುವವರು ಇದ್ದರು. ಈ ವೇಳೆ ಈ ನಾಲ್ಕು ಯೂಟ್ಯೂಬರ್ ಗಳ ಮೇಲೆ ಧರ್ಮಸ್ಥಳದ ಹೆಸರಿಗೆ ಆಕ್ಷೇಪ ಇರುವ ಕಡೆಯವರು ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ನೋಡಿ : ಧರ್ಮಸ್ಥಳ ಪ್ರಕರಣ: ಪಂಚಾಯತ್‌ಯಿಂದ ದಾಖಲೆಗಳನ್ನು ಪಡೆದುಕೊಂಡ ಎಸ್‌ಐಟಿ ತಂಡ

ರಿಕ್ಷಾಗಳ ಮೂಲಕ ಬಂದಬ 50 ಜನರ ತಂಡ ಏಕಾಏಕಿ ಯೂಟ್ಯೂಬರ್ ಮೇಲೆ ದಾಳಿ ನಡೆಸಿದೆ. ಈ ವೇಳಿ ನಾಲ್ವರಿಗೂ ಗಾಯಗಳಾಗಿದ್ದು. ಸ್ಥಳೀಯ
ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾಳಿಕೋರರು ಕ್ಯಾಮರಾ ಹಾಗೂ ಮೈಕ್ ಕಸಿದುಕೊಂಡು ನೆಲಕ್ಕೆ ಬೀಸಾಡಿದ್ದಾರೆ. ಪರಿಣಾಮ ಕ್ಯಾಮರಾ ಹಾಗೂ ಮೈಕ್ ಗಳು ಹಾಳಾಗಿವೆ.

ಹಲ್ಲೆ ನಡೆದ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಹಲ್ಲೆ ನಡೆಸಿದವರು ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಹಲ್ಲೆಗೊಳಗಾದ ಯೂಟ್ಯೂಬರ್ ಗಳು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರು ಸ್ಥಳದಲ್ಲಿ ಬಂದೋಬಸ್ತ್ ಮಾಡಿದ್ದಾರೆ.

ಇದನ್ನೂ ನೋಡಿ : ಧರ್ಮಸ್ಥಳ | ಮಗಳನ್ನು ನೆನೆದು ಕಣ್ಣೀರು ಹಾಕಿದ ತಾಯಿ, ಆ ದಿನ ಏನಾಯ್ತು? ವಿವರವಾಗಿ ಬಿಚ್ಚಿಟ್ಟ ಪದ್ಮಲತಾಳ ಅಕ್ಕ

Donate Janashakthi Media

Leave a Reply

Your email address will not be published. Required fields are marked *