6 ತಿಂಗಳಲ್ಲೇ ಅಣೆಕಟ್ಟು ಸಮಸ್ಯೆ: ತಂತ್ರಜ್ಞರೊಂದಿಗೆ ಸಿದ್ದರಾಮಯ್ಯ ಸಮಿತಿ ರಚನೆ

ಮೈಸೂರು: ಕೃಷ್ಣರಾಜ ಸಾಗರ (KRS) ಜಲಾಶಯದ 80 ಗೇಟ್ ಏಕಾಏಕಿ‌ ತೆರೆದು ಸುಮಾರು 24 ಗಂಟೆಯಲ್ಲಿ 2000 ಕ್ಯೂಸೆಕ್ ನೀರು ಕಾವೇರಿ ನದಿಗೆ ಇತ್ತೀಚೆಗೆ ಹರಿದು ಹೋಗಿತ್ತು. ಅದೇ ರೀತಿ, ತಿಂಗಳುಗಳ ಹಿಂದೆ ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ತುಂಡಾಗಿ ಕೊಚ್ಚಿಕೊಂಡು ಹೋಗಿ ಸಾವಿರಾರು ಕ್ಯೂಸೆಕ್ ನೀರು ನದಿ ಪಾಲಾಗಿತ್ತು. ಅಣೆಕಟ್ಟು

ಕಳೆದ ಆರು ತಿಂಗಳಲ್ಲಿ ರಾಜ್ಯದ ಪ್ರಮುಖ ಜಲಾಶಯಗಳಲ್ಲೇ ಗೇಟ್‌ ಸಮಸ್ಯೆಯಾಗಿರುವ ಎರಡು ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಜಲಾಶಯಗಳ ನಿರ್ವಹಣೆಗೆ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ತಂತ್ರಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲು ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಅಣೆಕಟ್ಟು

ಗುರುವಾರ ಸಂಜೆ ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿರುವ ಕಾನೂನು ಸಚಿವ ಎಚ್.ಕೆ. ಪಾಟೀಲ್, ‘ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೆಆರ್​ಎಸ್, ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟು (ಆಲಮಟ್ಟಿ ಡ್ಯಾಂ) ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳ ನಿರ್ವಹಣೆಯನ್ನು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಗೆ ವಹಿಸಲು ತೀರ್ಮಾನ ಮಾಡಲಾಗಿದೆ’ ಎಂದಿದ್ದಾರೆ. ಅಣೆಕಟ್ಟು

ಇದನ್ನೂ ಓದಿ: ನೆರೆಹಾನಿಯಿಂದ ಬೆಳೆಹಾನಿಗೊಂಡ ರೈತರಿಗೆ ಬೆಳೆವಿಮೆ ಬಿಡುಗಡೆ

ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ತಾಂತ್ರಿಕ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಸಮಿತಿ ವಾಸ್ತವಿಕ ವಿವರಗಳನ್ನು ಪಡೆದುಕೊಂಡು, ಪರಿಶೀಲಿಸಿದ ಬಳಿಕಷ್ಟೇ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲು ಅಧಿಕಾರ ನೀಡಲಾಗಿದೆ. ಕುಡಿಯುವ ನೀರಿಗೆ ಎದುರಾಗಬಹುದಾದ ಸಮಸ್ಯೆಗಳ ಕುರಿತಂತೆಯೂ ಸಮಿತಿ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಮಿತಿಗೆ ಸಂಪುಟ ಸೂಚನೆ ನೀಡಿದೆ.

ಜೊತೆಗೆ ರಾಜ್ಯ ವಿಪತ್ತು ಉಪಶಮನ ನಿಧಿಯಡಿ 194.80 ಕೋಟಿ ರೂ. ಮೊತ್ತದ 330 ಉಪಶಮನ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ನಿರ್ವಹಿಸಲು ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಾಗಿದೆ. ವಿಜಯಪುರ ಜಿಲ್ಲೆಯಲ್ಲಿ ವಿಯಜಪುರ ನಗರಕ್ಕೆ ಆಲಮಟ್ಟಿಯಿಂದ ಪಿಎಸ್‌ಸಿ ಕೊಳವೆ ಮಾರ್ಗವನ್ನು ಬದಲಾಯಿಸಿ ಎಂಎಸ್ ಪೈಪ್ ಅಳವಡಿಸುವ 50.13 ಕೋಟಿ ರೂ.ಗಳ ಕಾಮಗಾರಿಗೆ ಸಂಪುಟ ಅನುಮೋದನೆ ಕೊಟ್ಟಿದೆ.

ಈಗಾಗಲೇ ಕೆಆರ್​ಎಸ್​ ಡ್ಯಾಂಗೆ ಕಾವೇರಿ ನದಿ ನೀರಿನ ಒಳ ಹರಿವು ಕ್ಷೀಣಿಸಿದೆ. ಬರುತ್ತಿರುವ ನೀರು ಕೂಡ ಮಲಿನವಾಗಿದೆ. ಪ್ರತಿ ವರ್ಷ ಜಲ ಮಂಡಳಿ ನದಿಯುದ್ದಕ್ಕೂ ಅಲ್ಲಲ್ಲಿ ಉಸುಕಿನ ಚೀಲಗಳನ್ನು ಇಟ್ಟು ನೀರು ಸಂಗ್ರಹಣೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಹಾಗೆ ನೀರು ಸಂಗ್ರಹಣೆಯೂ ಆಗುತ್ತಿಲ್ಲ. ಇದೇ ಪರಿಸ್ಥಿತಿ ಹಾರಂಗಿ ಜಲಾಶಯದಲ್ಲೂ ಆಗಿದೆ. ಹೀಗಾಗಿ ರಾಜ್ಯದ ಎಲ್ಲ ಜಲಾಶಗಳಿಂದ ನೀರು ಬಿಡುಗಡೆ ಮಾಡಲು ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದ ಸಮಿತಿ ತೀರ್ಮಾನ ತೆಗೆದುಕೊಳ್ಳಲಿದೆ. ಆ ಮೂಲಕ ಕುಡಿಯುವ ನೀರಿಗೆ ತತ್ವಾರ ಆಗದಂತೆ ತಡೆಯುವುದು ಸರ್ಕಾರದ ಪ್ರಯತ್ನವಾಗಿದೆ.

ಕೆಆರ್ಎಸ್ಘಟನೆ

ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ(KRS) ಜಲಾಶಯದ 80 ಗೇಟ್ ಭಾನುವಾರ ರಾತ್ರಿ ಏಕಾಏಕಿ‌ ತೆರೆದಿದ್ದು, ಮಾ.24 ರಾತ್ರಿ ವರೆಗೆ ಗೇಟ್ ತೆರದೇ ಇತ್ತು. ಹಾಗಾಗಿ ಸುಮಾರು 24 ಗಂಟೆಯಲ್ಲಿ 2000 ಕ್ಯೂಸೆಕ್ ನೀರು ಕಾವೇರಿ ನದಿಗೆ ಹರಿದು ಹೋಗಿತ್ತು. ಅಂದು ರಾತ್ರಿ ಕಾವೇರಿ ನೀರಾವರಿ ನಿಗಮದ ಸಿಬ್ಬಂದಿ ಗೇಟ್ ಮುಚ್ಚಿದರೂ, ಹೆಚ್ಚಿನ ಪ್ರಮಾಣದ ನೀರು ಹರಿದು ಹೋಗುತ್ತಿರುವುದರಿಂದ ಗೇಟ್‌ ಮುಚ್ಚಲು ಅಧಿಕಾರಿಗಳು ಹರಸಾಹಸ ಪಟ್ಟಿದ್ದರು.

ಈ ಹಿಂದೆ ಕಳೆದ ಮುಂಗಾರು ಅವಧಿಯಲ್ಲಿ ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ತುಂಡಾಗಿ ಕೊಚ್ಚಿಕೊಂಡು ಹೋಗಿದ್ದ ಘಟನೆ ನಡೆದಿತ್ತು. ಆಗ ಸಾವಿರಾರು ಕ್ಯೂಸೆಕ್ ನೀರು ನದಿ ಪಾಲಾಗಿತ್ತು. ಗೇಟ್​ ತುಂಡಾಗುತ್ತಿದ್ದಂತೆ ಕಾರ್ಯಪ್ರವೃತ್ತವಾಗಿದ್ದ ಸರ್ಕಾರ ಮತ್ತು ಡ್ಯಾಂ ನಿರ್ವಹಣಾ ಅಧಿಕಾರಿಗಳು ಒಂದು ವಾರದಲ್ಲಿ ಹೊಸ​ ಗೇಟ್​ ಅಳವಡಿಸಿದ್ದರು.

ಇದನ್ನೂ ನೋಡಿ: ದುಡಿಮೆಗೆ ತಕ್ಕ ಬೆಲೆ ಕೊಡದೆ ಹೋದರೆ ಸ್ಕೀಂ ನೌಕರರ ಸಂಕಷ್ಟ ಇನ್ನಷ್ಟು ಹೆಚ್ಚಲಿದೆ – ಮೀನಾಕ್ಷಿ ಸುಂದರಂ Janashakthi

Donate Janashakthi Media

Leave a Reply

Your email address will not be published. Required fields are marked *