ದಲಿತರ ಭೂಮಿ ಕಬಳಿಕೆ: ದಿಢೀರ್‌ ಪ್ರತಿಭಟನೆ ನಡೆಸಿದ ಕೆಪಿಆರ್‌ಎಸ್‌

ಚಿಕ್ಕಬಳ್ಳಾಪುರ: ದಲಿತರಿಗೆ ಮತ್ತು ಸಾರ್ವಜನಿಕರ ನಿವೇಶನಗಳಿಗಾಗಿ ಮಂಜೂರಾಗಿದ್ದ ಭೂಮಿಯನ್ನು ಕೆಲವು ಖಾಸಗಿ ವ್ಯಕ್ತಿಗಳು ತಮ್ಮ ಸ್ವಂತಕ್ಕೆ ಉಳುಮೆ ಮಾಡಿ ಕಬಳಿಕೆ ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌) ಸಂಘಟನೆಯು ಕಬಳಿಕೆಗೆ ಮುಂದಾಗಿದ್ದ ನಿವೇಶನದಲ್ಲಿಯೇ ದಿಢೀರ್‌ ಪ್ರತಿಭಟನೆ ನಡೆಸಿತು.

ಚಿಕ್ಕಬಳ್ಳಾಪುರ ಜಿಲ್ಲೆ, ಬಾಗೇಪಲ್ಲಿ ತಾಲ್ಲೂಕು ಕಾನಗ ಮಾಕಳಪಲ್ಲಿ ಪಂಚಾಯಿತಿಯ ಕೊತ್ತಕೋಟೆ ಗ್ರಾಮದಲ್ಲಿ ಮಂಜೂರಾತಿ ಪಡೆದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಪಲಾನುಭವಿಗಳಿಗೆ ಭೂ ನಿವೇಶನವನ್ನು ದೊರಕಿಸಿಕೊಡಬೇಕೆಂದು ನವೆಂಬರ್‌ 25ರಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದ ಕರ್ನಾಟಕ ಪ್ರಾಂತ ರೈತ ಸಂಘ ಮನವಿ ಸಲ್ಲಿಸಿದೆ.

ಸದರಿ ಪ್ರಕರಣವು ಜಿಲ್ಲಾಧಿಕಾರಿಗಳ ಮುಂದೆ ಇದ್ದು ಜಿಲ್ಲಾಧಿಕಾರಿಗಳು ಪ್ರಕರಣವನ್ನು ಪರಿಶೀಲಿಸುತ್ತೇವೆ ಎಂದಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಖಾಸಗಿ ವ್ಯಕ್ತಿಗಳು ಸಾರ್ವಜನಿಕರಿಗೆ ನಿವೇಶನಗಳಿಗಾಗಿ ಮಂಜೂರು ಮಾಡಿದ್ದ ಭೂಮಿಯನ್ನು ಉಳುಮೆ ಮಾಡಲು ಮುಂದಾಗಿರುವುದಕ್ಕೆ ಕೆಪಿಆರ್‌ಎಸ್‌ ಪ್ರತಿಭಟನೆ ಮೂಲಕ ವಿರೋಧ ವ್ಯಕ್ತಪಡಿಸಿದೆ.

ಭೂ ಕಬಳಿಕೆ ವಿರೋಧಿಸಿ ಪ್ರತಿರೋಧವಾಗಿ ಫಲಾನುಭವಿ ಸಾರ್ವಜನಿಕರು ಉಳುಮೆ ಮಾಡಿರುವ ಭೂಮಿಯಲ್ಲಿ ಧರಣಿ ಕುಳಿತಿದ್ದು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಜಿಲ್ಲಾಧಿಕಾರಿಗಳು, ತಾಲೂಕು ದಂಡಾಧಿಕಾರಿಗಳು ತಕ್ಷಣ ಕ್ರಮವಹಿಸಿ ದಲಿತ ಕುಟುಂಬಗಳ ಭೂಮಿ ಹಕ್ಕನ್ನು ರಕ್ಷಿಸಿ  ನ್ಯಾಯಯುತವಾಗಿ ಬಗೆಹರಿಸಬೇಕೆಂದು ಪಟ್ಟುಹಿಡಿದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *