ಬೆಂಗಳೂರು: ದಲಿತರನ್ನು ಬಡಿದೆಬ್ಬಿಸಿದ ಎಪ್ಪತ್ತರ ದಶಕದಲ್ಲಿ ನಗರದ ಶ್ರೀರಾಮಪುರದ ಗುಡಿಸಲಿನಲ್ಲಿ ಕೂತು ಗುಡಿಸಲುಗಳು ಗುಡುಗುತ್ತಿವೆ, ಬಂಗಲೆಗಳು ನಡಗುತ್ತಿವೆ ಎಂದು…….. ಇಕ್ಕ್ರಲಾ, ಒದಿರ‍್ಲಾ ಈ ನನ್ಮ್‌ಕ್ಕಳಾ ಚರ್ಮ ಎಬ್ರುರ‍್ಲಾ……. ಎಂದು ಅಸಮಾನತೆ , ಜಾತಿ ದೌರ್ಜನ್ಯದ ವಿರುದ್ದ ಆರ್ಭಟಿಸಿದ ದಲಿತ ಧ್ವನಿ ಇನ್ನಿಲ್ಲವಾಗಿ, ಆ ಧ್ವನಿಯ ಶಕ್ತಿ ಸಿದ್ದಲಿಂಗಯ್ಯ ಅವರಿಗೆ ದಲಿತ ಹಕ್ಕುಗಳ ಸಮಿತಿ, ಕರ್ನಾಟಕ(ಡಿಹೆಚ್‌ಎಸ್) ಸಂಘಟನೆಯು ಶ್ರದ್ಧಾಂಜಲಿಯನ್ನು ಅರ್ಪಿಸಿದೆ.
ಇದನ್ನು ಓದಿ: ಕವಿ ಡಾ. ಸಿದ್ದಲಿಂಗಯ್ಯ ನಿಧನ
ಊರುರು ಸುತ್ತಿ ದಲಿತರನ್ನು ತನ್ನ ತೀವಿಯುವ ಮಾತುಗಳಿಂದ ಬೃಹತ್ ದಲಿತ ಚಳುವಳಿ ಕಟ್ಟಿದವರು. ನೊಂದ ಜನರ ಬದುಕಿನ ಬಗ್ಗೆ ಮಿಡಿದವರು ನಮ್ಮಿಂದ ದೂರವಾಗಿದ್ದಾರೆ. ಆದರೆ ಅವರ ಬರಹಗಳನ್ನು ನಮ್ಮೊಂದಿಗೆ ಬಿಟ್ಟು ಸಮಾಜ ಬದಲಾವಣೆಗೆ ದಾರಿ ದೀಪವಾಗಿದ್ದಾರೆ ಎಂದು ಡಿಹೆಚ್‌ಎಸ್ ಸಂಘಟನೆಯು ಸ್ಮರಿಸಿದೆ.
ಅಪಾರ ನೋವಿನಿಂದ ದಲಿತ ಹಕ್ಕುಗಳ ರಾಜ್ಯ ಸಮಿತಿಯು ಕ್ರಾಂತಿಕಾರಿ ಶ್ರದ್ದಾಂಜಲಿಯನ್ನು ಸಲ್ಲಿಸಿದೆ.