ಗಂಗಾವತಿ: ಗಂಗಾವತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಲಿತ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆಗೊಳಗಾದ ಯುವಕ ತಾಲ್ಲೂಕಿನ ಸಂಗಾಪೂರ ಗ್ರಾಮದ ನಿವಾಸಿ ಸಿದ್ದು ಭೋವಿ ಎಂದು ತಿಳಿದುಬಂದಿದೆ. ದಲಿತ
ಹಲ್ಲೆಗೊಳಗಾದ ಯುವಕನ ಸಹೋದರ ನೀಡಿದ ದೂರಿನ ಮೇಲೆ ಪೊಲೀಸರು ಒಟ್ಟು ಹತ್ತು ಜನರ ಮೇಲೆ ಪ್ರಕರಣ ದಾಖಲಿಸಿದ್ದು, ಈವರೆಗೆ ಮೂರು ಜನರನ್ನು ಬಂಧಿಸಲಾಗಿದೆ ಮತ್ತು ಉಳಿದವರಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಮುಂಡಗೋಡ: ಅಂಗನವಾಡಿಗೆ ಹೋಗುತ್ತಿದ್ದ ಐದು ವರ್ಷದ ಬಾಲಕಿ ಹಾವು ಕಚ್ಚಿ ಸಾವು
ಪ್ರಕರಣದ ಹಿನ್ನೆಲೆ
ಸಂಬಂಧಿಕರನ್ನು ಬಿಟ್ಟು ಬರಲು ಡಿ.27ರ ರಾತ್ರಿ 11 ಗಂಟೆಗೆ ಗಂಗಾವತಿಗೆ ತೆರಳಿದ್ದ ಹಲ್ಲೆಗೊಳಗಾದ ಯುವಕ ಸಿದ್ದು ಭೋವಿ ಮತ್ತು ಆತನ ಸ್ನೇಹಿತರ ಮೇಲೆ ಮದ್ಯ ಸೇವಿಸಿದ್ದ ಗುಂಪು ಒಂದು ಅವರನ್ನು ಆಡಗಟ್ಟಿ ಆವಾಚ್ಯ ಶಬ್ದಗಳಿಂದ ನಿಂದಿಸಿ, ಮದ್ಯದ ಬಾಟಲಿಯಿಂದ ತಲೆಗೆ ಹೊಡೆದಿದ್ದಾರೆ ಮತ್ತು ಅವರನ್ನು ಮನ ಬಂದಂತೆ ಥಳಿಸಿದ್ದಾರೆ.
ಅವರು ಚೀರಾಡುವುದನ್ನು ನೋಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಮುಂಚೆ ಮಣ್ಣು ಸಾಗಿಸುವ ವಿಚಾರಕ್ಕೆ ಜಗಳ ನಡೆದಿತ್ತು ಎಂದು ತಿಳಿದು ಬಂದಿದೆ. ಸದ್ಯ ಹಲ್ಲೆಗೊಳಗಾದ ಯುವಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ನೋಡಿ: ನಿರಂಜನ -100| ಬುದ್ಧಿ ಭಾವ ಬದುಕು – ಬಂಜಗೆರೆ ಜಯಪ್ರಕಾಶ Janashakthi Media