ಅಯೋಧ್ಯೆ| ದಲಿತ ಯುವತಿಯ ಕೊಲೆ ಪ್ರಕರಣ: ಮುಖ್ಯ ಆರೋಪಿ ಅರೆಸ್ಟ್‌

ಕ್ನೊ: ನೆನ್ನೆ ಸೋಮವಾರದಂದು ಅಯೋಧ್ಯೆಯಲ್ಲಿ ನಡೆದಿದ್ದ ದಲಿತ ಯುವತಿಯ ಕೊಲೆ ಸಂಬಂಧ ಮುಖ್ಯ ಆರೋಪಿ ದಿಗ್ವಿಜಯ್ ಹಾಗೂ ಆತನ ಸಹಚರರಾದ ವಿಜಯ್ ಸಾಹು ಹಾಗೂ ಹರಿರಾಮ್ ಕೋರಿ ಒಳಗೊಂಡಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಯೋಧ್ಯೆ

ಮುಖ್ಯ ಆರೋಪಿ ದಿಗ್ವಿಜಯ್ ಮೃತ ಯುವತಿಯ ಗ್ರಾಮವಾದ ಸಹ್ನಾವದ ನಿವಾಸಿಯಾಗಿದ್ದಾನೆ ಎಂದು ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ರಾಜ್ ಕರಣ್ ನಯ್ಯರ್  ತಿಳಿಸಿದ್ದಾರೆ.

ಮೃತ ಯುವತಿಯು ದಿಗ್ವಿಜಯ್ ನೊಂದಿಗೆ ಸಲುಗೆಯಿಂದಿದ್ದಳು ಹಾಗೂ ಎರಡು ತಿಂಗಳ ಹಿಂದೆ ದಿಗ್ವಿಜಯ್ ನೊಂದಿಗೆ ಆಕೆಯನ್ನು ಆಕೆಯ ಸಹೋದರ ನೋಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ: ಅನಧಿಕೃತವಾಗಿ ಸಾಲ ಕೊಟ್ಟರೆ ಮನ್ನಾ, 10 ವರ್ಷ ಶಿಕ್ಷೆ

ನನ್ನ ಸಹೋದರಿಯಿಂದ ದೂರ ಉಳಿಯುವಂತೆ ದಿಗ್ವಿಜಯ್ ಗೆ ಎಚ್ಚರಿಕೆ ನೀಡಿದ್ದ ಯುವತಿಯ ಸಹೋದರ, ಆತನನ್ನು ತೀವ್ರವಾಗಿ ಥಳಿಸಿದ್ದ ಎನ್ನಲಾಗಿದೆ. ಇದರಿಂದ ಅಪಮಾನಿತನಾದ ದಿಗ್ವಿಜಯ್, ಪ್ರತೀಕಾರವಾಗಿ ಯುವತಿಯನ್ನು ಹತ್ಯೆಗೈದಿದ್ದಾನೆ ಎಂದು ಹೇಳಲಾಗಿದೆ.

22 ವರ್ಷದ ಯುವತಿಯು ಗುರುವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು. ದೇಹದ ಮೇಲೆ ಹಲವು ಗಾಯಗಳು ಹಾಗೂ ಮುರಿದ ಕಾಲುಗಳೊಂದಿಗೆ ಆ ಯುವತಿಯ ನಗ್ನ ಮೃತದೇಹವು ಶನಿವಾರ ಬೆಳಗ್ಗೆ ಗ್ರಾಮದ ಹೊರವಲಯದಲ್ಲಿರುವ ಬತ್ತಿದ ನಾಲೆಯೊಂದರಲ್ಲಿ ಪತ್ತೆಯಾಗಿತ್ತು.

ಇದನ್ನೂ ನೋಡಿ: ನೈತಿಕ ನಿಷ್ಠಾವಂತ, ತಾತ್ವಿಕ ಹೃದಯವಂತ ಜಿ.ಸಿ. ಬಯ್ಯಾರೆಡ್ಡಿ – ಬರಗೂರು ರಾಮಚಂದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *