ಹಿರಿಯ ಸಾಹಿತಿ, ನಾಟಕಕಾರ ಡಾ. ರಾಜಪ್ಪ ದಳವಾಯಿ ಅವರು 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ದಳವಾಯಿ ಮೇಸ್ಟ್ರ ಅಭಿಮಾನಿ ಬಳಗ ವತಿಯಿಂದ ಮಾರ್ಚ್ 30ರಂದು ʻದಳವಾಯಿ ಮೇಸ್ಟ್ರು 60ʼ ಒಂದು ದಿನದ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಇಡೀ ದಿನ ನಡೆಯಲಿರುವ ಕಾರ್ಯಕ್ರಮದಲ್ಲಿ ಬೀದಿ ನಾಟಕ, ಸಾಕ್ಷ್ಯಚಿತ್ರ, ಪುಸ್ತಕ ಬಿಡುಗಡೆ, ಹಾಡುಗಳು, ನಾಟಕ ಪ್ರದರ್ಶನ, ಸಂವಾದ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಗಳ ವಿವರ ಹೀಗಿವೆ;
ಬೆಳಿಗ್ಗೆ 9.30ಕ್ಕೆ ಕಲಾಕ್ಷೇತ್ರದ ಆವರಣ
ಜಾತಿ ಮಾಡ ಬ್ಯಾಡಿರಿ – ಬೀದಿ ನಾಟಕ, ನಿರ್ದೇಶನ : ಶಂಕರಯ್ಯ ಘಂಟಿ, ಗುಲಬರ್ಗ, ಅಭಿನಯ: ಕರ್ನಾಟಕ ರಂಗ ಅಧ್ಯಯನ ಟ್ರಸ್ಟ್, ಕೊಡಿಯಾಲ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ
ವೇದಿಕೆ ಕಾರ್ಯಕ್ರಮ
ಬೆಳಿಗ್ಗೆ 10.00 ರಿಂದ – ಸಾಕ್ಷ್ಯಚಿತ್ರ ಪ್ರದರ್ಶನ
ಬೆಳಿಗ್ಗೆ 10.30ರಿಂದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವಿದ್ದು, ಇದರಲ್ಲಿ ದಳವಾಯಿ ಡಜನ್ ನಾಟಕಗಳು, ಪ್ರೀತಿಯ ದಳವಾಯಿ ಮೇಸ್ಟ್ರು, ಕ್ರಿಯಾಪದ, ಡಾ. ರಾಜಪ್ಪ ದಳವಾಯಿ ರಂಗಾನುಸಂಧಾನ ಬಿಡುಗಡೆಯಾಗಲಿದೆ.
ಅತಿಥಿಗಳಾಗಿ ಪ್ರೊ. ಬರಗೂರು ರಾಮಚಂದ್ರಪ್ಪ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್, ಡಾ. ಬಿ.ವಿ. ರಾಜಾರಾಮ್, ಡಾ. ಎಚ್.ಎಲ್. ಪುಷ್ಪ ಭಾಗವಹಿಸಲಿದ್ದಾರೆ.
11.30 ರಿಂದ ಹಾಡುಗಳ ಧ್ವನಿಸಾಂದ್ರ ಬಿಡುಗಡೆ ಕಾರ್ಯಕ್ರಮವಿದ್ದು, ಇದರಲ್ಲಿ ಡಾ. ಹಂಸಲೇಖ, ಅಪ್ಪಗೆರೆ ತಿಮ್ಮರಾಜು, ಜನ್ನಿ, ಪಿಚ್ಚಳ್ಳಿ ಶ್ರೀನಿವಾಸ, ಜೋಗಿಲ ಸಿದ್ದರಾಜು, ಕೋಲಾರ ರಾಜಪ್ಪ, ನರಸಿಂಹಮೂರ್ತಿ ಚಾಮರಾಜನಗರ, ರಾಮಚಂದ್ರ ಹಡಪದ್ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 12 ರಿಂದ ನಾಟಕ ಪ್ರದರ್ಶನ
ನಾಟಕ: ದಾರಾಶಿಕೊ | ನಿರ್ದೇಶನ: ಡಾ. ರಾಮಕೃಷ್ಣಯ್ಯ | ಅಭಿನಯ: ಕಲಾಮೈತ್ರಿ, ಬೆಂಗಳೂರು ವಿಶ್ವವಿದ್ಯಾಲಯ
ಮಧ್ಯಾಹ್ನ 2.15 ರಿಂದ ಬಲ್ಲವರು ಕಂಡಂತೆ ದಳವಾಯಿ ಮೇಸ್ಟ್ರು
ಅಧ್ಯಕ್ಷತೆ : ಡಾ. ಸಿ.ಎಸ್. ದ್ವಾರಕಾನಾಥ್
ಅತಿಥಿಗಳು : ಕೆ. ರಾಮಯ್ಯ, ಸಿ. ಬಸವಲಿಂಗಯ್ಯ, ಮಲ್ಲಿಕಾರ್ಜುನ ಮಹಾಮನೆ, ಪ್ರಭುದೇವ ಕಪ್ಪಪಗಲ್ಲು, ಡಾ. ಟಿ.ಎಸ್. ವಿವೇಕಾನಂದ, ಡಾ. ಲಕ್ಷ್ಮಣದಾಸ್, ಶಶಿಧರ ಬಾರಿಘಾಟ್, ಸಂದೇಶಜವಳಿ, ರೇವಣಸಿದ್ಧಯ್ಯ, ಮಾವಳ್ಳಿ ಶಂಕರ್, ಎನ್.ಎಸ್. ಶಂಕರ್, ಡಾ. ಅಖ್ತರ್, ಬಿ. ಎಂ. ಪುಟ್ಟಯ್ಯ, ಡಾ. ಸ್ವಾಮಿ, ಡಾ. ಎಂ.ಜಿ. ಈಶ್ವರಪ್ಪ, ಡಾ. ಕೆ.ವೈ. ನಾರಾಯಣಸ್ವಾಮಿ, ಡಾ. ಸಂಗಮನಾಥ ಲೋಕಾಪುರ, ಬಾಲಗುರುಮೂರ್ತಿ, ಮಂಜುನಾಥ ಅದ್ದೆ, ಡಾ. ಎಂ.ಎಸ್. ಮೂರ್ತಿ, ನಟರಾಜ ಹೊನ್ನವಳ್ಳಿ, ಡಾ. ವೈ.ಬಿ. ಹಿಮ್ಮಡಿ, ಸುಂದರರಾಜಾರಸು.
ಕನ್ನಡ ಸಾಹಿತ್ಯ ಕೋಶಕ್ಕೆ ಕೆಲಸ ಮಾಡಿದವರಿಗೆ ಅಭಿನಂದನೆ
ಅಭಿನಂದಿಸುವವರು: ತಾ.ನಂ. ಕುಮಾರಸ್ವಾಮಿ,
ಅಭಿನಂದಿತರು : ಡಾ. ಎ.ಬಿ. ಉಮೇಶ್, ಡಾ. ಸಿ.ಡಿ. ಪರಶುರಾಮ್, ನಾಗಮಣಿ, ಚಂದ್ರಕಲ, ಡಾ. ಎಂ. ಸಿದ್ಧಪ್ಪ, ಡಾ. ಸೋಮಣ್ಣ ಹೊಂಗಳ್ಳಿ, ಡಾ. ಸ್ವಾಮಿ ನ. ಕೊಡಿಹಳ್ಳಿ (ದಿ), ಲಕ್ಷ್ಮೀಕಾಂತ ಗೌರಿಪುರ, ಮಂಜುಳಾ ಜಿ., ಶ್ರೀನಿವಾಸ, ಶರೀಫ, ಸಾಬಾ ಅಂದಪ್ಪನವರ
ಸಂಜೆ 5.00 ರಿಂದ ನಾಟಕ ಪ್ರದರ್ಶನ
ನಾಟಕ: ಭಾರತದ ಪ್ರಜೆಗಳಾದ ನಾವು (We The People of India) | ನಿರ್ದೇಶನ: ಕೆ.ಪಿ. ಲಕ್ಷ್ಮಣ್ | ಅಭಿನಯ: ರಂಗಾಯಣ, ಶಿವಮೊಗ್ಗ
ಸಂಜೆ 6.30ಕ್ಕೆ ಸಮಾರೋಪ
ಅತಿಥಿಗಳು: ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಅಗ್ರಹಾರ ಕೃಷ್ಣಮೂರ್ತಿ, ಡಾ. ವೆಂಕಟಸ್ವಾಮಿ, ಡಾ. ಕೆ. ಶರೀಫ
ಇಡೀ ಕಾರ್ಯಕ್ರಮದ ನಿರೂಪಣೆ: ಶಿವಲಿಂಗಪ್ರಸಾದ್ ಅವರಿಂದ.