ಬೆಂಗಳೂರು: ಈ ಹಿಂದೆ ಯಾವುದೇ ಹುದ್ದೆ ಇಲ್ಲದೇ ಇದ್ದಂತ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಗೆಜೆಟಿಯರ್ ಸಂಪಾದಕಿಯ ಹುದ್ದೆಯನ್ನು ನೀಡಲಾಗಿತ್ತು. ಇದೀಗ ರಾಜ್ಯ ಸರ್ಕಾರ ರೋಹಿಣಿ ಸಿಂಧೂರಿಗೆ ಹುದ್ದೆ ನೀಡಿದ ಮರು ದಿನವೇ ಐಪಿಎಸ್ ಅಧಿಕಾರಿ ಡಿ.ರೂಪಾಗೆ ಹುದ್ದೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ:ಡಿ ರೂಪಾ, ರೋಹಿಣಿ ಸಿಂಧೂರಿ ವಿರುದ್ಧ ಇಲಾಖೆ ಮಟ್ಟದಲ್ಲಿ ವಿಚಾರಣೆಗೆ ಸರ್ಕಾರ ಆದೇಶ
ಐಪಿಎಸ್ ಅಧಿಕಾರಿ ರೂಪಾ.ಡಿ ಸೇರಿದಂತೆ ನಾಲ್ವರು ಅಧಿಕಾರಿಗಳನ್ನ ಗುರುವಾರ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ. ಈಗ ರೂಪಾಗೆ ಆಂತರಿಕ ಭದ್ರತಾ ವಿಭಾಗದ ಐಜಿಪಿ ಹುದ್ದೆಗೆ ನಿಯೋಜಿಸಿದೆ.
ಇನ್ನೂ ಮಂಗಳೂರು ಆಯುಕ್ತ ಹುದ್ದೆಯಿಂದ ವರ್ಗಾವಣೆಗೊಂಡಿದ್ದ ಕುಲದೀಪ್ ಕುಮಾರ್ ಜೈನ್ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಸಂಚಾರದ ಡಿಸಿಪಿಯಾಗಿ ನಿಯೋಜಿಸಿದೆ.