ಏಕ ಸಂಸ್ಕೃತಿ ಹೇರುತ್ತಿರುವವರಿಗೆ ಸೌಹಾರ್ದ ನೆಲದ ಪಾಠ ಕಲಿಸಬೇಕಿದೆ- ಶಿವಾಚಾರ್ಯರು

ಲಬುರಗಿ: ಇಂದು ಅನೇಕ ಜನ ಹೆಂಡಕ್ಕೆ, ಹಣಕ್ಕೆ ಆಮೀಶಕ್ಕೆ ಒಳಗಾಗಿ ಈ ನೆಲದ ಬಹು ಸಂಸ್ಕೃತಿ ನಾಶ ಮಾಡುವ ಜನರಿಗೆ ಮಾರಿಕೊಂಡಿದ್ದಾರೆ ಎಂದು  ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯರು ಕಳವಳ ವ್ಯಕ್ತಪಡಿಸಿದರು.ಸಮಯ 

ಸೌಹಾರ್ದ ಕರ್ನಾಟಕ ಸಂಘಟನೆ ಆಯೋಜಿಸಿದ್ದ ‘ಬಹುತ್ವ ಸಂಸ್ಕೃತಿ ಭಾರತೋತ್ಸವ’ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ವ ಜನಾಂಗದ ಶಾಂತಿಯ ತೋಟವನ್ನು ಒಡೆದು ಏಕ ಸಂಸ್ಕೃತಿ ಹೇರುವ ಮಂಗಗಳಿಂದ ಸಂಪೂರ್ಣ ನಾಶವಾಗಿದೆ. ಇದನ್ನು ತಪ್ಪಿಸಲು ನಾಡಿನ ಚುಕ್ಕಾಣಿ ಹಿಡಿದವರು ಬದಲಾಗಬೇಕು. ಹಾಗಾಗಿ, ನೀವೇ ಸರ್ಕಾರವಾಗಬೇಕು ಇದು ಎಲ್ಲರ ಸಾಮೂಹಿಕ ಜವಾಬ್ದಾರಿ ಎಂದು ಸಲಹೆ ನೀಡಿದ ಅವರು, ಪ್ರಕೃತಿ ಉಳಿಯಬೇಕು, ಶೈಕ್ಷಣಿಕ ಕ್ಷೇತ್ರ ಬದಲಾಗುವ ಮೂಲಕ ಮೇಲ್ದರ್ಜೆಗೇರಬೇಕು ಹಾಗೂ ರಾಜಕಾರಣ ಶುದ್ಧೀಕರಣವಾಗಬೇಕು ಎಂದು ಹೇಳಿದರು.

ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರಂತಹ ಸಂತರ ಸಂದೇಶಗಳನ್ನು ಹೃದಯದಲ್ಲಿ ಬಚ್ಚಿಟ್ಟುಕೊಳ್ಳಬೇಕು. ಅವುಗಳನ್ನು ಆಚರಣೆಯಲ್ಲಿ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಬಹುತ್ವ ಭಾರತವನ್ನು ಮತ್ತೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರು| ಟಿಪ್ಪು ನಗರ ಮಸೀದಿ ಅಧ್ಯಕ್ಷ ಸೇರಿ 50 ಜನರ ವಿರುದ್ಧ ಎಫ್ಐಆರ್ ದಾಖಲು

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಣಿ ಎಸ್‌.ಅಪ್ಪ ಮಾತನಾಡಿ, ‘ಭಾರತ ಹಲವು ಜಾತಿ, ಧರ್ಮ, ಸಂಸ್ಕೃತಿಗಳನ್ನು ಒಳಗೊಂಡಂತಹ ಅದ್ಭುತವಾದ ದೇಶ. ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬಾಳುತ್ತಿದ್ದೇವೆ. ಅದರಲ್ಲಿ ಕಲ್ಯಾಣ ಕರ್ನಾಟಕ ಶರಣ, ಸಂತರ, ಸೂಫಿಗಳ ನಾಡು. ಅಲ್ಲರನ್ನು ಅಪ್ಪಿಕೊಂಡು, ಒಪ್ಪಿಕೊಂಡಿರುವ ನಾಡು. ಮಹಿಳೆಯರಿಗೆ ಸಮಾನತೆ ಕೊಟ್ಟು ಗುರುವಿನ ಸ್ಥಾನದಲ್ಲಿ ಇರಿಸಲಾಗಿದೆ’ ಎಂದು ಹೇಳಿದರು.

ಕನ್ನಡ ಭವನದಿಂದ ಜಗತ್‌ ವೃ‌ತ್ತದವರೆಗೆ ಮಠಾಧೀಶರ ನೇತೃತ್ವದಲ್ಲಿ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಭಾಲ್ಕಿ ಬಸವಲಿಂಗ ಪಟ್ಟದೇವರು, ಸೇಂಟ್ ಮೇರಿ ಚರ್ಚ್‌ನ ಸ್ಟ್ಯಾನಿ ಲೋಬೊ, ಮಳಖೇಡದ ಸೈಯದ್ ಶಾ ಖಾದ್ರಿ, ವರಜ್ಯೋತಿ ಭಂತೇಜಿ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು  ಚಿಂತಕಿ ಕೆ.ನೀಲಾ, ಪ್ರೊ.ಟಿ.ಆರ್.ಚಂದ್ರಶೇಖರ, ಎಸ್.ಜಿ. ಸಿದ್ರಾಮಯ್ಯ, ಅಲ್ಲಮಪ್ರಭು ಬೆಟ್ಟದೂರು, ಎಸ್.‌ ವರಲಕ್ಷ್ಮಿ, ಕೆ.ಎಸ್. ವಿಮಲಾ, ಬಸವರಾಜ ಸೂಳಿಭಾವಿ, ಮಹೇಶ ರಾಠೋಡ, ಭೀಮಾಶಂಕರ ಮಾಡ್ಯಾಳ,  ಕಾಶೀನಾಥ ಅಂಬಲಗೆ, ಪ್ರಭು ಖಾನಾಪುರೆ, ಪ್ರಭುಲಿಂಗ ಮಹಾಗಾಂವಕರ್, ಸುಜಾತಾ ಕೆ., ಶಾಂತಾ ಘಂಟೆ, ಶ್ರೀಮಂತ ಬಿರಾದಾರ, ಸುಧಾಮ ಧನ್ನಿ, ಲವಿತ್ರಾ ವಸ್ತ್ರದ, ದಸಂಸ ಮರಿಯಪ್ಪ ಹಳ್ಳಿ ಲಚ್ಚಪ್ಪ ಜಮಾದಾರ, ಅರ್ಜುನ್ ಬದ್ರೆ ಸೇರಿ ಹಲವರು ಉಪಸ್ಥಿತರಿದ್ದರು. ಮೇಘಾ ತಡಕಲ್ ವಚನ ಗೀತೆ ಹಾಡಿದರು. ಸುರೇಶ ಹಾದಿಮನಿ ಸ್ವಾಗತಿಸಿ, ಚಿಂತಕಿ ಮೀನಾಕ್ಷಿ ಬಾಳಿ ನಿರೂಪಿಸಿದರು.

 

ಇದನ್ನೂ ನೋಡಿ: ಕಲಬುರಗಿ | ಬಹುತ್ವ ಭಾರತ ಉಳಿಸುವುದು ಅಗತ್ಯ : ದಾಕ್ಷಾಯಿಣಿ ಶರಣಬಸಪ್ಪ ಅಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *