ಧಾರವಾಡ: ಗುರುವನ್ನು ದೇವರಿಗೆ ಹೋಲಿಸಿದ್ದಾರೆ. ಆದರೆ, ದೇವರ ರೂಪದಲ್ಲಿರುವ ಗುರುವೊಬ್ಬ ಬೈಲಹೊಂಗಲ ತಾಲೂಕಿನ ಪುಳಾರಕೊಪ್ಪ ಗ್ರಾಮದ 8ನೇ ತರಗತಿಯ ವಿದ್ಯಾರ್ಥಿಯ ಮೇಲೆ ಕ್ರೌರ್ಯ ಪ್ರದರ್ಶಿಸಿದ್ದಾನೆ. ಈ ವಿದ್ಯಾರ್ಥಿಯ ಹೆಸರು ಪ್ರವೀಣ ಕರಡಿಗುದ್ದಿ. ಧಾರವಾಡ
ಈ ವಿದ್ಯಾರ್ಥಿ ಧಾರವಾಡದ ಬುದ್ಧರಕ್ಕಿತ ವಸತಿ ಶಾಲೆಯಲ್ಲಿದ್ದುಕೊಂಡು ಓದುತ್ತಿದ್ದಾನೆ. ಈತ ಇನ್ನೊಬ್ಬ ವಿದ್ಯಾರ್ಥಿ ಜೊತೆ ನೀರಿನ ಬಾಟಲಿ ಸಲುವಾಗಿ ಜಗಳ ಮಾಡಿದ ಎಂಬ ಕಾರಣಕ್ಕೆ ಅದೇ ಶಾಲೆಯ ದೈಹಿಕ ಶಿಕ್ಷಕ ಸಾಯಿಪ್ರಸಾದ್ ಎಂಬಾತ ಈ ವಿದ್ಯಾರ್ಥಿ ಮೇಲೆ ಕ್ರೌರ್ಯ ಮೆರೆಯುವುದರ ಜೊತೆಗೆ ಆ ವಿದ್ಯಾರ್ಥಿಯನ್ನು ರೂಮ್‌ನಲ್ಲಿ ಕೂಡಿಹಾಕಿ ಅಮಾನುಷವಾಗಿ ನಡೆಸಿಕೊಂಡಿದ್ದಾನೆ. ಧಾರವಾಡ
ಪ್ರವೀಣ ಎಂಬ ಈ ವಿದ್ಯಾರ್ಥಿ ಇನ್ನೊಬ್ಬ ವಿದ್ಯಾರ್ಥಿಯೊಂದಿಗೆ ಜಗಳ ಮಾಡಿದ್ದನ್ನೇ ನೆಪವಾಗಿಸಿಕೊಂಡ ಶಿಕ್ಷಕ ಸಾಯಿಪ್ರಸಾದ್ ಆ ವಿದ್ಯಾರ್ಥಿಯ ಮುಂಗೈ ಹಿಸುಕಿದ್ದಾನೆ. ಆನಂತರ ಬೆರಳುಗಳನ್ನು ಹಿಡಿದು ಮುಂಬೈ ಮಧ್ಯೆ ಸೀಳಿದ್ದಾನೆ. ಇದರಿಂದ ಪ್ರವೀಣ ಎಂಬ ಈ ವಿದ್ಯಾರ್ಥಿ ತಲೆ ಸುತ್ತು ಬಂದು ಕೆಳಗಡೆ ಬಿದ್ದಿದ್ದಾನೆ.
ಇದನ್ನೂ ಓದಿ: ಬೆಂಗಳೂರು| ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ರಾಜ್ಯ ಸರ್ಕಾರ ಕಡಿವಾಣ
ಶಿಕ್ಷಕ ಬೆರಳುಗಳನ್ನು ಸೀಳಿದ್ದರಿಂದ ಕೈಗೆ ಕೊಡಲಿ ಏಟು ಕೊಟ್ಟಂತಾಗಿತ್ತು. ಆನಂತರ ತಾನೇ ಆ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೊಲಿಗೆ ಹಾಕಿಸಿಕೊಂಡು ಬಂದು ಆ ವಿದ್ಯಾರ್ಥಿಯನ್ನು ಹಾಸ್ಟೆಲ್‌ನಲ್ಲಿ ಕೂಡಿ ಹಾಕಿ ಮನೆಯವರಿಗೆ ಈ ವಿಷಯ ಹೇಳದಂತೆ ಬೆದರಿಕೆ ಹಾಕಿದ್ದಾನಂತೆ.
ವಿದ್ಯಾರ್ಥಿ ಮೇಲೆ ಇಷ್ಟೆಲ್ಲ ಶಿಕ್ಷಕ ಅಮಾನುಷವಾಗಿ ವರ್ತನೆ ಮಾಡಿ ಹಲ್ಲೆ ಮಾಡಿದರೂ ಪೊಲೀಸರು ಮಾತ್ರ ರಾಜಕೀಯ ಒತ್ತಡದಿಂದ ಆತನ ಮೇಲೆ ಎಫ್‌ಐಆರ್ ದಾಖಲಿಸಿಕೊಳ್ಳುತ್ತಿಲ್ಲ. ಆ ಶಿಕ್ಷಕ ತಮ್ಮ ಮಗನನ್ನು ಜಾತಿ ಹಿಡಿದು ಕೂಗುವುದಲ್ಲದೇ ತಮ್ಮ ಜಾತಿಗೂ ಅವಮಾನ ಮಾಡಿದ್ದಾನೆ ಎಂದು ವಿದ್ಯಾರ್ಥಿ ಪ್ರವೀಣನ ಪೋಷಕರು ಆರೋಪಿಸಿದ್ದಾರೆ. ಶಾಲಾ ಆಡಳಿತ ಮಂಡಳಿಯವರೂ ನೀವು ಏನು ಮಾಡುತ್ತೀರೋ ಮಾಡಿ ಎಂಬ ಧಮ್ಕಿ ಕೂಡ ಹಾಕಿದ್ದಾರಂತೆ.
ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಶಿಕ್ಷಕನ ವಿರುದ್ಧ ಉಪನಗರ ಠಾಣೆಯಲ್ಲಿ ದೂರು ದಾಖಲಿಸಲು ಹೋದರೆ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಸದ್ಯಕ್ಕೆ ಅರ್ಜಿ ಮಾತ್ರ ಪಡೆದಿರುವ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳದೇ ಇದ್ದಲ್ಲಿ ಠಾಣೆ ಎದುರೇ ಪ್ರತಿಭಟನೆ ಕುಳಿತುಕೊಳ್ಳುವ ನಿರ್ಧಾರವನ್ನು ವಿದ್ಯಾರ್ಥಿ ಪೋಷಕರು ಹಾಗೂ ಸಂಬಂಧಿಕರು ಕೈಗೊಂಡಿದ್ದಾರೆ.
ಇದನ್ನೂ ನೋಡಿ: ತುಮಕೂರು | 7.20 ಲಕ್ಷ ಬಡ್ಡಿ ಕಟ್ಟಿದರೂ ತೀರದ ಅಸಲು : ಸಾಲಗಾರ ಸತ್ತರು ಕುಟುಂಬಸ್ಥರಿಗೆ ನಿಲ್ಲದ ಕಿರುಕುಳ