ಕೋಕ್‌ ಬದಲು ಹೆಚ್ಚು ನೀರು ಕುಡಿಯಿರಿ ಎಂದ ರೊನಾಲ್ಡೊ – ಕೋಕ್‌ ಕಂಪನಿಗೆ 29 ಸಾವಿರ ಕೋಟಿ ನಷ್ಟ

ಪೋರ್ಚುಗಲ್: ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಪತ್ರಿಕಾಗೋಷ್ಠಿಯಲ್ಲಿ ಕೋಕ್ ಬಾಟಲಿಗಳನ್ನು ದೂರ ಸರಿಸಿ ನೀರು ಕುಡಿಯಿರಿ ಎಂದು ಹೇಳಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಂಗೇರಿ ವಿರುದ್ಧದ ಯುರೋ 2020 ಪಂದ್ಯಕ್ಕೂ ಮುನ್ನ ಪೋರ್ಚುಗಲ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮೇಜಿನ ಮೇಲೆ ಕೊಕಾ-ಕೋಲಾ ಬಾಟಲಿಗಳನ್ನು ಇಟ್ಟಿದ್ದರು. ಇದನ್ನು ಕಂಡ 36ರ ಹರೆಯದ ರೊನಾಲ್ಡೊ ಬಾಟಲಿಗಳನ್ನು ದೂರ ಸರಿಸಿ ನಂತರ ನೀರಿನ ಬಾಟಲಿಗಳನ್ನು ಕೈಗೆತ್ತಿಕೊಂಡು ಎಲ್ಲರೂ ಕೋಲಾ ಬದಲಿಗೆ ನೀರು ಕುಡಿಯಿರಿ ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿ ವೇಳೆ ತಮ್ಮ ಎದುರಿಗಿದ್ದ ಕೊಕಾಕೋಲಾ ಬಾಟಲಿಯನ್ನು ಪಕ್ಕಕ್ಕಿಟ್ಟು ನೀರು ಕುಡಿಯಿರಿ ಎಂದು ರೊನಾಲ್ಡೊ ಸನ್ನೆ ಮಾಡಿದ್ದಕ್ಕೆ ಸಂಸ್ಥೆ 29,330 ಕೋಟಿ ರೂ. ನಷ್ಟ ಅನುಭವಿಸಿದೆ! ಪತ್ರಿಕಾಗೋಷ್ಠಿ ಮುಗಿಯುವಷ್ಟರಲ್ಲಿ ಕಂಪನಿಯ 1 ಷೇರಿನ ಬೆಲೆ 56.10 ಡಾಲರ್ ನಿಂದ 55.22 ಡಾಲರ್ ಗೆ ಕುಸಿದಿದೆ.

ಕೋಕಾ-ಕೋಲಾದ ಮಾರುಕಟ್ಟೆ ಮೌಲ್ಯವು 2 242 ಬಿಲಿಯನ್‌ನಿಂದ 8 238 ಶತಕೋಟಿಗೆ ಏರಿತು  ಈ ಘಟನೆಯಿಂದ ಬಿಲಿಯನ್‌ ಕುಸಿತ ಕಂಡಿದೆ. ಮಂಗಳವಾರ ನಡೆದ  ಹಂಗೇರಿ ವಿರುದ್ಧ ಪಂದ್ಯದಲ್ಲಿ  ಪೋರ್ಚುಗಲ್ 3-0 ಗೋಲುಗಳಿಂದ ಜಯಗಳಿಸಿ ಎರಡು ಬಾರಿ ಗೋಲು ಗಳಿಸಿ ಯುರೋಪಿಯನ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ದಾಖಲೆ ನಿರ್ಮಿಸಿದರು.

Donate Janashakthi Media

Leave a Reply

Your email address will not be published. Required fields are marked *