ಪಾಟ್ನಾ: ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ನವೆಂಬರ್ 21ರ ರಾತ್ರಿ ಪೊಲೀಸರೊಂದಿಗಿನ ಎನ್‌ಕೌಂಟರ್‌ನಲ್ಲಿ ಕುಖ್ಯಾತ ಅಪರಾಧಿಯೊಬ್ಬ ಗಾಯಗೊಂಡಿದ್ದೂ, ಆತನನ್ನು ಬಂಧಿಸಲಾಗಿದೆ.
ನೂತನ ಸರ್ಕಾರ ರಚನೆಯಾದ ನಂತರ, ಅಪರಾಧ ಚಟುವಟಿಕೆಗಳ ವಿರುದ್ಧ ಪೊಲೀಸ್ ಕ್ರಮ ತೀವ್ರಗೊಂಡಿರುವಕ್ಕೆ ಸಾಕ್ಷಿಯಾಗಿ ಕಾರ್ಯಾಚರಣೆ ನಡೆದಿದ್ದು, ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ಜಿಲ್ಲಾ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ನಡೆದ ಗುಂಡಿನ ಚಕಮಕಿಯಲ್ಲಿ ವಾಂಟೆಡ್ ಕ್ರಿಮಿನಲ್ ಶಿವದತ್ ರಾಯ್ ತೊಡೆಗೆ ಗುಂಡು ಹಾರಿಸಲಾಗಿದೆ.
ಇದನ್ನೂ ಓದಿ: ಶಾಸಕ ಬಂದಾಗ ಎದ್ದು ನಿಂತಿಲ್ಲ ಎಂದು ವೈದ್ಯನ ವಿರುದ್ದ ಕ್ರಮ; ತರಾಟೆಗೆ ತೆಗೆದುಕೊಂಡಿದ ಹೈಕೋರ್ಟ್
ಸಾಹೇಬ್‌ಪುರ ಕಮಲ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲಿಗ್ರಾಮ್ ಮತ್ತು ಮಲ್ಹಿಪುರ ಗ್ರಾಮಗಳ ನಡುವೆ ಈ ಎನ್‌ಕೌಂಟರ್ ನಡೆದಿದೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿ ಶಿವದತ್ ರಾಯ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಯಾಚರಣೆ ವೇಳೆ ಕತ್ತಲಿನ ಲಾಭ ಪಡೆದುಕೊಂಡ ಆತನ ಸಹಚರ ಪರಾರಿಯಾಗಿದ್ದು ಪೊಲೀಸರು ಕಾರ್ಯಾಚರಣೆ ತೀವ್ರ ಗೊಳಿಸಿದ್ದಾರೆ.
ಯುಪಿ ಮಾಡೆಲ್?
ಬಿಜೆಪಿ ನಾಯಕ ಡಿಸಿಎಂ ಸಾಮ್ರಾಟ್ ಚೌಧರಿ ಅವರಿಗೆ ಗೃಹ ಖಾತೆ ದೊರೆತ ಬೆನ್ನಲ್ಲೇ ನಡೆದ ಈ ದೊಡ್ಡ ಮಟ್ಟದ ಪೊಲೀಸ್ ಕಾರ್ಯಾಚರಣೆ ಸಾಮಾಜಿಕ ತಾಣದಲ್ಲಿ ಭಾರೀ ಸುದ್ದಿಯಾಗುತ್ತಿದ್ದು, ಬಿಹಾರದಲ್ಲಿನ್ನು ಉತ್ತರ ಪ್ರದೇಶ ಮಾದರಿ ಕಾರ್ಯಚರಣೆ ಆರಂಭ ಎಂದು ಹೇಳಲಾಗುತ್ತಿದೆ.
ಘಟನೆ ಬಳಿಕ ಪ್ರತಿಕ್ರಿಯಿಸಿರುವ ಸಾಮ್ರಾಟ್ ಚೌಧರಿ ”ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ ಸುಶಾಸನವಿದೆ” ಎಂದಿದ್ದಾರೆ.
ಇದನ್ನೂ ನೋಡಿ: ದಣಿವರಿಯದೆ ದುಡಿಯುವ ಮಹಿಳೆಗೆ ಕನಿಷ್ಠ ಕೂಲಿ ಯಾಕಿಲ್ಲ? Janashakthi Media
