ಬೆಂಗಳೂರು : ಮನೆಗೆಲಸ ಮಾಡುತ್ತಿದ್ದ ಮಹಿಳೆ ಶವವಾಗಿ ಪತ್ತೆ ಆಗಿರುವಂತಹ ಘಟನೆ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಕಲ್ಕೆರೆ ಕೆರೆ ಬಳಿ ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆ ಆಗಿದೆ. ನಜ್ಮಾ ಮೃತ ಮಹಿಳೆಯಾಗಿದ್ದು, ಲೈಂಗಿಕ ದೌರ್ಜನ್ಯವೆಸಗಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಕಲ್ಕೆರೆಯ ಡಿಎಸ್ಆರ್ನ ಅಪಾರ್ಟ್ಮೆಂಟ್ನಲ್ಲಿ ಮನೆಗೆಲಸ ಮಾಡುತ್ತಿದ್ದ ನಜ್ಮಾ, ಸುಮನ್ ಎಂಬುವವರನ್ನು ಮದುವೆಯಾಗಿದ್ದರು. 3 ಮಕ್ಕಳ ತಾಯಿಯನ್ನು ದುಷ್ಕರ್ಮಿಗಳು ಕೊಂದು ಬಿಸಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ಬಗ್ಗೆ ಪೂರ್ವ ವಲಯದ ಹೆಚ್ಚುವರಿ ಕಮಿಷನರ್ ರಮೇಶ್ ಬಾನೋತ್ ಹೇಳಿಕೆ ನೀಡಿದ್ದು, ಬೆಳಿಗ್ಗೆ 8.45ರ ಸುಮಾರಿಗೆ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ಕರೆ ಬರುತ್ತೆ. ಇನ್‌ಸ್ಪೆಕ್ಟರ್ ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಎಫ್ಎಸ್ಎಲ್ಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡು, ಬಾಡಿ ಶಿಫ್ಟ್ ಮಾಡಿದ್ದಾರೆ ಎಂದರು.
ಡಿಸಿಪಿ ಕೂಡ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ನಾನು ಭೇಟಿ ನೀಡಿದ್ದೆ. ಮೇಲ್ನೋಟಕ್ಕೆ ಚುಚ್ಚಿ, ಮುಖದ ಮೇಲೆ ಕಲ್ಲು ಎತ್ತಿ ಹಾಕಿದ್ದು ಕಂಡು ಬಂದಿದೆ. ಲೈಗಿಂಕ ದೌರ್ಜನ್ಯ ಮಾಡಿದ್ದು ಮೇಲ್ನೋಟಕ್ಕೆ ಕಂಡುಬರುತ್ತೆ. ಕೊಲೆ ಹಾಗೂ ಲೈಗಿಂಕ ದೌರ್ಜನ್ಯ ಅಂತ ಕೇಸ್ ಹಾಕಲಾಗಿದೆ. ಯಾರು ಕೊಲೆ ಮಾಡಿದ್ದು ಅಂತ ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.