ಬೆಂಗಳೂರು: ನಗರದ ಹರಿಶ್ಚಂದ್ರ ಘಾಟ್ ಮುಂದೆ ಸಾಕಷ್ಟು ಆಂಬ್ಯುಲೆನ್ಸ್ಗಳು ಹೆಣ ಹೊತ್ತು ಕ್ಯೂ ನಿಂತಿದ್ದು, ಗೇಟಿಗೆ ಬೀಗ ಹಾಕಿರುವ ಬಿಬಿಎಂಪಿ ಸಿಬ್ಬಂದಿ ವಾಹನಗಳನ್ನು ಒಳಗೆ ಬಿಡದ ಆರೋಪ ಕೇಳಿಬಂದಿದೆ.
ಬಿಬಿಎಂಪಿ ಯಾಕೆ ಈ ರೀತಿ ನಡೆದುಕೊಳ್ಳುತ್ತಿದೆ ಎಂದು ಮೃತ ಸಂಬಂಧಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಆ ಸಂದರ್ಭದಲ್ಲಿ ಬೆಳಕಿಗೆ ಬಂದ ಅಂಶವೇನೆಂದರೆ ಶವಸಂಸ್ಕಾರ ಮಾಡಲು ಉಳ್ಳವರ ಪ್ರಭಾವ ಇದ್ದರೆ ಮಾತ್ರ ಗೇಟೆ ತೆಗೆಯಲಾಗುತ್ತದೆ ಎಂಬ ಅಂಶ ಹೊರಬಿದ್ದಿದೆ.
ಶವಸಂಸ್ಕಾರಕ್ಕೆ ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಸ್ಥಳೀಯರು ಬಿಬಿಎಂಪಿ ಸಿಬ್ಬಂದಿ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಗೇಟ್ ತೆರೆದು ಸಂಸ್ಕಾರಕ್ಕೆ ಅನುಮತಿ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ.
ಕಳೆದ ಒಂದು ವಾರದಿಂದ ಮೃತದೇಹಗಳು ಹೆಚ್ಚಿನ ಪ್ರಮಾಣದಲ್ಲಿ ಹರಿಶ್ಚಂದ್ರ ಘಾಟ್ ಬರುತ್ತಿದ್ದು, ನಿರ್ವಹಣೆಯಲ್ಲಿ ಸಿಬ್ಬಂದಿಗಳ ವಿಳಂಬ ಎದ್ದು ಕಾಣುತ್ತಿದೆ. ಹಾಗಾಗಿ ಈ ಅವಘಡಗಳು ಸಂಭವಿಸುತ್ತಿವೆ. ನಮಗೂ ಸರಿಯಾದ ಸೌಲಭ್ಯ ನೀಡಿಲ್ಲ ಆದರೂ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ಕಷ್ಟ ಕೇಳುವವರು ಯಾರು ಎಂದು ಹೆಸರು ಹೇಳದ ಚಿತಾಗಾರದ ಸಿಬ್ಬಂದಿಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.