ಕಣ್ಣೂರು : ಸಿಪಿಐಎಂನ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಂ ಯೆಚೂರಿ ಪುನರಾಯ್ಕೆಯಾಗಿದ್ದಾರೆ.
ಕೇರಳದ ಕಣ್ಣೂರಿನಲ್ಲಿ ನಡೆಯುತ್ತಿರುವ 23 ನೇ ಮಹಾಧಿವೇಶನವು 85 ಜನರ ಕೇಂದ್ರ ಸಮಿತಿಯನ್ನು ಆಯ್ಕೆ ಮಾಡಿದೆ. ಈ ಸಮಿತಿಯು ಸೀತಾರಾಂ ಯೆಚೂರಿಯವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಮೂರನೇ ಅವಧಿಗೆ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
2015ರಲ್ಲಿ ನಡೆದ ಸಿಪಿಐ(ಎಂ) ಪಕ್ಷದ 21ನೇ ಮಹಾಧಿವೇಶನದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ಸೀತಾರಾಂ ಯೆಚೂರಿ ಅವರು 2018ರಲ್ಲಿ ನಡೆದ 22ನೇ ಮಹಾಧಿವೇಶನದಲ್ಲಿ ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದರು.
ಈ ಸಮಿತಿಯಲ್ಲಿ 15 ಜನ ಮಹಿಳೆಯರಿದ್ದು, 17 ಜನ ಹೊಸದಾಗಿ ಸಮಿತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕವನ್ನು ಪ್ರತಿನಿಧಿಸಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ್ ಹಾಗೂ ರಾಜ್ಯಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಎನ್. ಉಮೇಶ್ ನೂತನ ಕೇಂದ್ರ ಸಮಿತಿಗೆ ಆಯ್ಕೆಯಾಗಿದ್ದಾರೆ.
17 ಜನರ ಪೊಲಿಟ್ ಬ್ಯೂರೋ ರಚನೆ ಮಾಡಲಾಗಿದ್ದು, ಮೂರ ಜನ ಹೊಸದಾಗಿ ಆಯ್ಕೆಯಾಗಿದ್ದಾರೆ. 17 ಜನರಲ್ಲಿ ಇಬ್ಬರು ಮಹಿಳೆಯರಿದ್ದಾರೆ. ಎಪ್ರಿಲ್ 06 ರಿಂದ 10 ರವರೆಗೆ ನಡೆದ ಈ ಮಹಾಧಿವೇಶನದಲ್ಲಿ ಹಲವು ರಾಜಕೀಯ ಸಂಘಟನಾ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದ್ದು, ಎಡಶಕ್ತಿಗಳ ಬಲವರ್ಧನೆಗೆ ಯೋಜನೆಯನ್ನು ರೂಪಿಸಲಾಗಿದೆ ಎಂದು ಸಿಪಿಐಎಂ ಕೇಂದ್ರ ಸಮಿತಿ ತಿಳಿಸಿದೆ.
Thanku for all team