ಸಿಪಿಐಎಂ ಕಚೇರಿಗೆ ಬೆಂಕಿ ಇಟ್ಟ ಬಿಜೆಪಿ ಕಾರ್ಯಕರ್ತರು

ಅಗರ್ತಲಾ : ತ್ರಿಪುರಾದ ಹಲವು ಭಾಗಗಳಲ್ಲಿ ಸಿಪಿಐ (ಎಂ) ಕಛೇರಿಗಳ ಮೇಲೆ ಬಿಜೆಪಿ ಸರಣಿ ದಾಳಿಗಳನ್ನು ನಡೆಸಿದೆ. ಅಗರ್ತಲಾದ ಹೃದಯ ಭಾಗದಲ್ಲಿರುವ ಪಕ್ಷದ ರಾಜ್ಯ ಕಚೇರಿಗೆ ಬೆಂಕಿ ಹಚ್ಚಿದ್ದು ಹೊರಗೆ ನಿಂತಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ.

ಬೆಂಕಿ ಹಚ್ಚಿದ್ದರ ಪರಿಣಾಮ ಕಚೇರಿಯಲ್ಲಿನ ದಾಖಲೆಗಳು ಮತ್ತು ಕಚೇರಿಗಳ ಮುಂದೆ ನಿಲ್ಲಿಸಿದ್ದ ಹಲವು ವಾಹನಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಮೂರು ಪ್ರತ್ಯೇಕ ಕಟ್ಟಡಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ ಎಂದು ಸಿಪಿಐಎಂ ಆರೋಪಿಸಿದೆ. ನಮ್ಮ ಕಾರ್ಯಕರ್ತರ ಮೇಲೂ ಬಿಜೆಪಿ ಗೂಂಡಾಗಳು ದಾಳಿ ನಡೆಸುತ್ತಾ ಬಂದಿದ್ದಾರೆ. ಅದಕ್ಕಾಗಿ ಆಡಳಿತ ಯಂತ್ರವನ್ನು ಬಳಸಿಕೊಳ್ಳುತ್ತಿದ್ದಾರೆ. ಕಚೇರಿಗೆ, ವಾಹನಗಳಿಗೆ ಬೆಂಕಿ ಹಚ್ಚುವ ಸಂದರ್ಭದಲ್ಲಿ ಪೊಲೀಸ ಸ್ಥಳದಲ್ಲಿಯೇ ಹಾಜರಿದ್ದರು. ಆದರೆ ದುರ್ಘಟನೆ ನಡೆಯುವುದನ್ನು ಅವರು ತಪ್ಪಿಸಲಿಲ್ಲ. ಪೊಲೀಸರ ಸಹಕಾರದೊಂದಿಗೆ ಈ ಗಲಾಟೆ ನಡೆದಿದೆ ಎಂದು ಸಿಪಿಐಎಂ ಆರೋಪಿಸಿದೆ.

ಇಡೀ ರಾಜ್ಯಾಧ್ಯಂತ ಸಿಪಿಐಎಂ ಕಾರ್ಯಕ್ರಮಗಳನ್ನು ಆಯೋಜಿಸಿದೆ. ರಾಜ್ಯ ಸರಕಾರದ ಆಡಳಿತದ ವೈಫಲ್ಯವನ್ನು ಜನರ ಬಳಿಕೊಂಡೊಯ್ಯುತ್ತಿದೆ. ಇದನ್ನು ಸಹಿಸದೆ ಬಿಜೆಪಿ ಈ ರೀತಿ ದಾಳಿ ನಡೆಸುತ್ತಿದೆ. ಇದಕ್ಕೆ ನಾವು ಹೆದರುವುದಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ ತಿಳಿಸಿದ್ದಾರೆ.

ತ್ರಿಪುರಾದ ಪ್ರಮುಖ ದಿನಪತ್ರಿಕೆ ದೇಶರ್ ಕಥಾ ಕಚೇರಿ ಮೇಲೂ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದು ಮೂವರು ಪತ್ರಕರ್ತರು ಗಾಯಗೊಂಡಿದ್ದಾರೆ. ಈ ಘಟನೆಯನ್ನು ತ್ರಿಪುರ ಪತ್ರಕರ್ತರ ಒಕ್ಕೂಟ ಖಂಡಿಸಿದೆ.

 

Donate Janashakthi Media

Leave a Reply

Your email address will not be published. Required fields are marked *