ಅಧ್ಯಕ್ಷೆ ಪ್ರಿಯಾಂಕಾ ಜೈನ್ ಜಾಮೀನು ರದ್ದುಪಡಿಸಿ: ಸಿಪಿಎಂ ಒತ್ತಾಯ

ಹೊಸಪೇಟೆ: ನಗರದ ಪ್ರಿಯಾಂಕಾ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಪ್ರಿಯಾಂಕಾ ಜೈನ್ ಅವರಿಗೆ ನೀಡಿರುವ ಜಾಮೀನು ರದ್ದುಪಡಿಸಿ ಪೊಲೀಸ್ ಕಸ್ಟಡಿಗೆ ನೀಡಬೇಕು, ಈ ವಂಚನೆಗೆ ಪ್ರೇರಣೆ ಎನ್ನಲಾದ ಶ್ರೀ ತಾಯಮ್ಮ ಮಹಿಳಾ ಶಕ್ತಿ ಸಂಘದ ಅಧ್ಯಕ್ಷರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಸಿಪಿಎಂ ಒತ್ತಾಯಿಸಿದೆ. ಅಧ್ಯಕ್ಷೆ

ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಯು.ಬಸವರಾಜ್‌ ಸೆಪ್ಟೆಂಬರ್‌ 9ರಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 300ಕ್ಕೂ ಅಧಿಕ ಮಹಿಳೆಯರಿಗೆ ಕೋಟ್ಯಂತರ ಹಣ ವಂಚಿಸಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ದೂರು ಸಲ್ಲಿಸಿರುವವರ ಅಭಿಪ್ರಾಯ ಪರಿಗಣಿಸಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಹುಬ್ಬಳ್ಳಿ| ದೇಶ ಅಪ್ನಾಯೇನ್‌ ಸಹಯೋಗ ಫೌಂಡೇಷನ್‌ನಿಂದ್‌ ಸರಕಾರಿ ಶಾಲೆ ಮಕ್ಕಳಿಗೆ ಶೈಕ್ಷಣಿಕ ಮಹತ್ವದ ಅರಿವು

ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಪ್ರಿಯಾಂಕಾ ಜೈನ್ ಅವರು ದೂರು ಸಲ್ಲಿಸಿದವರಿಗೆ ಬೆದರಿಕೆ ಹಾಕುವುದು, ಮತ್ತೆ ವಂಚಿಸಲು ಅವರ ದಾರಿ ತಪ್ಪಿಸುತ್ತಿರುವ ಆರೋಪ ಇದ್ದು, ಅವರ ಜಾಮೀನು ರದ್ದುಪಡಿಸಬೇಕು, ದೂರು ಸಲ್ಲಿಸಿರುವ ಮತ್ತು ಸಲ್ಲಿಸಲಿರುವ ಕುಟುಂಬಗಳಿಗೆ ಸೂಕ್ತ ಕಾನೂನು ಹಾಗೂ ಜೀವ ರಕ್ಷಣೆ ನೀಡಬೇಕು, ಸಬ್ಸಿಡಿ ಸಾಲ ಕೊಡಿಸುವ ಹೆಸರಿನಲ್ಲಿ ಮುಂಗಡ ಹಣ ಕಟ್ಟಿಸಿಕೊಂಡಿರುವ ಹತ್ತಾರು ಕೋಟಿ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಅವರು ಒತ್ತಾಯಿಸಿದರು.

ಸಂತ್ರಸ್ತ ಮಹಿಳೆಯರ ಪೈಕಿ ಪದ್ಮಾ, ವಾಣಿ, ಮೇಘ, ಚೈತ್ರಾ ಮೊದಲಾದವರು ಮಾತನಾಡಿ, ತಾವು ಸಾಲ ಮಾಡಿ ಲಕ್ಷಾಂತರ ಹಣವನ್ನು ತಾಯಮ್ಮ ಸಂಸ್ಥೆಯ ಅಧ್ಯಕ್ಷೆ ಕವಿತಾ ಈಶ್ವರ ಸಿಂಗ್ ಅವರ ಮಾತು ನಂಬಿ ಪ್ರಿಯಾಂಕಾ ಪತ್ತಿನ ಸಂಘಕ್ಕೆ ನೀಡಿದ್ದು, ನಮಗೆ ವಂಚನೆಯಾಗಿದೆ. ಕವಿತಾ ಸಿಂಗ್ ವಿರುದ್ಧ ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ. ನಮಗೆ ನ್ಯಾಯ ಬೇಕು ಎಂದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್.ಭಾಸ್ಕರ ರೆಡ್ಡಿ, ಮುಖಂಡರಾದ ಎ.ಕರುಣಾನಿಧಿ, ಮರಡಿ ಜಂಬಯ್ಯ ನಾಯಕ, ಈಡಿಗರ ಮಂಜುನಾಥ, ವಿ.ಸ್ವಾಮಿ ಇದ್ದರು.

ಯು.ಬಸವರಾಜ್‌ ಸಿಪಿಎಂ ರಾಜ್ಯ ನಾಯಕರುನೂರಾರು ಮಹಿಳೆಯರಿಗೆ ವಂಚನೆ ಅಗಿದ್ದರೂ ರಾಜಕೀಯ ಒತ್ತಡ ಕಾರಣದಿಂದ ಸೂಕ್ತ ರೀತಿಯಿಂದ ತನಿಖೆ ಆಗುತ್ತಿಲ್ಲ ಎಂಬ ಶಂಕೆ ಇದೆ. ಹಾಗಿದ್ದರೆ ಜಿಲ್ಲಾಡಳಿತ ಏನು ಮಾಡುತ್ತಿದೆ?

ಇದನ್ನೂ ನೋಡಿ: ಧರ್ಮಸ್ಥಳ ನಿಗೂಢಗಳು | ಕಣ್ಣಿಗೆ ಕಂಡದ್ದನ್ನು ಹೇಳದಾದರು!! ಕೇರಳ, ತಮಿಳುನಾಡು ಎಂದೆಲ್ಲ ಲಿಂಕ್ ಕೊಟ್ಟರು!!!

Donate Janashakthi Media

Leave a Reply

Your email address will not be published. Required fields are marked *