ಗೃಹ ಜ್ಯೋತಿ ಯೋಜನೆಯಡಿ ತಂದಿರುವ ಷರತ್ತುಗಳು ಬಡವರ ಹಾಗೂ ಮಧ್ಯಮರ್ಗದವರ ವಿರೋಧಿಯಾಗಿವೆ – ಯು. ಬಸವರಾಜ

ಬೆಂಗಳೂರು: ರಾಜ್ಯ ಸರ್ಕಾರ ಗೃಹ ಜ್ಯೋತಿ ಯೋಜನೆಯ ಪಡೆಯಲು ವಿಧಿಸಿರುವ ಷರತ್ತುಗಳು ರಾಜ್ಯದ ಮತದಾರರಲ್ಲಿ ಮತ್ತು ಪ್ರಗತಿಪರರ ಹಾಗೂ ಮದ್ಯಮ ವರ್ಗದವರ ನಡುವೆ ತೀವ್ರ ಅಸಮಾಧಾನವನ್ನುಂಟು ಮಾಡಿವೆ. ರಾಜ್ಯ ಸರ್ಕಾರ ಗೃಹ ಜ್ಯೊತಿ ಯೋಜನೆಯಡಿ ತಂದಿರುವ ಷರತ್ತುಗಳು ಬಡವರ ಹಾಗೂ ಮಧ್ಯಮರ್ಗದವರ ವಿರೋಧಿಯಾಗಿವೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಷರತ್ತುಗಳಂತೆ  ಇದುವರೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ತಲಾ 70 ಯುನಿಟ್‌ ಹಾಗೂ ಇತರರಿಗೆ  ತಲಾ 25 ಯುನಿಟ್‌ ಮಿತಿ ಇದ್ದು ಅದಕ್ಕಿಂತ ಹೆಚ್ಚು  ಬಳಸಿದಲ್ಲಿ ಈಗಲೂ ಬಿಲ್‌ ಕಟ್ಟ ಬೇಕಿದೆ. ಹೀಗಾದರೆ  ಈ ಷರತ್ತುಗಳ ಪರಿಣಾಮ ಏನಾಗ ಬಹುದು ಎಂದು ಪ್ರಶ್ನಿಸಿದ್ದಾರೆ. ಈಗಿನ ಷರತ್ತಿನಂತೆ ಕೇವಲ ಶೇ 10  ಹೆಚ್ಚು ಮಾತ್ರ ಬಡವರಿಗೆ ಬಳಸಲು ಸೂಚಿಸಿದ್ದು,ಅದೂ ಕೂಡಾ ಹಳೆಯ ಸಾವಿರಾರು ರೂಗಳ ಬಾಕಿ ಕಟ್ಟಿದರೆ ಮಾತ್ರ. ಆದ್ದರಿಂದ ಅವರಿಗೆ ಹಳೆಯ ಬಿಲ್‌ ಕಟ್ಟಲಾಗುವುದಿಲ್ಲ.ಇದೆ ಕಾರಣದಿಂದ ಬಡವರು ಈ ಹೊಸ ಸೌಲಭ್ಯ ಪಡೆಯುವುದಿಲ್ಲ. ಈಗಾಗಲೇ ಭಾಗ್ಯ ಜ್ಯೋತಿ ಹಾಗೂ ಕುಠೀರ ಜ್ಯೋತಿ ಗೆ ನೀಡಲಾದ ಯುನಿಟ್ ಮಿತಿಯು ಸಾಲದೆಂದು ಸರಕಾರಕ್ಕೆ ಸಿಪಿಐಎಂ ಹಲವು ಬಾರಿ ಒತ್ತಾಯಿಸಿದೆ ಎಂದಿದ್ದಾರೆ.

ಉತ್ತರ ಕರ್ನಾಟಕದ ಜನ ಬಿರು ಬೇಸಿಗೆ ಅನುಭವಿಸುತ್ತಾರೆ. ಅವರು ಹೆಚ್ಚು ವಿದ್ಯುತ್ ಬಳಸ ಬೇಕಾಗುತ್ತದೆ. ರಾಜ್ಯದಾದ್ಯಂತ ಈ ಫಲಾನುಭವಿಗಳು ಕನಿಷ್ಟ ಮೂರು ಬಲ್ಬು, ಎರಡು ಫ್ಯಾನ್ ಹಾಗೂ ತ್ರಿಪಿನ್ ಪ್ಲಗ್ ಬಳಸಲು ಅವಕಾಶ ವಿರುವಂತೆ ವಿದ್ಯುತ್ ಬಳಕೆಯ ಮಿತಿಯನ್ನು ಹೆಚ್ಚಿಸ ಬೇಕೆಂದು ಒತ್ತಾಯಿಸಿದ್ದೇವೆ. ಅದರೇ ಇದುವರೆಗಿನ ಸರಕಾರಗಳು ಇದನ್ನು ಪರಿಗಣಿಸಲಿಲ್ಲಎಂದು ತಿಳಿಸಿದ್ದಾರೆ. ನುಡಿದಂತೆ ನಡೆಯುವುದು ತಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

ಮಧ್ಯಮ ವರ್ಗದವರು ಅಗತ್ಯ ವಸ್ತುಗಳ ತೀವ್ರ ಬೆಲೆ ಏರಿಕೆಯಿಂದ ನಲುಗಿದ್ದಾರೆ . ಅವರೂ ಈ ಕಡೆ  ಯೋಚಿಸುತ್ತಿದ್ದಾರೆ. ಈ ಕುರಿತು ಅವರೊಂದಿಗೆ ಚರ್ಚಿಸುವುದು ಅಗತ್ಯವಾಗಿದೆ ಕಾಂಗ್ರೆಸ್‌  ಸರ್ಕಾರ ವಿಧಿಸಿರುವ ಷರತ್ತುಗಳು ನುಸುಲೂಕೋರರನ್ನು ತಡೆಯುವ ಬದಲು,ನಿಜ ಫಲಾನುಭವಿಗಳಾದ ಭಾಗ್ಯ ಜ್ಯೋತಿ ಹಾಗೂ ಕುಠೀರ ಜ್ಯೋತಿ ಫಲಾನುಭವಿಗಳಿಗೆ ತೊಂದರೆಯನ್ನುಂಟು ಮಾಡುತ್ತಿದೆ.ತಾವು ಹಾಗೂ ತಮ್ಮ ಪಕ್ಷ ಚುನಾವಣೆಯಲ್ಲಿ ನೀಡಿದ ವಾಗ್ದಾನದಂತೆ 200 ಯುನಿಟ್ ಉಚಿತವಾಗಿ ನೀಡುವ ವಾಗ್ದಾನವನ್ನು ಎಲ್ರಿಗೂ ಜಾರಿಗೊಳಿಸುವುದಾಗಿ ಹೇಳಿದಂತೆ, ಭಾಗ್ಯ ಜ್ಯೋತಿ ಹಾಗೂ ಕುಠೀರ ಜ್ಯೋತಿ ಬಳಕೆದಾರರಿಗೂ 200 ಯುನಿಟ್‌ ವಿದ್ಯುತ್‌ ಒದಗಿಸಲು ಹಳೆಯ ಬಾಕಿಯನ್ನ ಮನ್ನಾ ಮಾಡಿ. ಭಾಗ್ಯ ಜ್ಯೋತಿ ಹಾಗೂ ಕುಠೀರ ಜ್ಯೋತಿಗೆ ನೀಡಲಾದ ಯುನಿಟ್‌ ಮಿತಿಯು ಹೆಚ್ಚಿಸಬೇಕು.ಎಂದು ಸಿಪಿಐಎಂ ಕಾರ್ಯದರ್ಶಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರೆಗೆ ಪತ್ರದ ಮೂಲಕ ಆಕ್ರೋಶವನ್ನ ವ್ಯಕ್ತ ಪಡಿಸಿದ್ದಾರೆ.

ಗೃಹ ಜ್ಯೋತಿ ಯೋಜನೆಯಡಿ ತಂದಿರುವ ಈ ಷರತ್ತುಗಳು ಬಡವರ ಹಾಗೂ ಮಧ್ಯಮರ್ಗದವರ ವಿರೋಧಿಯಾಗಿವೆ ಮತ್ತು   ಇದೆಲ್ಲವೂ  ಮರಳಿ ಕಾಂಗ್ರೆಸ್ ಸರಕಾರ ನವ ಉದಾರೀಕರಾಣದ ನೀತಿಗಳ ಒತ್ತಡಕ್ಕೆ ತಲೆ ಬಾಗಿರುವುದನ್ನು ಅವು ಎತ್ತಿ ತೋರಿಸುತ್ತವೆ. ತಮ್ಮ ಕಾಂಗ್ರೆಸ್ ಪಕ್ಷ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರಿಗೆ ಗೃಹ ಜ್ಯೋತಿ ವಿಚಾರದಲ್ಲಿ ನೀಡಿದ ವಾಗ್ದಾನದಂತೆ ನಡೆದು ಕೊಳ್ಳದಿರುವುದನ್ನು ಸಿಪಿಐಎಂ ಬಲವಾಗಿ ಖಂಡಿಸಿದೆ.

Donate Janashakthi Media

Leave a Reply

Your email address will not be published. Required fields are marked *