ಇ.ಡಿ. ಮತ್ತು ಧನಬಲದ ಭ್ರಷ್ಟ ಕಾಕ್‍ ಟೇಲನ್ನು ಮುಖಾಮುಖಿಯಾಗಿ ಎದುರಿಸಬೇಕಾಗಿದೆ-ಯೆಚುರಿ

2024ರಲ್ಲಿ ಮತ್ತೆ ತಮ್ಮದೇ ಸರಕಾರ ಎಂದು ಮೋದಿ ಮತ್ತು ಬಿಜೆಪಿ ಪ್ರಚಾರ ನಡೆಸುತ್ತಿದ್ದರೂ, ಆ ಬಗ್ಗೆ ಅವರಿಗೇ ಖಾತ್ರಿಯಿಲ್ಲ. ಆದ್ದರಿಂದಲೇ ಹಿಂದುತ್ವ ಮತಗಳನ್ನು ಕ್ರೋಡೀಕರಿಸಲು ಕೋಮುವಾದಿ ಧ್ರುವೀಕರಣದ  ಶತಪ್ರಯತ್ನಗಳೊಂದಿಗೆ  ಕಳೆದ ಹತ್ತು ವರ್ಷಗಳಲ್ಲಿ ಬೆಳೆಸಿ ಪೇಟೆಂಟ್‍ ಮಾಡಿಕೊಂಡಿರುವ ಇ.ಡಿ. ಮತ್ತು ದನಬಲದ ಭ್ರಷ್ಟ ಮಾಧಕ ಮಿಶ್ರಣವನ್ನು ಭಂಡತನದಿಂದ ಬಳಸುತ್ತಿದ್ದಾರೆ. ಮುಖ್ಯವಾಗಿ ಪ್ರತಿಪಕ್ಷಗಳ ಮುಖಂಡರ ಮೇಲೆ, ಪ್ರತಿಪಕ್ಷಗಳ ಸರಕಾರಗಳ ಮೇಲೆ ಮತ್ತು ಪ್ರಾದೇಶಿಕ ಪಕ್ಷಗಳನ್ನು ಒಡೆಯುವ ಪ್ರಯತ್ನ ನಡೆಯುತ್ತದೆ. ಇದನ್ನು ಮುಖಾಮುಖಿಯಾಗಿ ಎದುರಿಸಬೇಕಾಗಿದೆ ಎಂಬುದು ತಮ್ಮ ಪಕ್ಷದ  ನಿಲುವು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಹೇಳಿದ್ದಾರೆ. ಇ.ಡಿ.

 ಅವರು ತಿರುವನಂತಪುರದಲ್ಲಿ ಪಕ್ಷದ ಕೇಂದ್ರ ಸಮಿತಿಯ ಮೂರು ದಿನಗಳ ಸಭೆಯ ನಂತರ ಪತ್ರಿಕಾಗೋ಼ಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಸ್ಪರ್ಧಾತ್ಮಕ ಮೃದು ಹಿಂದುತ್ವ ಮತ್ತು ತೆಳು ಕೇಸರಿ ನಿಲುವುಗಳನ್ನು ಆಶ್ರಯಿಸಿದರೆ ಇದು ಸಾಧ್ಯವಿಲ್ಲ, ಅದು  ಜನಗಳ ಒಂದು  ಗಮನಾರ್ಹ ವಿಭಾಗದ ಮೇಲೆ ಹಿಂದುತ್ವದ ಹಿಡಿತವನ್ನು ಮತ್ತಷ್ಟು ಬಲಪಡಿಸಲು ಕಾರಣವಾಗುತ್ತದೆ, ಆರೆಸ್ಸೆಸ್/ಬಿಜೆಪಿ ಮತ್ತು ಇತರ ಎಲ್ಲಾ ಹಿಂದುತ್ವ ಸಂಘಟನೆಗಳಿಗೆ ಸಮಾಜವನ್ನು ಮತ್ತಷ್ಟು ಕೋಮುಗ್ರಸ್ತಗೊಳಿಸಲು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಸಲು ಅವಕಾಶವನ್ನು ಒದಗಿಸುತ್ತದೆ.

 ವಿಧಾನಸಭಾ ಚುನಾವಣೆಗಳ  ಕಳೆದ ಎರಡು ಸುತ್ತುಗಳಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಗೆಲುವು ದಾಖಲಿಸಿದರೆ, ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಬಿಜೆಪಿಯ ವಿಜಯಗಳು ಮುಖ್ಯವಾಗಿ ಹಿಂದುತ್ವದ ಕೋಮುವಾದಿ ಮತಗಳ ಕ್ರೋಡೀಕರಣದ ಜತೆಗೆ ಜಾತಿ ಭಾವನೆಗಳ ದುಷ್ಟ ದುರುಪಯೋಗದಿಂದ ಪಡೆದವುಗಳು.

2024ರ ಚುನಾವಣೆಗಳಲ್ಲಿ ಗೆಲ್ಲುವ ಮತ್ತು ತಮ್ಮ ಸರಕಾರವನ್ನು ಉಳಿಸಿಕೊಳ್ಳುವ ಬಗ್ಗೆ ಅವರಿಗೇ ಖಾತ್ರಿಯಿಲ್ಲವಾದ್ದರಿಂದ ಅವರು ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸಲು ಸರ್ವಪ್ರಯತ್ನಗಳನ್ನೂ ಮಾಡುತ್ತಾರೆ, ಈ ಎಲ್ಲ ಕುತಂತ್ರಗಳನ್ನು  ನೇರವಾಗಿ ಎದುರಿಸಲೇ ಬೇಕಾಗಿದೆ. ಇದಕ್ಕಾಗಿ ‘ಇಂಡಿಯ’ ಬಣವನ್ನು ಬಲಪಡಿಸಬೇಕು , ಸಿಪಿಐ(ಎಂ) ಇದರಲ್ಲಿ ತನ್ನ ಪಾತ್ರವನ್ನು ವಹಿಸುತ್ತದೆ ಎಂದು ಅವರು ವಿವರಿಸಿದರು. ಇ.ಡಿ.

ಪತ್ರಿಕಾಗೋಷ್ಠಿಯಲ್ಲಿ ಸಿಪಿಐ(ಎಂ) ಕೇರಳ ರಾಜ್ಯ ಕಾರ್ಯದರ್ಶಿ ಮತ್ತು ಪೊಲಿಟ್‍ ಬ್ಯುರೊ ಸದಸ್ಯ ಎಂ.ವಿ.ಗೋವಿಂದನ್‍ ಮಾಸ್ಟರ್‍ ಮತ್ತು ಇನ್ನೊಬ್ಬ ಪೊಲಿಟ್‍ಬ್ಯುರೊ ಸದಸ್ಯರಾದ ಎಂ.ಎ.ಬೇಬಿ ಇದ್ದರು.

ಸಿಪಿಐ(ಎಂ) ಕೇಂದ್ರ ಸಮಿತಿ ಹೆಚ್ಚುತ್ತಿರುವ ನಿರುದ್ಯೋಗ, ಬೆಲೆ ಏರಿಕೆ ಮತ್ತು ಮೋದಿ ಸರ್ಕಾರದ ನೀತಿಗಳಿಂದ ಜನರ ಜೀವನೋಪಾಯದ ಮೇಲೆ ನಡೆಯುತ್ತಿರುವ ದಾಳಿಗಳ ವಿರುದ್ಧ ಹೋರಾಟಗಳನ್ನು ತೀವ್ರಗೊಳಿಸುವುದನ್ನು ಲು ನಿರ್ಧರಿಸಿದೆಯಲ್ಲದೆ, ರಾಜ್ಯಗಳ ಹಕ್ಕುಗಳು ಮತ್ತು ಒಕ್ಕೂಟತತ್ವದ ಮೇಲಿನ ದಾಳಿಗಳ ವಿರುದ್ಧ ಫೆಬ್ರವರಿ 8 ರಂದು ನವದೆಹಲಿಯಲ್ಲಿ ಕೇರಳ ರಾಜ್ಯದ ಎಲ್‌ಡಿಎಫ್ ಸರ್ಕಾರವು ಆಯೋಜಿಸಿರುವ ಪ್ರತಿಭಟನಾ ಧರಣಿಯೊಂದಿಗೆ ಏಕಕಾಲದಲ್ಲಿ ಎಲ್ಲಾ ರಾಜ್ಯ ಸಮಿತಿಗಳು ರಾಜ್ಯಗಳಲ್ಲಿ ಪ್ರತಿಭಟನಾ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ನಿರ್ಧರಿಸಿದೆ. ಅಲ್ಲದೆ,  ಫೆಬ್ರವರಿ 16, 2024 ರಂದು ರಾಷ್ಟ್ರವ್ಯಾಪಿ ಪ್ರತಿಭಟನಾ ಕಾರ್ಯಾಚರಣೆಗಳಿಗೆ  ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ನೀಡಿರುವ  ಕರೆಗೆ ಕೇಂದ್ರ ಸಮಿತಿಯು ಸೌಹಾರ್ದವನ್ನು ವ್ಯಕ್ತಪಡಿಸಿದೆ.

ಇಲೆಕ್ಟ್ರಾನಿಕ್ ಮತದಾನ ಯಂತ್ರ(ಇವಿಎಂ) ಗಳ ಕಾರ್ಯನಿರ್ವಹಣೆಯ ಬಗ್ಗೆ ವ್ಯಾಪಕವಾದ ಆತಂಕಗಳ ಸಂದರ್ಭದಲ್ಲಿ,  ಮತಗಟ್ಟೆಗಳಲ್ಲಿ, ಮತದಾನ ಘಟಕಗಳು-ನಿಯಂತ್ರಕ ಘಟಕಗಳು ಮತ್ತು VVPAT ಈ ಅನುಕ್ರಮದಲ್ಲಿ ಇರುವಂತೆ  ಮರುವ್ಯವಸ್ಥೆ ಮಾಡಬೇಕು ಎಂದು ಪಕ್ಷವು ದೇಶಾದ್ಯಂತ ಪ್ರಚಾರ ಮಾಡಲು ಕೂಡ ನಿರ್ಧರಿಸಿರುವ ಸಿಪಿಐ(ಎಂ) ಕೇಂದ್ರ ಸಮಿತಿ  ಇವಿಎಂನ ನಿಯಂತ್ರಕ ಯೂನಿಟ್‌ನಲ್ಲಿ ದಾಖಲಾಗಿರುವ ವಿವಿಪಿಎಟಿಯ ಕನಿಷ್ಠ 50 ಪ್ರತಿಶತವನ್ನು ತಾಳೆ ಮಾಡಬೇಕು ಎಂದೂ ಆಗ್ರಹಿಸಿದೆ.

ಇದನ್ನೂ ಓದಿಬಿಜೆಪಿ ನಾಯಕನ ಭೂ ಕಬಳಿಕೆ ವಿರುದ್ಧ ಪ್ರಕರಣ ದಾಖಲಿಸಿದ್ದ ವೃದ್ಧ ದಲಿತ ರೈತರಿಬ್ಬರಿಗೆ ಇಡಿ ಸಮನ್ಸ್!

ಜನವರಿ 28 ರಿಂದ 30 ರವ ರೆಗೆ ತಿರುವನಂತಪುರದಲ್ಲಿ ನಡೆದ ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆಯ ನಂತರ ನೀಡಿರುವ ಪತ್ರಿಕಾ ಹೇಳಿಕೆಯ ಕೆಲವು ಮುಖ್ಯ  ಅಂಶಗಳನ್ನು ಈ ಮುಂದೆ ಕೊಡಲಾಗಿದೆ:

ಅಯೋಧ್ಯೆ: ದೇವಾಲಯ ಉದ್ಘಾಟನೆ-ರಾಜಕೀಯ ಲಾಭದ  ಸಾಧನವಾಗಿ  ಪರಿವರ್ತಿಸುವ ಪ್ರಯತ್ನ

ಜನವರಿ 22, 2024 ರಂದು ಅಯೋಧ್ಯೆಯಲ್ಲಿ ನಡೆದ ದೇವಾಲಯದ ಉದ್ಘಾಟನೆಯು ಮತಧರ್ಮವನ್ನು ಪ್ರಭುತ್ವ,,ಆಡಳಿತ ಮತ್ತು ರಾಜಕೀಯದಿಂದ ಪ್ರತ್ಯೇಕಿಸುವುದು ಎಂದು ನಿರೂಪಿಸುವ ಜಾತ್ಯತೀತತೆಯ ಸಾವಿನ ಗಂಟೆ ಬಾರಿಸಿದೆ, ಇಡೀ ಕಾರ್ಯಕ್ರಮವು ಪ್ರಧಾನ ಮಂತ್ರಿ, ಉತ್ತರಪ್ರದೇಶ ಮುಖ್ಯಮಂತ್ರಿ, ರಾಜ್ಯಪಾಲರು ಮತ್ತು ಇಡೀ ಪ್ರಭುತ್ವಯಂತ್ರವನ್ನು ನೇರವಾಗಿ ಒಳಗೊಂಡ ಪ್ರಭುತ್ವ-ಪ್ರಾಯೋಜಿತ ಕಾರ್ಯಕ್ರಮವಾಗಿತ್ತು. ಭಾರತದ ರಾಷ್ಟ್ರಪತಿಗಳು ಮತ್ತು ಉಪರಾಷ್ಟ್ರಪತಿಗಳು ಪ್ರಧಾನಿಯವರಿಗೆ ‘ಪ್ರತಿಜ್ಞೆಯನ್ನು ಈಡೇರಿಸಿರುವುದಕ್ಕೆ’ ‘ಅಭಿನಂದನಾ ಸಂದೇಶಗಳನ್ನು ಕಳುಹಿಸಿದ್ದಾರೆ, “ತನ್ನ ನಾಗರಿಕತೆಯ ಪಥದಲ್ಲಿ ಅದೃಷ್ಟದೊಂದಿಗೆ ಭಾರತದ ಸಮಾಗಮ” ಎಂದೆಲ್ಲ ಪ್ರಶಂಸಿಸಿದ್ದಾರೆ. ಈ ಇಡೀ ಸಮಾರಂಭ ಸಂವಿಧಾನದ ಅಡಿಯಲ್ಲಿ ಪ್ರಭುತ್ವಕ್ಕೆ ಯಾವುದೇ ಮತ-ಧರ್ಮದೊಂದಿಗೆ ಸಂಯೋಜಿತವಾಗಿರಬಾರದು ಅಥವಾ ಆದ್ಯತೆಯನ್ನು ಹೊಂದಿರಬಾರದು ಎಂದು ಸುಪ್ರಿಂ ಕೋರ್ಟ್‍ ಪುನರುಚ್ಚರಿಸಿರುವ  ಮೂಲಭೂತ ತತ್ವದ ನೇರ ಉಲ್ಲಂಘನೆಯಾಗಿದೆ.

ಇದು ನೇರವಾಗಿ ರಾಜಕೀಯ ಮತ್ತು ಚುನಾವಣಾ ಲಾಭಗಳನ್ನು ಗಳಿಸುವ ಗುರಿಯಿಟ್ಟುಕೊಂಡಿರುವ ಒಂದು ಸಮಾರಂಭವಾಗಿತ್ತು. ಇದಕ್ಕೆ ಪೂರ್ವಭಾವಿಯಾಗಿ ಆರ್‌ಎಸ್‌ಎಸ್/ಬಿಜೆಪಿ ರಾಷ್ಟ್ರವ್ಯಾಪಿ ಬೃಹತ್ ಅಭಿಯಾನವನ್ನೇ ಹಮ್ಮಿಕೊಂಡಿತ್ತು.. ವಿವಿಧ ಸ್ಥಳಗಳಲ್ಲಿ ದೈತ್ಯ ಪರದೆಗಳ ಮೇಲೆ ನೇರ ಪ್ರಸಾರದ ಸಾರ್ವಜನಿಕ ಪ್ರದರ್ಶನಗಳನ್ನು ಆಯೋಜಿಸಲಾಯಿತು. ಶಿಕ್ಷಣ ಸಂಸ್ಥೆಗಳನ್ನು ಆ ದಿನದ ಮಟ್ಟಿಗೆ ಮುಚ್ಚಿಸಲಾಯಿತು. ನೌಕರರು  ಭಾಗವಹಿಸಲು ಅನುಕೂಲವಾಗುವಂತೆ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳನ್ನು ಮಧ್ಯಾಹ್ನ 2.30 ರವರೆಗೆ ಮುಚ್ಚಲಾಯಿತು. ಬ್ಯಾಂಕುಗಳು ಸೇರಿದಂತೆ ಅನೇಕ ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಸಂಸ್ಥೆಗಳನನ್ನೂ ಅದೇ ರೀತಿ ಮುಚ್ಚಲಾಯಿತು. ಪ್ರತಿ ರಾಜ್ಯ ಮತ್ತು ಸಂಸದೀಯ ಕ್ಷೇತ್ರದಿಂದ ದೇವಸ್ಥಾನಕ್ಕೆ ಭೇಟಿ ನೀಡಲು ಜನರನ್ನು ಸಜ್ಜುಗೊಳಿಸಲು ಯೋಜಿಸಲಾಗಿದೆ. ಇದು ಮಾರ್ಚ್ 2024 ರವರೆಗೆ ಅಂದರೆ ಚುನಾವಣೆಯ ಮುನ್ನಾದಿನದ ವರೆಗೆ ಇರುತ್ತದೆ.

ಅಯೋಧ್ಯೆಯನ್ನು ಹೊರತುಪಡಿಸಿ ಎಲ್ಲಾ ಧಾರ್ಮಿಕ ಸ್ಥಳಗಳ ಯಥಾಸ್ಥಿತಿಯು ಆಗಸ್ಟ್ 15, 1947 ರಂದು ಇದ್ದಂತೆಯೇ ಇರುತ್ತದೆ ಎಂದು ಆದೇಶಿಸುವ 1991 ರ ಪೂಜಾ ಸ್ಥಳಗಳ ಕಾಯಿದೆಯನ್ನು ಈಗ ಪೆಟ್ಟಿಗೆಯೊಳಕ್ಕೆ ಹಾಕಿ ಬೀಗ ಜಡಿಯಲಾಗುತ್ತದೆ ಎಂಬ ಸಂಕೇತವನ್ನು ಇದು ನೀಡಿದೆ. ಕಾಶಿ ಮತ್ತು ಮಥುರಾದಲ್ಲಿನ ವಿವಾದಗಳು ಮತ್ತೊಮ್ಮೆ ನ್ಯಾಯಾಂಗದ ಶಾಮೀಲಿನಿಂದ ತಲೆಯೆತ್ತಿವೆ. ಅಯೋಧ್ಯಾ ತೀರ್ಪಿಗೆ ಸುಪ್ರೀಂ ಕೋರ್ಟಿಗೆಗೆ ಮೋದಿ ಧನ್ಯವಾದ ಸುರಿಸಿದ್ದಾರೆ.

ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಆಯ್ಕೆಯಾಗಿರುವ ಧಾರ್ಮಿಕ ನಂಬಿಕೆಗಳನ್ನು ಗೌರವಿಸುವುದು ಸಿಪಿಐ(ಎಂ) ನೀತಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ನಂಬಿಕೆಯನ್ನು ಅನುಸರಿಸುವ ಹಕ್ಕನ್ನು ಪಕ್ಷವು ದೃಢವಾಗಿ ಎತ್ತಿಹಿಡಿದಿದೆ. ಆದರೆ ಅದೇ ಸಮಯದಲ್ಲಿ ರಾಜಕೀಯ ಲಾಭಕ್ಕಾಗಿ ಜನರ ಧಾರ್ಮಿಕ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಮತ್ತು ಅದನ್ನು ರಾಜಕೀಯ ಲಾಭದ  ಸಾಧನವಾಗಿ  ಪರಿವರ್ತಿಸುವ ಪ್ರಯತ್ನಗಳನ್ನು ಮತ್ತು ಮತಧರ್ಮವನ್ನು ಪ್ರಭುತ್ವದೊಂದಿಗೆ ದೊಂದಿಗೆ ವಿಲೀನಗೊಳಿಸುವುದನ್ನು ಅದು ಸತತವಾಗಿ ವಿರೋಧಿಸಿದೆ ಎಂದು ಕೇಂದ್ರ  ಸಮಿತಿ ಹೇಳಿಕೆ ತಿಳಿಸಿದೆ

ಬಿಜೆಪಿ: ಇ.ಡಿ. ಮತ್ತು ಹಣಶಕ್ತಿಯ ದುರುಪಯೋಗ ಇ.ಡಿ.

ಅಯೋಧ್ಯೆಯ ಸುತ್ತ ಕೇಂದ್ರೀಕೃತವಾಗಿರುವ ಧಾರ್ಮಿಕ ಭಾವನೆಗಳ ನಗ್ನ ದುರುಪಯೋಗ ಮತ್ತು ಇತ್ತೀಚಿನ ಚುನಾವಣಾ ವಿಜಯಗಳ ಹೊರತಾಗಿಯೂ, ಬಿಜೆಪಿಗೆ 2024 ರ ಚುನಾವಣೆಯ ಫಲಿತಾಂಶದ ಬಗ್ಗೆ ಖಾತ್ರಿಯಿಲ್ಲ ಎಂಬಂತೆ ಕಾಣುತ್ತದೆ.

ಬಿಜೆಪಿಯು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ವಿರೋಧ ಪಕ್ಷಗಳ ಪಕ್ಷಾಂತರಗಳನ್ನು ಸೃಷ್ಟಿಸಲು ಮತ್ತು ಲೋಕಸಭಾ ಚುನಾವಣೆಗಳಲ್ಲಿ ಗೆಲ್ಲುವ ಸಂಭವವನ್ನು ಹೆಚ್ಚಿಸಿಕೊಳ್ಳಲಿಕ್ಕಾಗಿ  ಹಿಂದಿನ ಪ್ರತಿಸ್ಪರ್ಧಿಗಳೊಂದಿಗೆ ಮೈತ್ರಿಗಳನ್ನು ಬೆಸೆಯಲು ಇ.ಡಿ. ಮತ್ತು ಹಣಬಲದ ಲಜ್ಜೆಗೆಟ್ಟ ಮತ್ತು ಆಕ್ರಮಣಕಾರಿ ದುರುಪಯೋಗಕ್ಕೆ ಇಳಿದಿದೆ.. ಇದನ್ನು ಮೊದಲು ಮಹಾರಾಷ್ಟ್ರದಲ್ಲಿ, ನಂತರ ಕರ್ನಾಟಕದಲ್ಲಿ ಮಾಡಿದೆ ಮತ್ತು ಈಗ ಬಿಹಾರದಲ್ಲಿ ಜೆಡಿ(ಯು) ಅತಿ ಹೆಚ್ಚು ತಿಪ್ಪರಲಾಗಗಳ ಒಂದು  ಅದ್ಭುತ ದಾಖಲೆಯನ್ನೇ ರಚಿಸಿದೆ. ನಿತೀಶ್ ಕುಮಾರ್ ಅವರು ಈ ಬಾರಿ ಬಿಜೆಪಿ ಬೆಂಬಲದೊಂದಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಆಗಿ ದಾಖಲೆಯ 9 ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿ ದಾಖಲೆ ನಿರ್ಮಿಸಿದ್ದಾರೆ. ಬಿಜೆಪಿಯನ್ನು ಸೋಲಿಸಿದ ಈ ರಾಜ್ಯಗಳ ಜನತೆ ಇಂತಹ ಗೋಸುಂಬೆಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಸಮಿತಿ ಹೇಳಿದೆ.

ಸಿಎಎ: ಡಿಸೆಂಬರ್ 2019 ರಿಂದ, ಮೋದಿ ಸರ್ಕಾರವು ಈ ಕಾಯಿದೆ ಅಡಿಯಲ್ಲಿ ನಿಯಮಗಳನ್ನು ರೂಪಿಸಿಲ್ಲ. ಈಗ, ಸಾರ್ವತ್ರಿಕ ಚುನಾವಣೆಯ ಮುನ್ನಾದಿನದಂದು, ಕೋಮು ಧ್ರುವೀಕರಣವನ್ನು ಮತ್ತಷ್ಟು ತೀಕ್ಷ್ಣಗೊಳಿಸುವ ದೃಷ್ಟಿಯಿಂದ ಮತ್ತು ವಿಶೇಷವಾಗಿ ಪೂರ್ವ ಭಾರತದಲ್ಲಿ ಚುನಾವಣಾ ಲಾಭವನ್ನು ಪಡೆಯುವ ಆಶಯದೊಂದಿಗೆ ಅದರ ಅನುಷ್ಠಾನಕ್ಕೆ ಮಂದೊತ್ತುತ್ತಿದೆ ಎಂದು ಅದು  ಅಭಿಪ್ರಾಯ ಪಟ್ಟಿದೆ.

‘ಇಂಡಿಯ’ ಬಣ

ಜೆಡಿ (ಯು) ‘ಇಂಡಿಯ’ ಬಣಕ್ಕೆ ಕೈಕೊಟ್ಟು ಬಿಜೆಪಿಯೊಂದಿಗೆ ಕೈಜೋಡಿಸಿದರೂ, ಸಿಪಿಐ(ಎಂ) ಇದನ್ನು ಇನ್ನಷ್ಟು ಬಲಪಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ ಮತ್ತು ನಮ್ಮ ಸಾಂವಿಧಾನಿಕ ಗಣರಾಜ್ಯದ ಜಾತ್ಯತೀತ ಪ್ರಜಾಸತ್ತಾತ್ಮಕ ಸ್ವರೂಪವನ್ನು ಕಾಪಾಡುವ ಸಲುವಾಗಿ ಬಿಜೆಪಿಯನ್ನು ಸೋಲಿಸುವ ಚಟುವಟಿಕೆಗಳನ್ನು ಮುಂದುವರಿಸುತ್ತದೆ. .

ಅದರಲ್ಲಿ ಭಾಗಿಯಾದವರ ನಡುವೆ ಸೀಟು ಹಂಚಿಕೆ ಕುರಿತು ನಡೆಯುತ್ತಿರುವ ರಾಜ್ಯ ಮಟ್ಟದ ಮಾತುಕತೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವುದು ಮತ್ತು ನಂತರ ಜನಗಳ ಜೀವನೋಪಾಯಗಳನ್ನು ಉತ್ತಮ ಪಡಿಸುವ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಪ್ರಮುಖ ವಿಷಯಗಳ ಆಧಾರದ ಮೇಲೆ ಅವರನ್ನು ತಲುಪಲು ಗಮನ ಕೇಂದ್ರೀಕರಿಸಬೇಕು ಎಂದು ಸಿಪಿಐ (ಎಂ) ಹೇಳಿದೆ.

ಕೇರಳ

‘ನವ ಕೇರಳ ಸದಸ್‌’ನ ಅತ್ಯಂತ ಯಶಸ್ವಿ ಕಾರ್ಯಕ್ರಮಕ್ಕಾಗಿ ಕೇಂದ್ರ ಸಮಿತಿಯು ಕೇರಳದ ಜನತೆ ಮತ್ತು ಎಲ್‌ಡಿಎಫ್ ಸರ್ಕಾರವನ್ನು ಅಭಿನಂದಿಸಿದೆ. ಇದು ದೇಶದ ಯಾವುದೇ ರಾಜ್ಯ ಸರ್ಕಾರ ಕೈಗೊಂಡ ಒಂದು ವಿಶಿಷ್ಟ ಕಾರ್ಯಕ್ರಮವಾಗಿದೆ ಎಂದು ಅದು ಹೇಳಿದೆ

ಗವರ್ನರ್: ಹುದ್ದೆಗೆ ಅನರ್ಹ: ಕೇರಳ ರಾಜ್ಯಪಾಲರು ಚುನಾಯಿತ ರಾಜ್ಯ ಸರ್ಕಾರದ ಮೇಲೆ ನಿರಂತರ ರಾಜಕೀಯ ದಾಳಿಗಳು ಮತ್ತು ತನ್ನ ಅತ್ಯಂತ  ವಿಕ್ಷಿಪ್ತ ನಡವಳಿಕೆಯೊಂದಿಗೆ ಎಲ್ಲಾ ಗಡಿಗಳನ್ನು ಮೀರಿದ್ದಾರೆ. ಇತ್ತೀಚೆಗಷ್ಟೇ ಅವರು ಸಂಪೂರ್ಣ ಪ್ರಜಾಪ್ರಸತ್ತಾತ್ಮಕ ಮತ್ತು ಶಾಂತಿಯುತ ವಿದ್ಯಾರ್ಥಿ ಪ್ರತಿಭಟನೆಯ ವಿರುದ್ಧ ಪ್ರತಿಭಟನೆಯೆನ್ನುತ್ತ ಕೇರಳದ ರಸ್ತೆಗಳಲ್ಲಿ ಧರಣಿ ಕುಳಿತಿದ್ದಾರೆ. ಅಭೂತಪೂರ್ವ ತೀತಿಯಲ್ಲಿ ಅವರು ಕೇಂದ್ರೀಯ  ಭದ್ರತಾ ಪಡೆಗಳಿಂದ ತನಗಾಗಿ ಹೆಚ್ಚಿನ ರಕ್ಷಣೆಯನ್ನು ಕೇಳಿ  ಪಡೆದಿದ್ದಾರೆ, ತನಗಾಗಿ ಅತಿ ಹೆಚ್ಚಿನ  ಭದ್ರತಾ ಯೋಜನೆಯನ್ನು ಪಡೆದಿದ್ದಾರೆ. “ಸಾಂವಿಧಾನಿಕ ಯಂತ್ರದ ಪತನದ ಆರಂಭ” ಎಂಬಂತಹ  ಅವರ ಹೇಳಿಕೆಗಳು ರಾಜ್ಯ ಸರ್ಕಾರದ ವಿರುದ್ಧ ಹೊರಿಸಲಾದ ಬೆದರಿಕೆಗಳಾಗಿದ್ದು, ಅದನ್ನು ರಾಜ್ಯದ ಜನರು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ.

ಕಾಂಗ್ರೆಸ್ ಪಕ್ಷವು ಎಲ್ ಡಿಎಫ್ ಸರ್ಕಾರಕ್ಕೆದ ಬಗ್ಗೆ ನಕಾರಾತ್ಮಕ ಮತ್ತು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸುತ್ತಿದೆ ಮತ್ತು ಮುಖ್ಯಮಂತ್ರಿ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ. ಕೇರಳದ ಹಕ್ಕುಗಳ ಮೇಲಿನ ಕೇಂದ್ರದ ದಾಳಿಯ ಬಗ್ಗೆ ಅದು ಮೌನವಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯ ತಂತ್ರಗಳಿಗೆ ಸಹಾಯ ಮಾಡುತ್ತದೆ. ಕಾಂಗ್ರೆಸ್ ಪಕ್ಷದ ಈ ಛಿದ್ರಕಾರಿ ನಿಲುವನ್ನು ಕೇರಳದ ಜನರು ತಿರಸ್ಕರಿಸುತ್ತಾರೆ ಎಂದು ಸಿಪಿಐ(ಎಂ) ಕೇಂದ್ರ  ಸಮಿತಿ ಹೇಳಿದೆ.

ಈ ವಿಡಿಯೋ ನೋಡಿಮೋದಿ ಸರಕಾರದ ವಿರುದ್ಧ ಮಾತನಾಡಿದ್ರೆ ಇಡಿ ದಾಳಿ, ಕೇಸ್ ದಾಖಲೆ!? ಏನಿದು ಮೋದಿ ಸಾಹೆಬ್ರೆ?

 

Donate Janashakthi Media

Leave a Reply

Your email address will not be published. Required fields are marked *