ಅಂತರ್ಜಾತಿ ವಿವಾಹಕ್ಕೆ ಸಹಾಯ : ಸಿಪಿಐ(ಎಂ) ಕಚೇರಿ ಮೇಲೆ ದಾಳಿ, 8 ಮಂದಿ ಬಂಧನ

ತಮಿಳುನಾಡು: ಅಂತರ್ಜಾತಿ ವಿವಾಹಕ್ಕೆ ಸಹಾಯ ಮಾಡಿದ್ದಕ್ಕಾಗಿ ಸಿಪಿಐಎಂ ಕಚೇರಿಯ ಮೇಲೆ ದಾಳಿ ನಡೆಸಿ, ಕಚೇರಿಯನ್ನು ಧ್ವಂಸ ಮಾಡಿದ್ದ ಪ್ರಬಲ ಜಾತಿಯ 8 ಮಂದಿಯನ್ನು ಬಂಧಿಸಲಾಗಿದೆ.

ವರದಿಗಳ ಪ್ರಕಾರ ಕಳೆದ ಗುರುವಾರು ಪ್ರಬಲ ಸಮುದಾಯಕ್ಕೆ ಸೇರಿದ್ದ ಎನ್ನಲಾದ ಹುಡುಗಿ ಮತ್ತು ದಲಿತ ಸಮುದಾಯದ ಹುಡುಗನ ನಡುವೆ ವಿವಾಹವಾಗಿತ್ತು.

ಅಂತರ್ಜಾತಿ ಮದುವೆಗೆ ಸಹಾಯ ಮಾಡಿದ್ದಕ್ಕಾಗಿ ಹುಡುಗಿಯ ಕುಟುಂಬದ ಸದಸ್ಯರು ಸೇರಿದಂತೆ ಆ ಸಮುದಾಯಕ್ಕೆ ಸೇರಿದ್ದ ಕೆಲವು ಮಂದಿ ದಕ್ಷಿಣ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಹುಡುಗಿಯ ಕುಟುಂಬ ಸದಸ್ಯರು ಸೇರಿದಂತೆ 8 ಮಂದಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಇದನ್ನು ಓದಿ : ದಕ್ಷಿಣ ಭಾರತದಲ್ಲಿ ಜನ ಬಿಜೆಪಿಯನ್ನು ಬೆಂಬಲಿಸುವುದಿಲ್ಲ: ಸಿದ್ದರಾಮಯ್ಯ

ಮಾಧ್ಯಮ ವರದಿಗಳ ಪ್ರಕಾರ, ಪಾಲಯಂಗೊಟ್ಟೈನ ಅರುಂತಥಿಯಾರ್ ಪರಿಶಿಷ್ಟ ಜಾತಿಗೆ ಸೇರಿದ್ದ ಮದನ್‌ ಹಾಗೂ ಪೆರುಮಾಳ್ಪುರಂನ ಪಿಳ್ಳೈ ಸಮುದಾಯದ ದಾಕ್ಷಾಯಿಣಿ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರು ಅಂತರ್ಜಾತಿ ಸಮುದಾಯಕ್ಕೆ ಸೇರಿದ್ದಾರೆನ್ನುವ ಕಾರಣಕ್ಕೆ ಹುಡುಗಿಯ ಮನೆಯವರು ಇವರ ವಿವಾಹಕ್ಕೆ ಅಡ್ಡಿಯಾಗಿದ್ದರು. ಆಗ ದಾಕ್ಷಾಯಿಣಿ ಹಾಗೂ ಮದನ್‌ಗೆ ಸಿಪಿಐಎಂ ಸಹಾಯ ಮಾಡಲು ಮುಂದೆ ಬಂದಿತ್ತು.

ಸಿಪಿಐಎಂ ಸದಸ್ಯರು ಗುರುವಾರ ಅಸ್ಪೃಶ್ಯತೆ ನಿರ್ಮೂಲನಾ ಮೋರ್ಚಾದ ಸಹಾಯದಿಂದ ವಿವಾಹವಾಗಿದ್ದರು. ವಿವಾಹದ ಬಳಿಕ ದಾಕ್ಷಾಯಿಣಿ ಕುಟುಂಬವು ಸಿಪಿಎಐಎಂ ಕಚೇರಿಗೆ ದಾಳಿ ನಡೆಸಿದೆ. ತಕ್ಷಣಕ್ಕೆ ಪೊಲೀಸರು ಕಚೇರಿ ತಲುಪಿ ದಾಳಿಕೋರರನ್ನು ಬಂಧಿಸಿದ್ದಾರೆ.

ತಿರುನಲ್ವೇಲಿ ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಪಕ್ಷದ ಕಚೇರಿಯಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ.

ಇದನ್ನು ನೋಡಿ : ಹಿಂದಿ ರಾಜ್ಯಗಳಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ : ಸೀಟು ಮತಗಳಿಕೆ ಕುಸಿದ 5 ರಾಜ್ಯಗಳುJanashakthi Media

Donate Janashakthi Media

Leave a Reply

Your email address will not be published. Required fields are marked *