ಮಂಗಳೂರು : ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮ್ಮೇಳನವು ಅಕ್ಟೋಬರ್ 27 ರಂದು ಕೊಟ್ಟಾರ ಚೌಕಿಯ ವಿ.ಎಸ್.ಕೆ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸಿಪಿಐಎಂ
ಸಿಪಿಐಎಂ ಪಕ್ಷದ 24 ನೇ ಅಖಿಲ ಭಾರತ ಮಹಾ ಅಧಿವೇಶನ 2025 ಎಪ್ರಿಲ್ ನಲ್ಲಿ ಮಧುರೈ ನಲ್ಲಿ ಆರು ದಿನಗಳ ಕಾಲ ನಡೆಯಲಿದೆ. ಅದರ ಪೂರ್ವ ಭಾವಿಯಾಗಿ ಎಲ್ಲಾ ಹಂತಗಳ ಸಮ್ಮೇಳನಗಳು ದೇಶಾದ್ಯಂತ ಆರಂಭಗೊಂಡಿವೆ. ದ.ಕ. ಜಿಲ್ಲೆಯಲ್ಲಿಯೂ ಸಮ್ಮೇಳನದ ಪ್ರಕ್ರಿಯೆಗಳು ಆರಂಭಗೊಂಡಿದೆ. ಮಂಗಳೂರು ನಗರ ದಕ್ಷಿಣ ಸಮ್ಮೇಳನವು ಉರ್ವಸ್ಟೋರಿನಲ್ಲಿ ಕಾಮ್ರೇಡ್ ಸೀತಾರಾಮ್ ಯೆಚೂರಿ ವೇದಿಕೆ, ಕಾಮ್ರೇಡ್ ಕೊರಗಪ್ಪ ಶೆಟ್ಟಿ ಸಭಾಂಗಣ ಹಾಗೂ ಕಾಂ ಜೆರಿ ಪತ್ರಾವೋ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಇದನ್ನು ಓದಿ : ಸಾಮ್ರಾಜ್ಯಶಾಹಿ ಪ್ರಾಬಲ್ಯದ ಮರುಹೇರಿಕೆಗೆ ಎರಡು ಅಸ್ತ್ರಗಳು: ನವ-ಉದಾರವಾದಿ ಆಳ್ವಿಕೆಯ ಹೇರಿಕೆ ಮತ್ತು ಯುದ್ಧಗಳಿಗೆ ಉತ್ತೇಜನೆ-ಸಮರ್ಥನೆ
ಅಕ್ಟೋಬರ್ 27 ರಂದು ಬೆಳಿಗ್ಗೆ 9:30 ಕ್ಕೆ ಧ್ವಜಾರೋಹಣದೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರುಗಳಾದ ಜೆ ಬಾಲಕೃಷ್ಣಶೆಟ್ಟಿ, ಪದ್ಮಾವತಿ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್ ಮಾರ್ಗದರ್ಶಕರಾಗಿ ಉಪಸ್ಥಿತರಿರುತ್ತಾರೆ. ಆ ನಂತರ ಸಮ್ಮೇಳನದ ಪ್ರತಿನಿಧಿ ಕಲಾಪಗಳು ನಡೆಯಲಿವೆ.
ಅದೇ ದಿನ ಸಂಜೆ 4 ಗಂಟೆಗೆ ಸಭಾಂಗಣದ ವಠಾರದಿಂದ ಉರ್ವಸ್ಟೋರ್ ಜಂಕ್ಷನ್ ವರೆಗೆ ಆಕರ್ಷಕ ಮೆರವಣೆಗೆ ಹಾಗೂ ಕಾಂ ಚಂದು ಭಂಡಾರಿ ವೇದಿಕೆ, ಕಾಂ ಸುಂದರ ಸಾಲ್ಯಾನ್ ನಗರದಲ್ಲಿ ಬಹಿರಂಗ ಸಭೆ ನಡೆಯಲಿದೆ. ಈ ಬಹಿರಂಗ ಸಭೆಗೆ ಪ್ರಮುಖ ಭಾಷಣಗಾರರಾಗಿ ಸಿಪಿಐಎಂ ಪಕ್ಷದ ಕರ್ನಾಟಕ ರಾಜ್ಯ ಮುಖಂಡರಾದ ಕೆ ಮಹಾಂತೇಶ್ ಭಾಗವಹಿಸಲಿದ್ದಾರೆ ಎಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್ ತಿಳಿಸಿದ್ದಾರೆ.
ಇದನ್ನು ನೋಡಿ : ಹುಟ್ಟುಹಬ್ಬದ ವಿಶೇಷ: ಸ್ವಾತಂತ್ರ್ಯ ಹೋರಾಟಗಾರ್ತಿ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ನೆನಪು Janashakthi Media