ಬೆಂಗಳೂರು :ಹಿಂದಿನ ಸಕಾ೯ರದ ವೇಳೆ ರೂಪಿಸಲಾಗಿದ್ದ ಮುಖ್ಯಮಂತ್ರಿ ಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ ಅಡಿ ಸಲ್ಲಿಸಿದ್ದ ಅಜಿ೯ಗಳನ್ನು ರದ್ದು ಪಡಿಸಿರುವುದನ್ನು ಅಕ್ಷಮ್ಯ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ್೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕಾ೯ರಗಳು ಬದಲಾಗುತ್ತವೆ ಆದರೆ ಹಿಂದಿನ ಸಕಾ೯ರಗಳ ಜನಕಲ್ಯಾಣ ಯೋಜನೆಗಳನ್ನು ಮುಂದುವರೆಸುತ್ತವೆ. ಆದರೆ ಬಿಜೆಪಿ ಸರಕಾರ ಮಾತ್ರ ಅದಕ್ಕೆ ಹೊರತಾಗಿ ತನ್ನ ರಾಜಕೀಯ ಇತಾಸಕ್ತಿಗಾಗಿ ವತಿ೯ಸುತ್ತಿದೆ. ಇದರ ಪರಿಣಾಮ ಅಜಿ೯ ಸಲ್ಲಿಸಿ ವಸತಿ ಪಡೆಯುವ ಆಸೆಯಲ್ಲಿದ್ದ ಸಾವಿರಾರು ಅಸಂಘಟಿತ ಕಾಮಿ೯ಕರ ಕನಸ್ಸನ್ನು ಅಜಿ೯ ರದ್ದು ಪಡಿಸುವ ಮೂಲಕ ಬಿಜೆಪಿ ಸಕಾ೯ರ ಬಘ್ನಗೊಳಿಸಿದೆ.
ಬಿಜೆಪಿ ಪಕ್ಷದೊಳಗಿನ ಆಂತರಿಕ ಕಚ್ಚಾಟ ಶಮನಕ್ಕಾಗಿ ಶಾಸಕರನ್ನು ತೃಪ್ತಿ ಪಡಿಸಿಕೊಳ್ಳಲು ಶಾಸಕರಿಗೆ ಐವತ್ತು ಶೇಕಡ ಫಲಾನುಭವಿಗಳ ಗುರುತಿಸಲು ಮತ್ತು ಉಳಿದ 50ಶೇಕಡ ಫಲಾನುಭವಿಗಳನ್ನು ಗುರುತಿಸಲು ಬಿಜೆಪಿ ಬೆಂಬಲಿತ ಖಾಸಗಿ ಏಜೆನ್ಸಿಗೆ ನೀಡುವ ರಾಜಕೀಯ ದುರುದ್ದೇಶ ಅಜಿ೯ ರದ್ದತಿ ಹಿಂದೆ ಅಡಗಿದೆ. ಅದಕ್ಕಾಗಿ ಅಜಿ೯ ಸಲ್ಲಿಸಿ ಮನೆ ದೊರಕುವ ತಿಳುವಳಿಕೆ ಪತ್ರವನ್ನು ಸಹಾ ಸಕಾ೯ರದಿಂದ ಪಡೆದಿದ್ದ 65 ಸಾವಿರ ಅಸಂಘಟಿತರು ವಸತಿ ವಂಚಿತರಾಗಬೇಕಾಗಿ ಬಂದಿದೆ ಎಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ,ಕಾಯ೯ದಶಿ೯ ಕೆ.ಎನ್.ಉಮೇಶ್, ಖಂಡಿಸಿದ್ದಾರೆ.
ಈ ಹಿಂದೆ ಅಜಿ೯ ಸಲ್ಲಿಸಿ ತಿಳುವಳಿಕೆ ಪತ್ರ ಪಡೆದಿದ್ದ 65 ಸಾವಿರ ಅಜಿ೯ದಾರರಿಗೆ ಮೊದಲು ವಸತಿ ನೀಡಿ ಆನಂತರ ಅಜಿ೯ದಾರರಲ್ಲಿ ಫಲಾನುಭವಿಗಳ ಗುರುತಿಸಲು ರಾಜ್ಯ ಕಟ್ಟಡ ಕಾಮಿ೯ಕರ ಸಾಮಾಜಿಕ ಸುರಕ್ಷತಾ ಮಂಡಳಿ ಮತ್ತು ರಾಜ್ಯ ಅಸಂಘಟಿತ ಕಾಮಿ೯ಕರ ಸಾಮಾಜಿಕ ಸುರಕ್ಷತಾ ಮಂಡಳಿಗೆ ಜವಾಬ್ದಾರಿ ಕೂಡ ಬೇಕೆಂದು , ಬೆಂಗಳೂರು ಉತ್ತರ ಜಿಲ್ಲಾ ಸಮಿತಿ, ಸಿಪಿಐ ಎಂ ಕಾಯ೯ದಶಿ೯ , ಎನ್. ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.
ಸಿಪಿಐ(ಎಂ) ನೇತೃತ್ವದಲ್ಲಿ ಇತರೆ ಸಾಮಾಜಿಕ ಸಂಘಟನೆಗಳು ಸಕಾ೯ರಿ ಭೂಮಿ ಹರಾಜಿನ ವಿರುದ್ಧ ವಸತಿ ನಿವೇಶನ ರಹಿತರಿಗೆ ವಸತಿ ನಿವೇಶನ ನೀಡಬೇಕೆಂದು ಒತ್ತಾಯಿಸಿ ನಡೆಸಿದ್ದ ಹೋರಾಟಗಳ ಪರಿಣಾಮ ಈ ಯೋಜನೆ ರೂಪಿಸಲಾಗಿತ್ತು.ಆದರೆ ಜಾರಿ ವಿಳಂಬವಾಗಿತ್ತು. ಸದ್ಯ ಇದೀಗ ಜಾರಿಯಾಗುವಾಗ ಮತ್ತೆ ಬಿಜೆಪಿ ಸಕಾ೯ರದ ರಾಜಕೀಯ ದುರುದ್ದೇಶ ಅದರ ಜಾರಿಗೆ ಅಡ್ಡಿಯಾಗಿದೆ ಎಂದು ತಿಳಿಸಿದರು.