ಬಿಜೆಪಿಗೆ ಹಿನ್ನಡೆಯುಂಟು ಮಾಡಿರುವ ಜನರ ತೀರ್ಪು – ಲೋಕಸಭಾ ಚುನಾವಣಾ ಫಲಿತಾಂಶಗಳ ಬಗ್ಗೆ ಸಿಪಿಐ(ಎಂ)ಅಭಿನಂದನೆ

18ನೇ ಲೋಕಸಭಾ ಚುನಾವಣೆ ಫಲಿತಾಂಶ ಬಿಜೆಪಿಗೆ ಒಂದು ಹಿನ್ನಡೆಯಾಗಿದೆ. ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ 2014 ಮತ್ತು 2019ರಲ್ಲಿ ಲೋಕಸಭೆಯಲ್ಲಿ ಪಡೆದಿದ್ದ ಬಹುಮತವನ್ನು ಅದು ಕಳೆದುಕೊಂಡಿದೆ. ಈ ಚುನಾವಣೆಯಲ್ಲಿ 400 ಸೀಟುಗಳನ್ನು ಗೆಲ್ಲುವುದಾಗಿ  ಬೀಗುತ್ತಿದ್ದ ನರೇಂದ್ರ ಮೋದಿಯ ಸುತ್ತ ಕಟ್ಟಿಕೊಂಡಿದ್ದ ಅಜೇಯತೆಯ ಚಿತ್ರಣವನ್ನು ಕುಟುಕಿರುವ ಹೊಡೆತ ಎಂದು  ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಈ ಚುನಾವಣೆಗಳು ವಿರೋಧ ಪಕ್ಷಗಳ ಮೇಲೆ ಸತತ ದಾಳಿಗಳು, ಕೇಂದ್ರೀಯ ಸಂಸ್ಥೆಗಳ ದುರುಪಯೋಗ ಮತ್ತು ಹಣಬಲದ ಭಾರೀ ಬಳಕೆಯ ಹಿನ್ನೆಲೆಯಲ್ಲಿ ನಡೆದಿವೆ. ಈ ನಿರಂಕುಶ ದಾಳಿಗಳನ್ನು ಎದುರಿಸಿ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ನಾಗರಿಕ ಹಕ್ಕುಗಳನ್ನು ಜನರು ಕಾಪಾಡಿದ್ದದ್ದಾರೆ ಎನ್ನುತ್ತ ಪೊಲಿಟ್ ಬ್ಯೂರೋ ಜನರನ್ನು ಅಭಿನಂದಿಸಿದೆ. ಹಿನ್ನಡೆ

ಇದನ್ನೂ ಓದಿ: ಕಾಂಗ್ರೆಸ್ ನಾಯಕರು ಜೆಡಿಯು ಹಾಗೂ ಟಿಡಿಪಿ ನಾಯಕರ‌ ಜೊತೆ ಮಾತುಕತೆ

ಇಂಡಿಯ ಮೈತ್ರಿಕೂಟ ನಿರುದ್ಯೋಗ, ಬೆಲೆ ಏರಿಕೆ, ಕೃಷಿ ಸಂಕಟ ಮತ್ತು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲಿನ ದಾಳಿಯ ಪ್ರಶ್ನೆಗಳನ್ನು ಕೈಗೆತ್ತಿಕೊಂಡು ಉತ್ತಮ ಪ್ರದರ್ಶನ ನೀಡಿದೆ. ಮೋದಿ ಮತ್ತು ಬಿಜೆಪಿ ನಡೆಸಿದ ಕೋಮುವಾದಿ ಚುನಾವಣಾ ಪ್ರಚಾರವನ್ನು ಸಾಕಷ್ಟು ಪ್ರಮಾಣದಲ್ಲಿ ಎದುರಿಸಲು ಅದು ಸಮರ್ಥವಾಗಿದೆ.

ಚುನಾವಣಾ ಆಯೋಗವು ಸಮಾನ ಅವಕಾಶವನ್ನು  ಖಾತ್ರಿಪಡಿಸಿದ್ದರೆ ಫಲಿತಾಂಶಗಳು ಬಿಜೆಪಿ ಮತ್ತು ಎನ್‌ಡಿಎಗೆ ಇನ್ನೂ  ಹೆಚ್ಚು ಪ್ರತಿಕೂಲಕರವಾಗುತ್ತಿದ್ದವು . ನರೇಂದ್ರ ಮೋದಿಯವರ ಪ್ರಚೋದನಕಾರಿ ಕೋಮುವಾದಿ ಭಾಷಣಗಳನ್ನು  ನಿಗ್ರಹಿಸುವಲ್ಲಿ ಮತ್ತು ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸುವಲ್ಲಿ ಅದರ ಹೀನಾಯ ವಿಫಲತೆ  ಆಯೋಗದ ಖ್ಯಾತಿಗೆ ಕಳಂಕವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖೇದ ವ್ಯಕ್ತಪಡಿಸಿದೆ.

ಸಿಪಿಐ(ಎಂ) ಮತ್ತು ಎಡಪಕ್ಷಗಳು ತಮ್ಮ ಒಟ್ಟು ಸಂಖ್ಯೆಯಲ್ಲಿ  ಅಲ್ಪ ಸುಧಾರಣೆ ದಾಖಲಿಸಿವೆ. ಸಂಪೂರ್ಣ ಚುನಾವಣಾ ಫಲಿತಾಂಶಗಳು ಲಭ್ಯವಾದ ನಂತರ ಈ ಬಗ್ಗೆ ಹೆಚ್ಚು ವಿವರವಾದ ವಿಶ್ಲೇಷಣೆಯನ್ನು ಕೈಗೊಳ್ಳಲಾಗುವುದು ಎಂದು ಪೊಲಿಟ್‍ಬ್ಯುರೊ ಹೇಳಿದೆ.

ಜನರು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ತಮ್ಮ ಜೀವನೋಪಾಯದ ಮೇಲಿನ ಎಲ್ಲಾ ದಾಳಿಗಳನ್ನು ಎದುರಿಸಿ ಹೋರಾಡಲಿದ್ದಾರೆ ಎಂಬುದರ ಸಂಕೇತ  ಈ ತೀರ್ಪು ಎಂದು  ಸಿಪಿಐ(ಎಂ) ಪೊಲಿಟ್‍ಬ್ಯುರೊ ವರ್ಣಿಸಿದೆ.

ಇದನ್ನೂ ನೋಡಿ: ಲೋಕಮತ 2024 | ಯಾರಿಗೂ ಸಿಗದ ಬಹುಮತ, ಸರ್ಕಾರ ರಚಿಸುವವರು ಯಾರು? Janashakthi Media

Donate Janashakthi Media

Leave a Reply

Your email address will not be published. Required fields are marked *