ದರ್ಮಸ್ಥಳ| ಪದ್ಮಲತಾ ಮನೆಗೆ ಸಿಪಿಐಎಂ ನಿಯೋಗ ಭೆಟಿ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ದಶಕಗಳ ಹಿಂದೆ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಸಿಪಿಎಂ ಮುಖಂಡ ದೇವಾನಂದ ಅವರ ಪುತ್ರಿ ಪದ್ಮಲತಾರ ಮನೆಗೆ ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಪ್ರಕಾಶ್ ಕೆ. ನೇತೃತ್ವದ ತಂಡ ಭೇಟಿ ನೀಡಿದರು.

ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ ಪ್ರಕರಣದ ಬಗ್ಗೆ ಮುಂದಿನ ತನಿಖೆಗೆ ಒತ್ತಾಯಿಸುವ ಕುರಿತು ಚರ್ಚಿಸಿತು. ಬಳಿಕ ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪ್ರಕಾಶ್ ಕೆ., ಇದೀಗ ಅನಾಮಿಕ ನೀಡದ ದೂರಿನ ಹಿನ್ನಲೆಯಲ್ಲಿ ರಚನೆಯಾಗಿರುವ ಎಸ್.ಐ.ಟಿ.ಯಿಂದಲೇ ಪದ್ಮಲತಾ ಪ್ರಕರಣ, ಆನೆ ಮಾವುತ ಹಾಗೂ ಸಹೋದರಿಯ ಕೊಲೆ ಪ್ರಕರಣ, ಸೌಜನ್ಯಾ ಅತ್ಯಾಚಾರ-ಹತ್ಯೆ ಪ್ರಕರಣ, ವೇದವಲ್ಲಿ ಪ್ರಕರಣಗಳತನಿಖೆ ನಡೆಸಬೇಕು. ಅದು ಸಾಧ್ಯವಾಗದಿದ್ದಲ್ಲಿ ಈ ಎಲ್ಲ ಪ್ರಕರಣಗಳ ಬಗ್ಗೆ ಹಾಗೂ ಧರ್ಮಸ್ಥಳದಲ್ಲಿನ ಜಾಗದ ಹಗರಣಗಳ ಬಗ್ಗೆ ತನಿಖೆ ನಡೆಸಲು ಪ್ರತ್ಯೇಕ ಎಸ್ಐಟಿ ರಚಿಸಬೇಕು ಎಂದು ಒತ್ತಾಯಿಸಿದರು. 

ಇದನ್ನೂ ಓದಿ : ಹಾಸನ | ಹಿಮ್ಸ್‌ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೂಡಲೇ ಆರಂಭಿಸುವಂತೆ ಒತ್ತಾಯ 

ಈ ನಿಯೋಗದಲ್ಲಿ ಸಿಪಿಐಎಂ ರಾಜ್ಯ ಮುಖಂಡರಾದ ಕೆ ಎಸ್‌ ವಿಮಲ, ಯಾದವ ಶೆಟ್ಟಿ, ಭಟ್ಟ, ಹಾಗೂ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನಿರ ಕಾಟಿಪಾಳ್ಳ ಇದ್ದರು

ಇದನ್ನೂ ನೋಡಿ : ಸಿಯುಕೆ| ಶೈಕ್ಷಣಿಕ ಹತ್ಯೆ – ಪೊಲೀಸ್‌ ಬರುವ ಮುನ್ನವೇ ಕಾರ್ಪೆಂಟರ್‌ ಮೂಲಕ ಬಾಗಿಲು ಮುರಿದಿದ್ದು ಯಾಕೆ ? #CUK

 

Donate Janashakthi Media

Leave a Reply

Your email address will not be published. Required fields are marked *