ಸೋರ್ಬಾಗ್ ಅಸ್ಸಾಂ ವಿಧಾನಸಭೆಯ ಸೋರ್‌ಬಾಗ್ ವಿಧಾನಸಭಾ ಕ್ಷೇತ್ರವನ್ನು ಸಿಪಿಐಎಂ ಗೆದ್ದುಕೊಂಡಿದೆ. 11,868 ಮತಗಳಿಂದ ಸಿಪಿಐಎಂನ ಮನೋರಂಜನ್ ತಾಲ್ಲೂಕ್ದಾರ್ ರವರು ಬಿಜೆಪಿಯ ಶಂಕರ್ ದಾಸ್ ರವರನ್ನು ಸೋಲಿಸಿದ್ದಾರೆ.
2016 ರ ಚುನಾವಣೆಯಲ್ಲಿ ಸೋರ್‌ಬಾಗ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 56,454 ಮತಗಳನ್ನು ಪಡೆದಿತ್ತು, ಸಿಪಿಐಎಂ 29,082 ಮತಗಳನ್ನು ಪಡೆದಿತ್ತು. ಗೆದ್ದಿದ್ದ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದರೆ, ಸಿಪಿಐಎಂ ಭಾರೀ ಅಂತರದ ಗೆಲುವನ್ನು ಸಾಧಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಸಿಪಿಐಎಂ ನ ಮನೋರಂಜನ್ ತಾಲ್ಲೂಕ್ದಾರ್ 96,134 ಮತಗಳನ್ನು ಪಡೆದು ಮತಪ್ರಮಾಣವನ್ನು ಮೂರುಪಟ್ಟು ಹೆಚ್ಚಿಸಿಕೊಂಡು ಗೆಲುವು ಸಾಧಿಸಿದ್ದಾರೆ. ಚಲಾವಣೆಯಾಗಿದ್ದ 1,91, 460 ಮತಗಳಲ್ಲಿ 50.21 % ರಷ್ಟು ಮತಗಳನ್ನು ಮನೋರಂಜನ್ ಪಡೆದಿದ್ದಾರೆ.
ಮಹಾಜೋತ್ ಮೈತ್ರಿಯ ಭಾಗವಾಗಿದ್ದ ಸಿಪಿಐಎಂ ಅಸ್ಸಾಂ ನಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಯನ್ನು ಮಾಡಿತ್ತು. ಸೋರ್ಬಾಗ್ ವಿಧಾನ ಸಭೆಯಲ್ಲಿ ಬಿಜೆಪಿಯಿಂದ ಗೆಲುವು ಕಸಿದು ಕೊಂಡಿದ್ದ ಸಿಪಿಐಎಂ ರಂಗಿಯಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಭಾರೀ ಫೈಟ್ ನೀಡಿ ಅಂತಿಮವಾಗಿ ಎರಡನೇ ಸ್ಥಾನವನ್ನು ಪಡೆದಿದೆ. ಬಿಜೆಪಿ ಭಾಬೇಶ್ ಕಲಿತಾ 84,067 ಮತಗಳನ್ನು ಪಡೆದರೆ ಸಿಪಿಐಎಂನ ಭಾಗ್ಬನ್ ದೇವ್ ಮಿಸ್ರಾ 64,267 ಮತಗಳನ್ನು ಪಡೆದು 19,800 ಮತಗಳಿಂದ ಸೋತರು ಭಾರಿ ಪೂಪೋಟಿ ಮೂಲಕ ಬಿಜೆಪಿ ಅಭ್ಯರ್ಥಿಯ ಎದೆಯಲ್ಲಿ ನಡುಕ ಹುಟ್ಟಿಸಿದ್ದಂತೂ ನಿಜ
ಒಟ್ಟಾರೆ ಸಿಪಿಐಎಂ ಈ ಬಾರಿಯ ಚುನಾವಣೆಯಲ್ಲಿ 0.84% ಮತಗಳನ್ನು ಪಡೆದಿದ್ದು, 2016 ರ ಚುನಾವಣೆಯಲ್ಲಿ 0.55% ಮತಗಳನ್ನು ಪಡೆದಿತ್ತು 0.29% ಮತಪ್ರಮಾಣವನ್ನು ಹೆಚ್ಚಿಸಿಕೊಂಡಿದೆ. ಸೋರ್‌ಬಾಗ್ ಕ್ಷೇತ್ರದಲ್ಲಿ 1978, 83, 85 ರ ಚುನಾವಣೆಯಲ್ಲಿ ಸಿಪಿಐಎಂ ಹೇಮನ್ ದಾಸ್ ಗೆಲುವು ಸಾಧಿಸಿದ್ದರು. 2006 ರಲ್ಲಿ ಉದ್ಧಾಬ್ ಬರ್ಮನ್ ಗೆಲುವು ಸಾಧಿಸಿದ್ದರು. 15 ವರ್ಷಗಳ ನಂತರ ಈಗ ಸಿಪಿಐಎಂ ಗೆಲುವು ಸಾಧಿಸಿದೆ.