ಶ್ರಮ ದೊಚುವ ವ್ಯವಸ್ಥೆಯನ್ನು ಬದಲಿಸುವುದೇ ಕಮ್ಯುನಿಸ್ಟ್ ಚಳುವಳಿ

ತುಮಕೂರು : ಶ್ರಮದೊಚುವ ವ್ಯವಸ್ಥೆಯನ್ನು ಬದಲಿಸುವುದೆ ಕಮ್ಯುನಿಸ್ಟ್ ಚಳುವಳಿ ಇಂದು ನಾವು ನಮ್ಮ ಕರ್ಮಗಳ ಫಲದಿಂದ ಹೀಗೆ ಇದ್ದೇವೆ ಎಂಬ ಸಿದ್ಧಾಂತ ಒಪ್ಪಲಾಗದು, ಈ ವ್ಯವಸ್ಥೆಯಲ್ಲಿ ನಮ್ಮ ಶ್ರಮದ ದುಡಿಮೆಯನ್ನು ದೊಚಲಾಗುತ್ತಿದೆ. ಸುಗ್ಗಿ ಸಂಧರ್ಭದಲ್ಲಿ ಬೆಳೆಗಳ ಬೆಲೆಗಳನ್ನು ಏರಿಳಿತ ಮಾಡಿ ರೈತರನ್ನು ಕಂಗಾಲು ಮಾಡಲಾಗುತ್ತಿದೆ. ಈ ಅನ್ಯಾಯ್ಯದ ವ್ಯವಸ್ಥೆಯನ್ನು ಬದಲಿಸುವುದೆ ಕಮ್ಯುನಿಸ್ಟ್. ಚಳುವಳಿಯ ಅಶಯ ಅ ನಿಟ್ಟಿನಲ್ಲಿ ಕಮ್ಯುನಿಸ್ಟರು ಬದ್ದತೆ ಮತ್ತು ಪ್ರಮಾಣಿಕತೆಯಿಂದ ದುಡಿಯುತ್ತಿದ್ದಾರೆ, ಜನ ಚಳುವಳಿಗಳನ್ನು ಕಟ್ಟುತ್ತಿದ್ದಾರೆ , ಅಂತಹ ಚಳುವಳಿಯ ಪ್ರಮಾಣಿಕ ಸೈನಿಕ ಕಾಂ. ಬಯ್ಯಾರೆಡ್ಡಿ ಅವರ  ಸಾವು ತುಂಬಲಾರದ ನಷ್ಟ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಯು. ಬಸವರಾಜು ಅವರು ಅಭಿಪ್ರಾಯ ಪಟ್ಟರು.

ಫ್ರೆ.02 ರಂದು ನಗರದ ಜನ ಚಳುವಳಿ ಕೇಂದ್ರದಲ್ಲಿ ಸಿಐಟಿಯು, ಸಿಪಿಎಂ, ಮತ್ತು ಪ್ರಾಂತ ರೈತ ಸಂಘಗಳು ಜಂಟಿಯಾಗಿ ಅಯೊಜಿಸಿದ್ದ ಬಯ್ಯಾರೆಡ್ಡಿಅವರು ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಿಂತಕ ಸಿ.ಯತಿರಾಜು ಅವರು ಮಾತನಾಡಿ ಬಯ್ಯಾರೆಡ್ಡಿಯವರನ್ನು ವಿದ್ಯಾರ್ಥಿ ಜೀವನದಿಂದ ಬಲ್ಲೆ, ಅವರಲ್ಲಿದ್ದ ವಿಶಾಲ ಜನ ಚಳುವಳಿ ಕಟ್ಟುವ ಬದ್ದತೆಯು ಅನುಕರಣಿಯ ಎಂದರು.

ಇದನ್ನೂ ಓದಿ :ಡ್ರೋನ್‌ ಬಳಸಿ ಚೀನಾದಲ್ಲಿ ಹೈಟೆಕ್‌ ಫುಡ್‌ ಡೆಲಿವರಿ ವ್ಯವಸ್ಥೆ 

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಎ. ಗೊವಿಂದರಾಜು ಅವರು ಮಾತಾಡಿ ಬಯ್ಯಾರೆಡ್ಡಿ ಕಳೆದ 8-10 ವರ್ಷಗಳಿಂದ ಪರಿಚಿತರು, ಐಕ್ಯ ಚಳುವಳಿಗಳಲ್ಲಿ ಬಯ್ಯಾರೆಡ್ಡಿಅವರು ಸಂಯುಕ್ತ ಹೋರಾಟ ಕರ್ನಾಟಕವನ್ನುಕಟ್ಟಲು ಶ್ರಮಿಸಿದ ನಿಜ ಜನ ನಾಯಕ, ಅವರ ಅಗಲಿಕೆಗೆ ಜನ ಚಳುವಳಿಗಳಿಗೆ ನಷ್ಟವನ್ನು ಉಂಟುಮಾಡಿದೆ ಎಂದರು.‌

ಬಯ್ಯಾರೆಡ್ಡಿಯವರ ಬಾಲ್ಯದ ಸ್ನೆಹಿತ ವಕೀಲರಾದ ಸತ್ಯನಾರಾಯಣ್‌ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ  ಸೈಯದ್ ಮುಜೀಬ್‌ ವಹಿಸಿದ್ದರು. ಪ್ರಾಂತರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜ್ಜಪ್ಪ.ಕಟ್ಟಡ ಕಾರ್ಮಿಕರ ಸಂಘ ಜಿಲ್ಲಾ ಅಧ್ಯಕ್ಷರಾದ ಬಿ. ಉಮೇಶ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಕಮಲ, ಸಿಪಿಎಂ ಜಿಲಾ ಕಾರ್ಯಧರ್ಶಿ ಎನ್, ಕೆ. ಸುಬ್ರಮಣ್ಯ, ಮಾತನಾಡಿದರು ವೇದಿಕೆಯಲ್ಲಿ ಗೋವಿಂದರಾಜು, ಪ್ರಾಂತರೈತ ಸಂಘದ ಚನ್ನಬಸಪ್ಪ, ಜನವಾದಿ ಮಹಿಳಾ ಸಂಘಟನೆಯ ಟಿ. ಅರ್. ಕಲ್ಪನಾ, ಸುಜಿತ್ ನಾಯಕ್, ಕಲಿಲ್, ಶಿವಣ್ಣ ಮತ್ತಿತರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *