ಉಚಿತ ಲಸಿಕೀಕರಣ ಮುಂದೂಡಿ ಯುವಜನರನ್ನು ಖಾಸಗಿ ಆಸ್ಪತ್ರೆಯಲ್ಲಿ ಹಣಕೊಟ್ಟು ಕೊಂಡುಕೊಳ್ಳುವಂತೆ ಮಾಡಿದೆ

ಬೆಂಗಳೂರು : ಮೇ ಒಂದರಂದು ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ಉದ್ಘಾಟಿಸಿರುವ 18 ವಷ೯ ಮೇಲ್ಪಟ್ಟವರಿಗೆ ಲಸಕೀಕರಣ ಮುಂದೂಡುತ್ತಾ ಖಾಸಗಿ ಸಂಸ್ಥೆಗಳಲ್ಲಿ ಲಭ್ಯವಿರುವ ಪಾವತಿಸಿ ಬಳಸಿ ಲಸಿಕೆ ಎಡೆಗೆ ರಾಜ್ಯ ಸಕಾ೯ರವು ಯುವಜನರನ್ನು ದೂಡುತ್ತಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ್೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.

ಕೇಂದ್ರ ಸರ್ಕಾರವು 18 ವಷ೯ ಮೇಲ್ಪಟ್ಟವರಿಗೆ ಖಾಸಗಿ ಸಂಸ್ಥೆಗಳಲ್ಲಿ ಲಸಿಕೆ ಲಭ್ಯವಿದೆ ಎಂದು ಈ ಹಿಂದೆಯೆ ಸ್ಪಷ್ಟವಾಗಿ ಪ್ರಕಟಿಸಿದೆ. ಜನತೆಯ ಒತ್ತಾಯದಂತೆ ಉಚಿತ ಲಸಿಕೆ ನೀಡುವ ಪ್ರಕಟಣೆ ಮಾಡಿರುವ ರಾಜ್ಯ ಸಕಾ೯ರವು ನಿರಂತರವಾಗಿ ಸಾಮೂಹಿಕ ಲಸಕೀಕರಣ ಮುಂದೂಡುತ್ತಾ ಅನಿವಾರ್ಯವಾಗಿ ಯುವಜನತೆ ಖಾಸಗಿ ಸಂಸ್ಥೆಗಳಲ್ಲಿ ಪ್ರತಿ ಡೋಸ್ ಗೆ 1300 ರೂ ಪಾವತಿಸಿ ಪಡೆಯವಂತ ಅನಿವಾರ್ಯತೆ ನಿಮಿ೯ಸಿದೆ.
ಈ ಮೂಲಕ ಖಾಸಗಿ ಸಂಸ್ಥೆಗಳ ಲಾಭಿಗೆ ನೆರವಾಗಿರುವ ರಾಜ್ಯ ಸಕಾ೯ರವು ತಾನು ನುಡಿದಂತೆ ನಡೆಯದೆ ಉಚಿತ ಲಸಿಕೆಯ ಭರವಸೆ ನೀಡಿ ಅಗತ್ಯ ಲಸಿಕೆಯನ್ನು ಸಕಾ೯ರಿ ಆಸ್ಪತ್ರೆಗಳಿಗೆ ಖಾತ್ರಿ ಪಡಿಸದೆ ಖಾಸಗಿ ಸಂಸ್ಥೆಗಳು ಲಾಭ ಮಾಡಲು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸಕಾ೯ರಗಳು ಅವಕಾಶ ಕಲ್ಪಿಸಿವೆ ಎಂದು,  ಸಿಪಿಐಎಂ ಬೆಂ.ದಕ್ಷಿಣ  ಜಿಲ್ಲಾ ಕಾರ್ಯದರ್ಶಿ ಕೆ. ಎನ್. ಉಮೇಶ್ ಆರೋಪಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಲಸಿಕೆ ಸಕಾ೯ರಿ ಆಸ್ಪತ್ರೆಗಳಲ್ಲಿ ಮಾತ್ರ ಏಕೆ ಲಭ್ಯವಾಗುತ್ತಿಲ್ಲ ಎಂಬ ಜನತೆಯ ಪ್ರಶ್ನೆಗೆ ರಾಜ್ಯ ಸಖಾ೯ರವು ಉತ್ತರಿಸಬೇಕೆಂದು ಸಿಪಿಐಎಂ ಬೆಂ.ಉತ್ತರ ಜಿಲ್ಲಾ ಕಾಯ೯ದಶಿ೯,ಎನ್.ಪ್ರತಾಪ್ ಸಿಂಹ ಪ್ರಶ್ನಿಸಿದ್ದು, ಉಚಿತ ಸಾವ೯ತ್ರಿಕ ಲಸಿಕೆ ಒದಗಿಸಿ ಜೀವ ಉಳಿಸಲು ರಾಜ್ಯ ಸರಕಾರ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *