ಸಿಪಿಐಎಂ ಅಭ್ಯರ್ಥಿಗೆ, ಕೂಡಿಟ್ಟ ಹಣ ದೇಣಿಗೆ ನೀಡಿದ ವಿದ್ಯಾರ್ಥಿನಿ

ಬಾಗೇಪಲ್ಲಿ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿ ಆರಂಭವಾಗಿದೆ.  ಅಖಾಡಕ್ಕೆ ಧುಮುಕಿರುವ ಅಭ್ಯರ್ಥಿಗಳು ಗೆಲ್ಲಲು ಹಣದ ಹೊಳೆಯನ್ನೆ ಹರಿಸುತ್ತಿದ್ದಾರೆ. ಮತದಾರರ ಮನವೊಲಿಸಲು ಅಭ್ಯರ್ಥಿಗಳು ಕೋಟಿ ಕೋಟಿ ಹಣ ಖರ್ಚು ಮಾಡುತ್ತಾರೆ. ಆದ್ರೆ, ಅದೊಂದು ಕ್ಷೇತ್ರದಲ್ಲಿ ಮಾತ್ರ ಆ ಪಕ್ಷದ ಅಭ್ಯರ್ಥಿಗೆ ಮತದಾರರೇ ಹಣ ಕೊಟ್ಟು ಚುನಾವಣೆಯ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಹೌದು, ಇಂತಹದ್ದೊಂದು ಅಪರೂಪದ ಘಟನೆಗೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಸಾಕ್ಷಿಯಾಗಿದೆ.  ಸಿಪಿಐಎಂ ಅಭ್ಯರ್ಥಿ ಡಾ. ಅನೀಲ್‌ ಕುಮಾರ್‌ಗೆ ಜನರು ಹಣ ನೀಡುವ ಮೂಲಕ ಚುನಾವಣೆಯ ಖರ್ಚುವೆಚ್ಚಗಳಿಗೆ ಸಹಾಯ ಮಾಡುತ್ತಿದ್ದಾರೆ.  ಸಿಪಿಐಎಂ ಪಕ್ಷ ಎಲ್ಲಾ ಚುನಾವಣೆಗಳಲ್ಲೂ ಮತದಾರರಿಂದ ಸಹಾಯ ಪಡೆದು ಚುನಾವಣೆಗಳನ್ನು ನಡೆಸುತ್ತಾ ಬಂದಿದೆ.

ಡಾಕ್ಟರ್ ಅನಿಲ್ ಕುಮಾರ್ ರವರು ಬಾಗೇಪಲ್ಲಿ ಪಟ್ಟಣದ ಹಾಗೂ ಸುತ್ತಮುತ್ತಲಿನ ಜನರಿಗೆ ಒಳ್ಳೆಯ ಉತ್ತಮವಾದ ಆರೋಗ್ಯ ಸೇವೆ ಸಲ್ಲಿಸುತ್ತಾ ಹೆಚ್ಚಿನ ಜನಸಾಮಾನ್ಯರ ಪ್ರೀತಿಗೆ ಪಾತ್ರರಾಗಿ ಸಮಾಜ ಸೇವಕರಾಗಿ ಜನಾನುರಾಗಿಯಾಗಿ ಒಳ್ಳೆಯ ಹೆಸರನ್ನು ಗಳಿಸಿರುತ್ತಾರೆ . ಕೋವಿಡ್‌ ಸಂದರ್ಭದಲ್ಲಿ ಪ್ರತಿ ಹಳ್ಳಿಗೂ ಸಂಚರಿಸಿ ಉಚಿತವಾಗಿ ವೈಧ್ಯಕೀಯ ಸೇವೆಯನ್ನು ಸಲ್ಲಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಇವರನ್ನು ಗೆಲ್ಲಿಸಬೇಕೆಂದು ಸಾರ್ವಜನಿಕರು ತಮ್ಮ ಕೈಲಾದಷ್ಟು ಹಣಕಾಸಿನ ಸೇವೆಯನ್ನು ನೀಡುತ್ತಿದ್ದಾರೆ.

ಬಾಗೇಪಲ್ಲಿಯ ಉಗ್ರಾಣಪಲ್ಲಿಯಲ್ಲಿ ವಾಸುಸುತ್ತಿರುವ ರೈತ ಕುಟುಂಬದ  ಎಂ.ಎಸ್‌. ಶ್ರೀರಾಮ ರೆಡ್ಡಿಯವರ ಮಗಳಾದ ಎಂ.ಎಸ್‌ ನಿತ್ಯಶ್ರೀ ಅನೀಲ್‌ ಕುಮಾರ್‌ ರವರಿಗೆ 10 ಸಾವಿರ ರೂಪಾಯಿಗಳ ದೇಣಿಗೆಯನ್ನು ನೀಡಿದ್ದಾರೆ. ಬಾಗೇಪಲ್ಲಿಯ ಬಿಜಿಎಸ್‌ ಶಾಲೆಯಲ್ಲಿ 9ನೇ ತರಗತಿ ಉತ್ತೀರ್ಣಳಾಗಿರು ನಿತ್ಯಶ್ರೀ,  ಡಾಕ್ಟರ್ ಅನಿಲ್ ಕುಮಾರ್ ಗೆಲ್ಲಲು ತಾನು ಕೂಡಿಟ್ಟಿರುವ ಹಣವನ್ನು ನೀಡಿದ್ದಾಳೆ.

ಇದನ್ನೂ ಓದಿಸಿಪಿಐಎಂ ಅಭ್ಯರ್ಥಿಗೆ, ಕೂಡಿಟ್ಟ ಹಣ ದೇಣಿಗೆ ನೀಡಿದ ವಿದ್ಯಾರ್ಥಿನಿ

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ನಿತ್ಯಶ್ರೀ,  ಕಳೆದ 5 ವರ್ಷದಿಂದ  ಹಿರಿಯರು ಕೊಡುತ್ತಿರುವ ಹಣವನ್ನು ಕೂಡಿಟ್ಟು, ಈ ಬಾರಿಯ ಚುನಾವಣೆಯಲ್ಲಿ ಉತ್ತಮವಾದ ವ್ಯಕ್ತಿಗೆ ನೀಡಬೇಕು ಎಂದು ನಿರ್ಧರಿಸಿದ್ದೆ. ಅದರಂತೆ ಡಾ. ಅನೀಲ್‌ರವರು ಉತ್ತಮ ಕೆಲಸ ಮಾಡುವ ವ್ಯಕ್ತಿಯಾಗಿದ್ದಾರೆ.  ಶಿಕ್ಷಣ ಕ್ಷೇತ್ರವನ್ನು ಹಾಗೂ ಆರೋಗ್ಯ ಕ್ಷೇತ್ರವನ್ನು ಬಾಗೇಪಲ್ಲಿಯಲ್ಲಿ ಅವರು ಬಲಪಡಿಸುತ್ತಾರೆ ಎಂದು ಅವರಿಗೆ ಹಣ ನೀಡುತ್ತಿದ್ದೇನೆ. ಇಂತಹ ವ್ಯಕ್ತಿಗಳು ಗೆಲ್ಲಬೇಕು ಆಗ ಕ್ಷೇತ್ರ ಮತ್ತು ರಾಜ್ಯ ಅಭಿವೃದ್ಧಿಯಾಗುತ್ತದೆ ಎಂದು ನಿತ್ಯಶ್ರೀ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದರೆ, ಕೈಯಲ್ಲಿ ಕೋಟಿ ಕೋಟಿ ಹಣ ಇರಬೇಕು. ಜನಬಲಕ್ಕಿಂತ ಹೆಚ್ಚಾಗಿ ಹಣ ಬಲ ಇರಬೇಕು ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ, ಇದರ ನಡುವೆ ಜನರಿಂದ ಹಣ ಸಂಗ್ರಹಿಸಿ ಗೆದ್ದು ಬರುವವರು ಇನ್ನೂ ಇದ್ದಾರೆ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನೂ ತನ್ನ ಮೂಲ ಗುಣವನ್ನು ಉಳಿಸಿಕೊಂಡಿದೆ ಎಂದೇ ಅರ್ಥ. ಚುನಾವಣೆಯಲ್ಲಿ ಮತದಾರರಿಗೆ ಹಣ-ಹೆಂಡ, ಸೀರೆ, ಮಿಕ್ಸಿ, ಕುಕ್ಕರ್‌…ಹೀಗೆ ನಾನಾನಾ ಅಮಿಷಗಳನ್ನು ನೀಡುವ ಸಲುವಾಗಿಯೇ ಕೋಟಿ-ಕೋಟಿ ಹಣ ಖರ್ಚು ಮಾಡುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ.

ಇದು ಒಂದು ಕಡೆ ‘ನಾವು ಹಣ ಸುರಿದು ಮತಗಳನ್ನು ಖರೀದಿಸಿ ಅಧಿಕಾರಕ್ಕೆ ಬರುವುದಿಲ್ಲ’ ಎನ್ನುವ ಧೋರಣೆಯನ್ನು ಬಿಂಬಿಸಿದರೆ, ಮತ್ತೊಂದು ಕಡೆ ಹಣ ಕೊಟ್ಟ ಜನರಿಗೆ ಆ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಗಾರಿಕೆಯೂ ಬರುತ್ತದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಚುನಾವಣಾ ಮಾದರಿ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

 

Donate Janashakthi Media

Leave a Reply

Your email address will not be published. Required fields are marked *