ಹೊಸದಿಲ್ಲಿ: ಫೆಬ್ರವರಿ 14ರಂದು “ದನ ಅಪ್ಪಿಕೋ ದಿನ” ಆಚರಿಸುವಂತೆ ಕರೆ ನೀಡಿದ್ದ ಮನವಿಯನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಶುಕ್ರವಾರ ಹಿಂಪಡೆದಿದೆ. ಸಕ್ಷಮ ಪ್ರಾಧಿಕಾರ ಮತ್ತು ಮೀನುಗಾರಿಕೆ ಮತ್ತು ಪಶು ಸಂಗೋಪನಾ ಸಚಿವಾಲಯದ ನಿರ್ದೇಶನದಂತೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಸುತ್ತೋಲೆಯನ್ನು ಹಿಂಪಡೆದಿದೆ.
ಇದನ್ನೂ ಓದಿ : ಫೆ. 14ಕ್ಕೆ, ‘ಅಪ್ಪಿಕೋ ದನ’ (ಕೌ ಹಗ್ ಡೇ) ಎಂದು ಆಚರಿಸಿ : ಸರ್ಕಾರದಿಂದ ವಿವಾದಾತ್ಮಕ ಸುತ್ತೋಲೆ
ಪ್ರೇಮಿಗಳ ದಿನವಾದ ಫೆ. 14ರಂದ ಹಸುಗಳನ್ನು ಅಪ್ಪಿಕೊಳ್ಳುವ ಮೂಲಕ ಕೌ ಹಗ್ ಡೇ ಆಚರಿಸಬೇಕು ಎಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಈ ಹಿಂದೆ ಸುತ್ತೋಲೆ ಹೊರಡಿಸಿತ್ತು, ಈ ಬಗ್ಗೆ ಆಕ್ಷೇಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ವಿಷಯ ವಿವಾದಾತ್ಮಕವಾಗಿ ಪರಿಣಮಿಸಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್‌ಗಳ ಸುರಿಮಳೆಯಾಗಿತ್ತು. ಬಹಳಷ್ಟು ಜನ ಕಾರ್ಟೂನ್ ಚಿತ್ರಗಳ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಈ ಕರೆಯನ್ನು ಹಿಂಪಡೆಯಲಾಗಿದೆ.
ಇದು ಹುಸಿ ಹಿಂದೂತ್ವ ಮತ್ತು ಹುಸಿ ದೇಶಭಕ್ತಿ ಎಂದು ಕಿಡಿಕಾರಿದ್ದರು. ಇನ್ನು, ಸಿಪಿಐ(ಎಂ) ನಾಯಕ ಎಳಮರಮ್ ಕರೀಂ ಕೂಡ ಅಪ್ಪಿಕೋ ದನ ದಿನವನ್ನು ಹಾಸ್ಯಾಸ್ಪದ ಪರಿಕಲ್ಪನೆ ಮತ್ತು ದೇಶಕ್ಕೆ ಅವಮಾನ ಎಂದು ಕಿಡಿಕಾರಿದ್ದರು. ಪ್ರಮುಖ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಅಪ್ಪಿಕೋ ದನ ದಿನ ಆಚರಣೆಗೆ ಕರೆ ನೀಡಿದ್ದಾರೆ. ನಿರುದ್ಯೋಗ ಮತ್ತು ಹಣದುಬ್ಬರದಂತಹ ಸಮಸ್ಯೆಗಳ ಕಡೆ ಇರುವ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಇದಾಗಿತ್ತು ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.