ಬೆಂಗಳೂರು : ಕೊರೊನಾ ಎರಡನೇ ಅಲೆ ಅನೇಕ ತಲ್ಲಣಗಳನ್ನು, ಸಾವು ನೋವುಗಳನ್ನು ಸೃಷ್ಟಿಸಿದೆ. ಇದೀಗ ನಮ್ಮ ದೇಶದ ಹೆಮ್ಮೆಯ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಕೂಡ ಕೋವಿಡ್ ಅಲೆಗೆ ತತ್ತರಿಸಿದ್ದು 100 ಕ್ಕೂ ಹೆಚ್ಚು ಕಾರ್ಮಿಕರು ಕೋವಿಡ್ ಗೆ ಬಲಿಯಾಗಿದ್ದು ನಾಲ್ಕು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೋವಿಡ್ ಪೀಡಿತರಾಗಿದ್ದಾರೆ.
ಎಚ್ಎಎಲ್ ನಮ್ಮ ದೇಶದ ಹೆಮ್ಮೆ ಇಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ದೊಡ್ಡ ಜವಬ್ದಾರಿ ಮತ್ತು ಕರ್ತವ್ಯವಿರುತ್ತದೆ. ಜಾಗತಿಕ ಮಟ್ಟದಲ್ಲಿ ಎಚ್ಎಎಲ್ ಗೆ ದೊಡ್ಡ ಹೆಸರು ಬರಲು ಕಾರ್ಮಿಕರ ಶ್ರಮ ದೊಡ್ಡದಿದೆ. ಇಂತಹ ಸಂಸ್ಥೆ ಕೋವಿಡ್ ಕರಿ ಛಾಯೆಗೆ ತತ್ತರಿಸಿದ್ದು ನೂರಕ್ಕೂ ಹೆಚ್ಚು ಕಾರ್ಮಿಕರು ಕೋವಿಡ್ ಬಲಿ ತೆಗೆದುಕೊಂಡಿದೆ ಎಂದು ಸಂಸ್ಥೆ ಎಚ್ಎಎಲ್ ಸಂಸ್ಥೆ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ. ನಾಲ್ಕು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೋವಿಡ್ ಸೋಂಕಿನಿಂದ ಪರದಾಡುತ್ತಿದ್ದಾರೆ. ಸಾಕಷ್ಟು ಮುಂಜಾಗೃತ ಕ್ರಮ ವಹಿಸಿದ್ದರು ಇಷ್ಟೊಂದು ಸಾವು ನೋವು ಸಂಭವಿಸಿರುವುದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ : ರಿಯಲ್ ವಾರಿಯರ್ಸ್ಗಳಿಗೆ ಇಲ್ಲ ಭದ್ರೆತೆ : ಮೂರು ತಿಂಗಳಿಂದ ವೇತನವೂ ಇಲ್ಲ
ಎಚ್ಎಎಲ್ ದೇಶದ ರಕ್ಷಣೆಯ ಜೊತೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಜನರ ರಕ್ಷಣೆಗೂ ಮುಂದಾಗಿತ್ತು. ಎಚ್ಎಎಲ್ ಆಕ್ಸಿಜನ್ ಬೆಡ್, ವೈದ್ಯಕೀಯ ಸಲಕರಣೆಗಳನ್ನು ಒದಗಿಸುವ ಮೂಲಕ ವಿವಿಧ ರಾಜ್ಯಗಳ ಜೊತೆಗೆ ಕೈಜೋಡಿಸಿ ಕೋವಿಡ್ ಹೋರಾಟಕ್ಕೆ ಕೈಜೋಡಿಸಿತ್ತು. ಬೆಂಗಳೂರಿನಲ್ಲಿ ಎಚ್ಎಎಲ್ ವೆಂಟಿಲೇಟರ್ ಮತ್ತು ಆಮ್ಲಜನಕದ ವ್ಯವಸ್ಥೆ ಇರುವ 180 ಹಾಸಿಗೆ ಇರುವ ಕೋವಿಡ್ ಕೇಂದ್ರವನ್ನು ನಿರ್ಮಿಸಿತ್ತು. ಒಡಿಶಾದಲ್ಲಿ 70 ಹಾಸಿಗೆಗಳು ಮತ್ತು ಮಹಾರಾಷ್ಟ್ರದ ನಾಸಿಕ್ನಲ್ಲಿ 40 ಹಾಸಿಗೆ ಸಾಮರ್ಥ್ಯದ ಇಂಥದ್ದೇ ಆಸ್ಪತ್ರೆಗಳು ನಿರ್ಮಾಣವಾಗಿವೆ. ಉತ್ತರ ಪ್ರದೇಶದ ಲಖನೌನಲ್ಲಿ ಎಚ್ಎಎಲ್ 250 ಬೆಡ್ಗಳ ಆಸ್ಪತ್ರೆ ನಿರ್ಮಿಸುತ್ತಿದೆ. ಹಾಗೆಯೇ ಕೊರೋನಾದಿಂದ ತೀವ್ರ ಬಾಧಿತವಾಗಿರುವ ಬೆಂಗಳೂರು ಮತ್ತು ಲಖನೌ ನಗರಗಳಿಗೆ ಹೆಚ್ಚಿನ ವೆಂಟಿಲೇಟರ್ ಮತ್ತು ಆಮ್ಲಜನಕವನ್ನು ಎಚ್ಎಎಲ್ ಒದಗಿಸಿತ್ತು. ಇದನ್ನೆಲ್ಲ ಕಾರ್ಯನಿರ್ವಹಿಸಿದ್ದ ಹೆಮ್ಮ ಅಲ್ಲಿಯ ಕಾರ್ಮಿಕರದ್ದು. ಇತರ ಜನರನ್ನು ಉಳಿಸಿ ನೂರಕ್ಕೂ ಹೆಚ್ಚು ಜನ ಕಾರ್ಮಿಕರು ಹುತಾತ್ಮರಾಗುವ ಮೂಲಕ ಅಲ್ಲಿಯೂ ದೇಶಪ್ರೇಮವನ್ನು ಮೆರೆದಿದ್ದಾರೆ. ಅವರ ಕುಟಂಬಗಳಿಗೆ ಸಹಾಯ ಮಾಡಬೇಕು, ಹಾಗೂ ಮೃತ ಕುಟುಂಬದ ಸದಸ್ಯರಿಗೆ ಎಚ್ಎಎಲ್ ನಲ್ಲಿ ಇಲ್ಲವೆ ಸರಕಾರಿ ಕೆಲಸ ನೀಡಬೇಕು ಎಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ.
ಹೆಲಿಕಾಪ್ಟರ್ ಅಂತಿಮ ನಿರ್ಮಾಣ ಕೇಂದ್ರದ ಉದ್ಯೋಗಿಗಳಲ್ಲಿ ಕೊರೊನಾವೈರಸ್ ಸೋಂಕು ತಗುಲಿದ್ದ ಹಿನ್ನೆಲೆ ವಿಮಾನ ತರಬೇತಿಯನ್ನು ನಿಲ್ಲಿಸಲಾಗಿದೆ. 15 ದಿನಗಳ ಕಾಲ ಕಾರ್ಮಿಕರಿಗೆ ರಜೆಯನ್ನು ನೀಡಲಾಗಿತ್ತು. ಬೆಂಗಳೂರು, ನಾಸಿಕ್, ಕಾನ್ಪುರ್ ಮತ್ತು ಲಕ್ನೋ ಕೇಂದ್ರಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಮೇ ತಿಂಗಳಿನಲ್ಲಿ ಎರಡು ವಾರ ಕಾರ್ಯಾಚರಣೆಯನ್ನು ಬಂದ್ ಮಾಡಲಾಗಿದೆ. “ಆರ್ಥಿಕ ವರ್ಷದ ಮೊದಲ ತ್ರೈಮಾಸಿಕವು ನಿರಾಶಾದಾಯಕವಾಗಿದೆ. ಮುಂದಿನ ವಾರದ ವೇಳೆಗೆ ಪರಿಸ್ಥಿತಿ ಸುಧಾರಿಸಿಕೊಳ್ಳಲಿದ್ದು, ಕಳೆದ ಬಾರಿಯಂತೆ ಚೇತರಿಕೆ ಕಂಡು ಬರಲಿದೆ” ಎಂದು ಹೆಚ್ಎಎಲ್ ನಿರ್ದೇಶಕ ಆರ್ ಮಾಧವನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.