ಕೋವಿಡ್ ಮಾಹಿತಿ : ಎರಡು ಲಕ್ಷ ಪರೀಕ್ಷೆ – 21 ಸಾವಿರ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು ಕೋವಿಡ್ ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗಿದೆ. ರಾಜ್ಯದಲ್ಲಿ 21,390 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ನಗರದಲ್ಲಿಯೇ 15,617 ಹೊಸ ಪ್ರಕರಣ ಪತ್ತೆಯಾಗಿದೆ. ರಾಜ್ಯದಲ್ಲಿ ಬುಧವಾರ 10 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಪಾಸಿಟಿವಿಟಿ ದರ 10.96% ಗೆ ಏರಿಕೆಯಾಗಿದ್ದು, ಹೊಸ ಸವಾಲು ಎದುರಾಗಿದೆ. ಇಂದು 1,541 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. ರಾಜ್ಯದಲ್ಲಿ 93,009 ಸಕ್ರಿಯ ಪ್ರಕರಣಗಲಿದ್ದು, ಬೆಂಗಳೂರಿನಲ್ಲಿ 73 ಸಾವಿರಕ್ಕೊ ಹೆಚ್ಚು ಪ್ರಕರಣಗಳಿವೆ.

10 ಮಂದಿ ಸಾವನ್ನಪ್ಪಿದವರ ಪೈಕಿ 06 ಮಂದಿ ಬೆಂಗಳೂರಿನವರಾಗಿದ್ದಾರೆ. 37,073 ಆಂಟಿಜೆನ್, 157974 ಆರ್‌ಟಿಪಿಸಿಆರ್ ಸೇರಿದಂತೆ 1,95,047 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು?; ಬೆಂಗಳೂರು ನಗರದಲ್ಲಿ 15617 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಬಳ್ಳಾರಿ 180, ಬೆಳಗಾವಿ 269, ಬೆಂಗಳೂರು ಗ್ರಾಮಾಂತರ 310, ಬೀದರ್ 111, ಚಾಮರಾಜನಗರ 106, ಚಿಕ್ಕಬಳ್ಳಾಪುರ 141, ದಕ್ಷಿಣ ಕನ್ನಡ 519, ದಾವಣಗೆರೆ 137, ಧಾರವಾಡ 264, ಹಾಸನ 409 ಹೊಸ ಪ್ರಕರಣ ದಾಖಲಾಗಿದೆ.

ಕಲಬುರಗಿ 188, ಕೋಲಾರ 282, ಮಂಡ್ಯ 319, ಮೈಸೂರು 524, ರಾಮನಗರ 135, ಶಿವಮೊಗ್ಗ 201, ತುಮಕೂರು 594, ಉಡುಪಿ 361, ಉತ್ತರ ಕನ್ನಡ 199 ಹೊಸ ಪ್ರಕರಣಗಳು ಪತ್ತೆಯಾಗಿದೆ.

ಯಾದಗಿರಿ 10, ವಿಜಯಪುರ 64, ರಾಯಚೂರು 91, ಕೊಪ್ಪಳ 47, ಕೊಡಗು 69, ಹಾವೇರಿ 14, ಗದಗ 43, ಚಿತ್ರದುರ್ಗ 86, ಚಿಕ್ಕಮಗಳೂರು 87, ಬಾಗಲಕೋಟೆ 13 ಪ್ರಕರಣ ಪತ್ತೆಯಾಗಿವೆ. ರಾಜ್ಯದಲ್ಲಿನ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 479 ಆಗಿದೆ.

Donate Janashakthi Media

Leave a Reply

Your email address will not be published. Required fields are marked *