ಮಧುರೈ: ಕೋವಿಡ್-19 ಸೋಂಕಿಗೆ ಹೆದರಿ ಕುಟುಂಬದ ಸದಸ್ಯರೊಂದಿಗೆ ವಿಷ ಸೇವಿಸಿದ ತಾಯಿ ಹಾಗೂ ಆಕೆಯ 3 ವರ್ಷದ ಮಗು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ನಡೆದಿದೆ.
ಸೋಂಕಿನ ಭಯದಿಂದ ಮಹಿಳೆ, ಆಕೆಯ ತಾಯಿ ಹಾಗೂ ಸಹೋದರರು ಸೇರಿದಂತೆ ಕುಟುಂಬದ 5 ಮಂದಿ ವಿಷ ಸೇವಿಸಿದ್ದಾರೆ. ವಿಷ ಸೇವಿಸಿದವರಲ್ಲಿ ಮೂವರು ಬದುಕುಳಿದಿದ್ದು, ಮಹಿಳೆ ಹಾಗೂ ಆಕೆಯ ಮಗು ಸಾವನ್ನದೆ.
ಮೃತ ಮಹಿಳೆ ಜ್ಯೋತಿಕಾ(23)ಳ ತಂದೆ 2021ರ ಡಿಸೆಂಬರ್ ನಲ್ಲಿ ಸಹಜ ಸಾವನ್ನಪ್ಪಿದ್ದರು. ಇದರಿಂದ ಇಡೀ ಕುಟುಂಬವೇ ನೊಂದಿತ್ತು. ಜ್ಯೋತಿಕಾ ಕೂಡಾ ತನ್ನ ಪತಿಯಿಂದ ಬೇರ್ಪಟ್ಟು, ಮಗುವಿನೊಂದಿಗೆ ತನ್ನ ತವರು ಮನೆಯಲ್ಲಿ ವಾಸವಿದ್ದಳು.
ಜನವರಿ 8 ರಂದು ಜ್ಯೋತಿಕಾಳಿಗೆ ಕೋವಿಡ್ ಸೋಂಕು ತಗುಲಿರುವ ತಿಳಿದು ಬಂದಿದೆ., ಈ ವಿಚಾರವನ್ನು ಮನೆಯವರಿಗೆ ತಿಳಿಸಿ, ಅದು ಹರಡುವ ಭೀತಿಯಿಂದ ಮನೆಯವರು ವಿಷ ಸೇವಿಸಿದ್ದಾರೆ.
ವಿಷ ಸೇವಿಸಿದ ವಿಚಾರ ನೆರೆಹೊರೆಯವರಿಗೆ ಮರುದಿನ ತಿಳಿದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಜ್ಯೋತಿಕಾ ಹಾಗೂ ಆಕೆಯ ಮಗು ಸಾವನ್ನಪ್ಪಿದ್ದಾರೆ.
ಕೋವಿಡ್-19ಗೆ ಹೆದರಿ ತಮ್ಮ ಜೀವನವನ್ನು ಕೊನೆಗೊಳಿಸುವ ನಿರ್ಧಾರ ಮಾಡಿರುವುದಾಗಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ನಿವಾಸಿಗಳಿಗೆ ಕೋವಿಡ್ಗೆ ಹೆದರುವ ಅಗತ್ಯ ಇಲ್ಲ. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಸಹಾಯ ಪಡೆದುಕೊಳ್ಳಬೇಕು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.